Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಾಂಚಿ: ಜಮ್ಶೆಡ್‌ಪುರದಲ್ಲಿ ಭೀಕರ ರಸ್ತೆ ಅಪಘಾತ – ಸಚಿವೆ ದೀಪಿಕಾ ಪಾಂಡೆ ಸಿಂಗ್ ಪುತ್ರಿ ಸೇರಿದಂತೆ ನಾಲ್ವರು ದಾರುಣ ಸಾ*ವು!

Spread the love

ರಾಂಚಿ : ಜಾರ್ಖಂಡ್‌ನ ಜಮ್ಶೆಡ್‌ಪುರದಲ್ಲಿ ಮಧ್ಯರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಜಾರ್ಖಂಡ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವೆ ದೀಪಿಕಾ ಪಾಂಡೆ ಸಿಂಗ್ ಅವರ ಪುತ್ರಿ ತ್ರಿಶಾ ಸಿಂಗ್ ಸೇರಿದಂತೆ ನಾಲ್ವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ಜಮ್ಶೆಡ್‌ಪುರದ ಮೆರೈನ್ ಡ್ರೈವ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು, ರಸ್ತೆಬದಿಯಲ್ಲಿ ನಿಲ್ಲಿಸಲಾಗಿದ್ದ ಟ್ರಕ್‌ಗೆ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.

ಮಾಹಿತಿ ಪ್ರಕಾರ, ಈ ಭೀಕರ ಅಪಘಾತವು ಮಧ್ಯರಾತ್ರಿಯ ನಂತರ ಸಂಭವಿಸಿದೆ. ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿತ್ತು. ವಿಷಯ ತಿಳಿದ ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿದ ಜಮ್ಶೆಡ್‌ಪುರ ಪೊಲೀಸರು, ಕಾರಿನಲ್ಲಿದ್ದ ನಾಲ್ವರನ್ನು ಹೊರತೆಗೆದು ತಕ್ಷಣವೇ ಸ್ಥಳೀಯ ಎಂಜಿಎಂ (MGM) ಆಸ್ಪತ್ರೆಗೆ ರವಾನಿಸಿದರು. ಆದರೆ, ಪರೀಕ್ಷಿಸಿದ ವೈದ್ಯರು ನಾಲ್ವರೂ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.

ಈ ಹೃದಯವಿದ್ರಾವಕ ದುರಂತಕ್ಕೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ತೀವ್ರ ಆಘಾತ ಹಾಗೂ ಕಂಬನಿ ವ್ಯಕ್ತಪಡಿಸಿದ್ದಾರೆ. “ಸಚಿವೆ ದೀಪಿಕಾ ಪಾಂಡೆ ಸಿಂಗ್ ಅವರ ಪುತ್ರಿ ಹಾಗೂ ಇತರರ ದಾರುಣ ಸಾವು ನನ್ನನ್ನು ತೀವ್ರವಾಗಿ ತಲ್ಲಣಗೊಳಿಸಿದೆ. ಹೆತ್ತ ತಾಯಿಗೆ ಮಗುವನ್ನು ಕಳೆದುಕೊಳ್ಳುವ ನೋವು ಪದಗಳಿಗೆ ಮೀರಿದ್ದು ಮತ್ತು ಅಸಹನೀಯವಾಗಿದೆ. ಈ ಕಷ್ಟದ ಸಮಯದಲ್ಲಿ ಸಹೋದರಿ ದೀಪಿಕಾ ಹಾಗೂ ಅವರ ಕುಟುಂಬದ ಜೊತೆ ನಾವಿದ್ದೇವೆ” ಎಂದು ಸಿಎಂ ಸೊರೇನ್ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ಮತ್ತೊಬ್ಬ ಸಚಿವ ಇರ್ಫಾನ್ ಅನ್ಸಾರಿ ಸೇರಿದಂತೆ ಹಲವು ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಕಂಬನಿ ಮಿಡಿದಿದ್ದು, ಅಗಲಿದ ಆತ್ಮಕ್ಕೆ ಶಾಂತಿ ಕೋರಿ, ಕುಟುಂಬಸ್ಥರಿಗೆ ಈ ಭರಿಸಲಾಗದ ದುಃಖವನ್ನು ಸಹಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ


Spread the love
Share:

administrator

Leave a Reply

Your email address will not be published. Required fields are marked *