Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪತ್ನಿ, ಆಕೆಯ ಪ್ರಿಯಕರನನ್ನು ಕೊಂದು ರುಂಡಗಳೊಂದಿಗೆ ಪೊಲೀಸ್ ಠಾಣೆಗೆ ಶರಣಾದ ಪತಿ: ತಮಿಳುನಾಡಿನಲ್ಲಿ ಭೀಕರ ಘಟನೆ

ಚೆನ್ನೈ: ಪತ್ನಿಮತ್ತವಳ ಪ್ರಿಯಕರನನ್ನು ಕೊಂದು, ರುಂಡಗಳೊಂದಿಗೆ ಪೊಲೀಸ್​ ಠಾಣೆಗೆ ಬಂದು ವ್ಯಕ್ತಿಯೊಬ್ಬ ಶರಣಾಗಿರುವ ಘಟನೆ ತಮಿಳುನಾಡಿನ ಕಲ್ಲಕುರಿಚಿಯಲ್ಲಿ ನಡೆದಿದೆ. ಮರ ಕಡಿಯುವ ಕೆಲಸ ಮಾಡುವ ಕೊಲಂಜಿ ಎಂಬಾತ ತನ್ನ ಪತ್ನಿ ಲಕ್ಷ್ಮಿಗೆ ತಂಗರಸು ಜೊತೆ ಸಂಬಂಧವಿದೆ ಎಂದು ಶಂಕಿಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಏನೋ ಕೆಲಸವಿದೆ ಹೋಗ್ತಿದ್ದೀನಿ, ಬರೋದು ತುಂಬಾ ತಡವಾಗುತ್ತೆ ಎಂದು ಪತ್ನಿ ಬಳಿ ಹೇಳಿ ಹೊರಟಿದ್ದ ಕೊಲಂಜಿ, ಸ್ವಲ್ಪ ಸಮಯದಲ್ಲೇ ಹಿಂದಿರುಗಿ ಬಂದಿದ್ದಾನೆ. ಮನೆಯ ತಾರಸಿಯಲ್ಲಿ ಇಬ್ಬರೂ ಜತೆಗಿರುವುದನ್ನು ಕಂಡಿದ್ದಾನೆ.ಆಗ ತನಿಗಿದ್ದ ಅನುಮಾನ ಖಾತ್ರಿಯಾದಾಗ ಇಬ್ಬರನ್ನೂ ಕುಡುಗೋಲಿನಿಂದ ಕೊಚ್ಚಿ ಕೊಂದು, ಬಳಿಕ ರುಂಡವನ್ನು ದೇಹದಿಂದ ಬೇರೆ ಮಾಡಿದ್ದಾನೆ. ಅನದ್ನು ಹಿಡಿದು ಪೊಲೀಸ್ ಠಾಣೆಗೆ ಹೋಗಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಆತ ತನ್ನ ದ್ವಿಚಕ್ರ ವಾಹನಕ್ಕೆ ಎರಡೂ ತಲೆಗಳನ್ನು ಕಟ್ಟಿ ವೆಲ್ಲೂರು ಕೇಂದ್ರ ಜೈಲಿಗೆ ಹೋಗಿ ಶರಣಾಗಿದ್ದಾನೆ. ವಂಜಾರಂ ಪೊಲೀಸರು ಮನೆಯಿಂದ ತಲೆ ಇಲ್ಲದ ಶವಗಳನ್ನು ವಶಪಡಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ಸ್ಥಳದ ದೃಶ್ಯಗಳಲ್ಲಿ ತಲೆಯಿಲ್ಲದ ಶವಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಪೊಲೀಸರು ಬಂದಾಗ ಗ್ರಾಮಸ್ಥರು ಮನೆಯ

ಅಪರಾಧ ದೇಶ - ವಿದೇಶ

ಗೇಟೆಡ್ ಸಮುದಾಯದಲ್ಲಿ ಮಹಿಳೆಯ ಭೀಕರ ಕೊಲೆ, ಆಭರಣ, ಹಣ ದೋಚಿ ರಕ್ತಸಿಕ್ತ ಬಟ್ಟೆ ಬಿಟ್ಟು ಪರಾರಿಯಾದ ದುಷ್ಕರ್ಮಿಗಳು

ಹೈದರಾಬಾದ್: ಮಹಿಳೆಯನ್ನು ಕಟ್ಟಿ ಹಾಕಿ, ಕುಕ್ಕರ್​​ನಿಂದ ತಲೆಗೆ ಹೊಡೆದು, ಕತ್ತು ಸೀಳಿ ಕೊಲೆ ಮಾಡಿ, ಬಾತ್​​ ರೂಮ್​ಗೆ ಹೋಗಿ ಸ್ನಾನ ಮಾಡಿ, ಕಳ್ಳ ಅಲ್ಲಿಂದ ಪರಾರಿಯಾಗಿರುವ ಘಟನೆ ಹೈದರಾಬಾದ್​​ನಲ್ಲಿ ನಡೆದಿದೆ. ಇಬ್ಬರು ವ್ಯಕ್ತಿಗಳು ಮನೆಯನ್ನು ಲೂಟಿ ಮಾಡಿ, ಆಕೆಯ ಮನೆಯಲ್ಲಿ ಸ್ನಾನ ಮಾಡಿ, ರಕ್ತಸಿಕ್ತ ಬಟ್ಟೆಗಳನ್ನು ಬಿಟ್ಟು ಅಪರಾಧ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆಯು ಗೇಟೆಡ್ ಸಮುದಾಯದೊಳಗೆ ನಡೆದಿದ್ದು, ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. 50 ವರ್ಷದ ರೇಣು ಅಗರ್ವಾಲ್ ತನ್ನ ಪತಿ ಹಾಗೂ ಮಗನೊಂದಿಗೆ ಸೈಬರಾಬಾದ್‌ನ ಐಟಿ ಕೇಂದ್ರದಲ್ಲಿರುವ ಗೇಟೆಡ್ ಸಮುದಾಯವಾದ ಸ್ವಾನ್

ದೇಶ - ವಿದೇಶ

ನಟ-ಶಾಸಕ ನಂದಮೂರಿ ಬಾಲಕೃಷ್ಣ ಆಸ್ಪತ್ರೆಗೆ ದಾಖಲು; ಆರೋಗ್ಯದ ಬಗ್ಗೆ ಮಾಹಿತಿ ಇಲ್ಲದೆ ಅಭಿಮಾನಿಗಳಲ್ಲಿ ಆತಂಕ

ನಟ, ಶಾಸಕ ನಂದಮೂರಿ ಬಾಲಕೃಷ್ಣ ಅವರಿಗೆ ಅನಾರೋಗ್ಯ ಉಂಟಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಬಾಲಕೃಷ್ಣ ಅವರಿಗೆ ಏನಾಗಿದೆ? ಯಾವ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದ್ದು,

ಅಪರಾಧ ದೇಶ - ವಿದೇಶ

ಆಸ್ಪತ್ರೆಯಿಂದ ಪೊಲೀಸರ ರೈಫಲ್ ಕದ್ದು ಕೈದಿ ಪರಾರಿ, ನಾಲ್ವರು ಸಿಬ್ಬಂದಿ ಅಮಾನತು

ಛತ್ತರ್​ಪುರ: ಕೈದಿ ಯೊಬ್ಬ ಪೊಲೀಸರ ರೈಫಲ್​ ಕದ್ದು ಆಸ್ಪತ್ರೆಯಿಂದ ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದ ಛತ್ತರ್​ಪುರದಲ್ಲಿ ನಡೆದಿದೆ.  ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ನಿದ್ದೆ ಮಾಡುತ್ತಿದ್ದ ಕಾರಣ ಕೈದಿ ಸುಲಭವಾಗಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಆತನನ್ನು ಹಿಡಿದುಕೊಟ್ಟವರಿಗೆ 10 ಸಾವಿರ ರೂ. ಬಹುಮಾನ ಘೋಷಿಸಲಾಗಿದೆ. ಪೊಲೀಸ್ ಅಧಿಕಾರಿಯ ಜೇಬಿನಿಂದ ಕೀ ತೆಗೆದುಕೊಂಡ ಕೈದಿ, ಗೇಟ್ ತೆರೆಯುವ ಮೊದಲು ತನ್ನ ಮೊಬೈಲ್ ಫೋನ್‌ನಲ್ಲಿ ಮಾತನಾಡಿ, ನಂತರ ವಾರ್ಡ್‌ಗೆ ಹೊರಗಿನಿಂದ ಲಾಕ್ ಮಾಡಿ, ಅಧಿಕಾರಿಯ ರೈಫಲ್ ಅನ್ನು ಸಹ ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ಸುದ್ದಿ ತಿಳಿದ ತಕ್ಷಣ, ಎಸ್ಪಿ

ದೇಶ - ವಿದೇಶ

ಬಲಪಂಥೀಯ ಕಾರ್ಯಕರ್ತ ಚಾರ್ಲಿ ಕಿರ್ಕ್‌ಗೆ ಗುಂಡು; ವೇದಿಕೆ ಮೇಲೆ ಟ್ರಂಪ್‌ ಆತ್ಮೀಯನ ತೀವ್ರ ಆಘಾತ

ವಾಷಿಂಗ್ಟನ್‌: ಯುವ ರಿಪಬ್ಲಿಕನ್ ಮತದಾರರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಅಧ್ಯಕ್ಷ ಟ್ರಂಪ್‌ ಅವರ ಆತ್ಮೀಯನನ್ನು (Donald Trump) ಗುಂಡಿಕ್ಕಿ ಕೊಲ್ಲಲಾಗಿದೆ. ಮೆರಿಕದ ಉಟಾವಾ ವ್ಯಾಲಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿದ್ದಾರೆ. ಈ ರಾಜಕೀಯ ಹತ್ಯೆ ಅಮೆರಿಕವನ್ನು ಅಕ್ಷರಶಃ

ದೇಶ - ವಿದೇಶ

ಮಂಗಳನಲ್ಲಿ ಜೀವವಿದ್ದ ಕುರುಹುಗಳು ಪತ್ತೆ: ನಾಸಾದ ಪರ್ಸೀವಿಯರೆನ್ಸ್ ರೋವರ್‌ನಿಂದ ಮಹತ್ವದ ಮಾಹಿತಿ

ನವದೆಹಲಿ: ಭೂಮಿಗೆ ಸಮೀಪವಿರುವ ಹಾಗೂ ಹಲವು ಕೌತುಕಗಳ ಗೂಡಾಗಿರುವ ಮಂಗಳನ ಅಂಗಳದಲ್ಲಿ ಜೀವಿಗಳಿದ್ದವು ಎಂಬುದನ್ನು ಸಾಬೀತುಪಡಿಸಲು ಕೆಲ ಕುರುಹುಗಳು ದೊರೆತಿವೆ. 2021ರಲ್ಲಿ ಮಂಗಳನ ಮಡಿಲಿಗೆ ಇಳಿದ ಅಮೆರಿಕದ ಬಾಹ್ಯಾಕಾಶ ಸಂಸ್ಥೆ(ನಾಸಾ)ಯ ಪರ್ಸೀವಿಯರೆನ್ಸ್‌ ರೋವರ್‌ ಈ ಮಹತ್ವದ

ದೇಶ - ವಿದೇಶ

ಫ್ರಾನ್ಸ್‌: ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ಅಸ್ಥಿರತೆ ವಿರುದ್ಧ ಜನರ ಆಕ್ರೋಶ, 250 ಜನರ ಬಂಧನ

ಪ್ಯಾರಿಸ್‌: ಯುವಕರ ಆಕ್ರೋಶಕ್ಕೆ ಉರುಳಿಬಿದ್ದ ನೇಪಾಳ ಸರ್ಕಾರದ ಕಡೆ ಜಗತ್ತಿನ ಗಮನ ಇರುವ ಹೊತ್ತಿನಲ್ಲಿ, ಫ್ರಾನ್ಸ್‌ನಲ್ಲಿ ಕೂಡ ಅಲ್ಲಿನ ಸರ್ಕಾರದ ವಿರುದ್ಧ ಜನ ದಂಗೆಯೆದ್ದಿದ್ದಾರೆ. ಅಧ್ಯಕ್ಷ ಎಮಾನ್ಯುವಲ್‌ ಮ್ಯಾಕ್ರನ್‌ ಹಾಗೂ ಅವರಿಂದ ನೇಮಕ ಆಗುತ್ತಿರುವ ಪ್ರಧಾನಿಗಳ

ದೇಶ - ವಿದೇಶ

13 ವರ್ಷಗಳ ಹಿಂದಿನ ಲೈಂಗಿಕ ದೌರ್ಜನ್ಯ ಪ್ರಕರಣ; ಎಎಪಿ ಶಾಸಕ ಸೇರಿ 10 ಜನರ ದೋಷ ಸಾಬೀತು

ಚಂಡೀಗಢ: 13 ವರ್ಷಗಳ ಹಿಂದೆ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣವೊಂದರಲ್ಲಿ ಪಂಜಾಬ್‌ನ ಎಎಪಿ ಶಾಸಕ ಮಂಜಿಂದರ್ ಸಿಂಗ್ ಲಾಲ್ಪುರ ಹಾಗೂ ಆರು ಪೊಲೀಸರು ಸೇರಿದಂತೆ ಒಟ್ಟು 10 ಜನರು ದೋಷಿಗಳು ಎಂದು ಸಾಬೀತಾಗಿದ್ದು,

ದೇಶ - ವಿದೇಶ

ಡೊನಾಲ್ಡ್ ಟ್ರಂಪ್ ಆಪ್ತ, ರಾಜಕೀಯ ಕಾರ್ಯಕರ್ತ ಚಾರ್ಲಿ ಕಿರ್ಕ್ ಗುಂಡಿಕ್ಕಿ ಹತ್ಯೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆಪ್ತ 31 ವರ್ಷದ ಚಾರ್ಲಿ ಕಿರ್ಕ್ ಅವರನ್ನು ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಚಾರ್ಲ್ಸ್ ಕಿರ್ಕ್ ಬಲಪಂಥೀಯ ರಾಜಕೀಯ

ದೇಶ - ವಿದೇಶ

ನೇಪಾಳದ ರಾಜಕೀಯ ಬಿಕ್ಕಟ್ಟು: ಪ್ರಧಾನಿ, ಅಧ್ಯಕ್ಷರ ರಾಜೀನಾಮೆ; ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಮಧ್ಯಂತರ ನಾಯಕಿ

ಕಠ್ಮಂಡು: ನೇಪಾಳದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿ ನೇಪಾಳದ ಪ್ರಧಾನಿ ಹಾಗೂ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರನ್ನು ಮಧ್ಯಂತರ ಸರ್ಕಾರದ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ.