Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದಕ್ಷಿಣ ಕನ್ನಡ

ಅಂಬ್ಯುಲೆನ್ಸ್‌ ಸೈರನ್ ಕೇಳಿಯೂ ದಾರಿ ಬಿಡದೆ ಅಡಚಣೆ ಉಂಟುಮಾಡಿದ ಸ್ಕೂಟರ್ ಸವಾರನ ವಿರುದ್ಧ ಕ್ರಮ.

ದಕ್ಷಿಣಕನ್ನಡ : ಅಂಬುಲೆನ್ಸ್ ಗೆ ದಾರಿ ಬಿಡದೆ ಪುಂಡಾಟ ಮೆರೆದಿದ್ದ ಬೈಕ್ ಸವಾರನನ್ನು ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ. ಬೆಟ್ಟಂಪಾಡಿ ಗ್ರಾಮದಲ್ಲಿ ಮೊಹಮ್ಮದ್ ಮನ್ಸೂರ್ (38) ಇದೀಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ದಕ್ಷಿಣ ಕನ್ನಡ

ಮಂಗಳೂರು

ಸಂತ ಅಲೋಶಿಯಸ್ ಕಾಲೇಜಿನ ಈಜು ಕೊಳದಲ್ಲಿ ದಾಖಲೆ: ಹಿಮ್ಮುಖ ಈಜಿನ ವೇಳೆ ನಿರಂತರ ಕೊಳಲು ನುಡಿಸಿ ವಿಶ್ವ ದಾಖಲೆ ಬರೆದ ಸಂಗೀತ ಶಿಕ್ಷಕ.

ಮಂಗಳೂರು: ಸಂಗೀತ ಶಿಕ್ಷಕ ರುಬೆನ್ ಜೇಸನ್ ಮಚಾದೊ ಅವರು ಮಂಗಳೂರಿನ ಸಂತ ಅಲೋಶಿಯೆಸ್ ಪರಿಗಣಿತ ವಿವಿಯ ಈಜು ಕೊಳದಲ್ಲಿ ಕೊಳಲನ್ನು ನುಡಿಸುತ್ತಾ ಸುಮಾರು 700 ಮೀಟರ್‌ಗೂ ಅಧಿಕ ದೂರವನ್ನು ಹಿಂದಕ್ಕೆ ಈಜುತ್ತಾ ಸಾಗುವ ಮೂಲಕ ಬ್ಯಾಕ್

ಉಡುಪಿ

ಉಡುಪಿ ಶ್ರೀಕೃಷ್ಣ ಮಠಕ್ಕೆ ನವೆಂಬರ್ 28 ರಂದು ಪ್ರಧಾನಿ ಮೋದಿ ಭೇಟಿ: ಪ್ರಧಾನಿಯಾದ ಬಳಿಕ ಇದೇ ಮೊದಲು!

ಉಡುಪಿ: ನವೆಂಬರ್ 28ರಂದು ಪ್ರಧಾನಿ ನರೇಂದ್ರ ಮೋದಿ ಉಡುಪಿಯ ಪ್ರಸಿದ್ಧ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಮಠದ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ. ಈ ಭೇಟಿಯು ಕರ್ನಾಟಕದಲ್ಲಿ ಆಧ್ಯಾತ್ಮಿಕ

ಮಂಗಳೂರು

ಬಜ್ಪೆ ಪೆರ್ಮುದೆಯಲ್ಲಿ ಕಳ್ಳರ ಹಾವಳಿ: ಶಿಕ್ಷಕಿಯ ಮನೆ ಬೀಗ ಮುರಿದು ಒಳನುಗ್ಗಿದ ಗ್ಯಾಂಗ್; ಮನೆಯಲ್ಲಿದ್ದರೂ ಬರಿಗೈಯಲ್ಲಿ ಮರಳಿದ ಕಳ್ಳರು!

ಬಜ್ಪೆ: ಪೆರ್ಮುದೆ ಬಂಡಸಾಲೆಯ ಬಳಿಯ ಮನೆಯೊಂದರ ಬೀಗ ಮುರಿದು ಒಳನುಗ್ಗಿದ ಕಳ್ಳರು, ಮನೆಯೆಲ್ಲ ಜಾಲಾಡಿ ಬರಿಗೈಯಲ್ಲಿ ಮರಳಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಶಿಕ್ಷಕಿ ಶೋಭಾ ಬ್ರಿಟೋ ಅವರು ಅ.22ರಂದು ತಾಯಿಯ ಮನೆಗೆ ತೆರಳಿದ್ದಾಗ

ಮಂಗಳೂರು

ಸಮುದ್ರ ಆಮೆಗಳ ಗೂಡುಕಟ್ಟುವ ಪ್ರದೇಶ ಸಂಪೂರ್ಣ ಕಣ್ಮರೆಯಾಗುವ ಭೀತಿ – CMFRI ಅಧ್ಯಯನ ವರದಿ

ಮಂಗಳೂರು: ಕರಾವಳಿ ಸವೆತ, ಸಮುದ್ರ ಗೋಡೆಗಳ ನಿರ್ಮಾಣ ಮತ್ತು ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳು ಕರ್ನಾಟಕದ ಕರಾವಳಿಯ ಸಮುದ್ರ ಆಮೆಗಳ ಜೀವಿತಕ್ಕೆ ಗಂಭೀರ ಅಪಾಯವನ್ನು ಉಂಟುಮಾಡಿವೆ ಎಂದು ಕೇಂದ್ರ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ (CMFRI) ನಡೆಸಿದ

ಮಂಗಳೂರು

ನಾಲ್ವರು ದುಷ್ಕರ್ಮಿಗಳಿಂದ ಇಬ್ಬರು ಯುವಕರ ಮೇಲೆ ಚೂರಿ ಇರಿತ; ಓರ್ವನ ಸ್ಥಿತಿ ಗಂಭೀರ

ಮಂಗಳೂರು: ನಾಲ್ಕು ಮಂದಿ‌ ದುಷ್ಕರ್ಮಿಗಳ ತಂಡ ಇಬ್ಬರಿಗೆ ಚೂರಿಯಿಂದ ಇರಿದ‌ ಪರಿಣಾಮ‌ ಓರ್ವ ಗಂಭೀರ ಗಾಯಗೊಂಡು ಇನ್ನೋರ್ವನಿಗೆ ಅಲ್ಪಪ್ರಮಾಣದ ಗಾಯಗಳಾಗಿರುವ ಘಟನೆ ಗುರುವಾರ‌ ತಡರಾತ್ರಿ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾನ ಪೆಟ್ರೋಲ್ ಪಂಪ್‌ ಬಳಿ

ಕರಾವಳಿ

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭೀಕರ ಅಪಘಾತ: ನಿಯಂತ್ರಣ ತಪ್ಪಿದ ಸರಕು ಲಾರಿ ನೇರವಾಗಿ ಪೊಲೀಸ್ ಚೆಕ್‌ಪೋಸ್ಟ್‌ಗೆ ನುಗ್ಗಿ ನುಜ್ಜುಗುಜ್ಜು!

ಕಾರವಾರ: ರಾಷ್ಟ್ರೀಯ ಹೆದ್ದಾರಿ 66ರ ಕುಮಟಾ-ಅಂಕೋಲ ಹೆದ್ದಾರಿಯಲ್ಲಿ ಸರಕು ತುಂಬಿಕೊಂಡು ಬಂದ ಲಾರಿ ನಿಯಂತ್ರಣ ತಪ್ಪಿ ನೇರವಾಗಿ ಪೊಲೀಸ್ ಚೆಕ್‌ಪೋಸ್ಟ್ ಮೇಲೆ ಹರಿದು ಬಿದ್ದಿದ್ದು, ಚೆಕ್‌ಪೋಸ್ಟ್ ಸಂಪೂರ್ಣ ನುಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಪ್ರಾಣಪಾಯದಿಂದ

ಉಡುಪಿ

ಮನೆಗೆ ನುಗ್ಗಿ ಆಹಾರ ತಿನ್ನುವಷ್ಟು ಮುಂದುವರೆದ ಮಂಗಗಳು: ಪರಿಹಾರ ಸಿಗದೆ ಕೃಷಿಕರಲ್ಲಿ ಆತಂಕ

ಉಡುಪಿ: ಜಿಲ್ಲೆಯ ಬೈಂದೂರು ತಾಲ್ಲೂಕಿನ ವಿವಿಧೆಡೆ ಮಂಗಗಳ ಹಾವಳಿ ವಿಪರೀತವಾಗುತ್ತಿದ್ದು, ಸಾರ್ವಜನಿಕರಿಗೆ, ಕೃಷಿಕರಿಗೆ ಸಂಕಷ್ಟ ಎದುರಾಗಿದೆ. ಮಂಗಗಳ ಹಿಂಡು ತೋಟಗಳಿಗೆ ಲಗ್ಗೆ ಇಡುತ್ತಿದ್ದು, ತೆಂಗಿನ ಮರಹತ್ತಿ ಸೀಯಾಳ ಕುಡಿದು ಕಿತ್ತೆಸೆಯುತ್ತಿವೆ. ಹಿಂಡು ಹಿಂಡಾಗಿ ದಾಳಿ ಮಾಡುವ

ಮಂಗಳೂರು

ಬೆಳ್ತಂಗಡಿಯಲ್ಲಿ ಮೊಸಳೆಯ ಆತಂಕ: ದೇವಸ್ಥಾನದ ಸಮೀಪದ ಕಿರು ಸೇತುವೆಯ ಮೇಲೆ ರಾತ್ರಿ ಓಡಾಡಿದ ಮೊಸಳೆ; ಸ್ಥಳೀಯರಿಂದ ವೀಡಿಯೋ ಚಿತ್ರೀಕರಣ

ಬೆಳ್ತಂಗಡಿ: ಕಳೆದೆರಡು ದಿನಗಳ ಹಿಂದೆ ಪಜಿರಡ್ಕ ದೇವಸ್ಥಾನದ ಬಳಿ ನದಿಯಲ್ಲಿ ಕಾಣಸಿಕ್ಕಿದ್ದ ಮೊಸಳೆಯು ಅ. 20ರ ರಾತ್ರಿ ದೇವಸ್ಥಾನದಿಂದ 100 ಮೀ. ದೂರದಲ್ಲಿರುವ ಕಿರು ಸೇತುವೆ ಪರಿಸರದಲ್ಲಿ ಓಡಾಟ ನಡೆಸುತ್ತಿರುವುದನ್ನು ಸ್ಥಳೀಯರು ಕಂಡಿದ್ದಾರೆ. ಅ. 19ರಂದು

ಕಾಸರಗೋಡು

ಮೃತಪಟ್ಟಿದ್ದಾರೆ ಎಂದು ಮನೆಗೆ ತಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ; ಕೊನೆಯ ಕ್ಷಣದಲ್ಲಿ ವ್ಯಕ್ತಿ ಜೀವಂತವಿರುವುದು ಪತ್ತೆ!

ಕಾಸರಗೋಡು: ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಮೃತಪಟ್ಟಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿದ ಹಿನ್ನೆಲೆಯಲ್ಲಿ ಮನೆಗೆ ತಂದು ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದಂತೆ ವ್ಯಕ್ತಿ ಜೀವಂತವಾಗಿರುವುದು ತಿಳಿದು ಬಂದಿದೆ. ಅವರನ್ನು ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.