Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚಾಮರಾಜನಗರ: ಬಂಡೀಪುರದಲ್ಲಿ ಹುಲಿ ಹಾಗೂ ಆನೆ ಶವ ಪತ್ತೆ – ಹುಲಿ ಕಳ್ಳಬೇಟೆ ಉರುಳಿಗೆ ಬಲಿ, ಆನೆಯ ದಂತ ನಾಪತ್ತೆ!

Spread the love

ಚಾಮರಾಜನಗರ : ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿಗೆ ವಿಸ್ತಾರಗೊಂಡಿರುವ ರಾಜ್ಯದ ಬಂಡೀಪುರ ಅರಣ್ಯದಲ್ಲಿ ಹುಲಿ ಮತ್ತು ಆನೆಯ ಕಳೇಬರ ಪತ್ತೆಯಾಗಿದ್ದು, ಹುಲಿ ಕಳ್ಳ ಭೇಟೆಗಾರರ ಉರುಳಿಗೆ ಸಲುಕಿ ಸಾವನ್ನಪ್ಪಿದ್ದರೆ, ಆನೆ ಕಳೇಬರದಲ್ಲಿ ದಂತ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಮತ್ತು ಅನೆ ಕಳೇಬರವು ಎರಡು ಪ್ರತ್ಯೇಕ ಘಟನೆಗಳು ತಡವಾಗಿ ಬೆಳಕಿಗೆ ಬಂದಿದ್ದು, ಹುಲಿ ಮತ್ತು ಅನೆ ಕಳೇಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇವು ಮದ್ದೂರು ವಲಯದಲ್ಲಿ ನಡೆದಿದೆ.

ಬಂಡೀಪುರ ಹುಲಿ ರಕ್ಷಿತಾರಣ್ಯದ ಗುಂಡ್ಲುಪೇಟೆ ತಾಲ್ಲೂಕಿನ ಮದ್ದೂರು ವನ್ಯಜೀವಿ ವಲಯದ ಹೊಂಗಳ್ಳಿ ಬೀಟ್ನಲ್ಲಿ ಕಳ್ಳಬೇಟೆಗಾರರು ಹಾಕಿದ್ದ ಉರುಳಿಗೆ ಸಿಲುಕಿ ಸುಮಾರು ಎರಡು ವರ್ಷ ವಯಸ್ಸಿನ ಹುಲಿ ಸಾವಿಗೀಡಾಗಿದೆ. ತೀರಾ ಕೊಳೆತುಹೋದ ಪರಿಣಾಮ ಇದು ಹೆಣ್ಣು ಅಥವಾ ಗಂಡು ಎಂಬುದು ಇನ್ನೂ ದೃಢಪಟ್ಟಿಲ್ಲ. ಹುಲಿಯ ಕಳೇಬರವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಮತ್ತೊಂದು ಪ್ರಕರಣವು ಮದ್ದೂರು ವಲಯದಲ್ಲೇ ನಡೆದಿದ್ದು ಕರಡಿಕಲ್ಲು ಗುಡ್ಡದಲ್ಲಿ ಆನೆ ಕಳೇಬರ ಪತ್ತೆಯಾಗಿದೆ. ಆದರೆ, ಆನೆ ಎರಡೂ ದಂತಗಳು ನಾಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಡೀಪುರದ ಮದ್ದೂರು ವಲಯದಲ್ಲಿ ಹುಲಿ ಮತ್ತು ಆನೆ ಮೃತಪಟ್ಟಿರುವ ಘಟನೆ ಸಂಬಂಧ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ. ಕಳ್ಳಬೇಟೆಗಾರರು ಸಕ್ರೀಯವಾಗಿರುವ ಅಂಶ ಬೆಳಕಿಗೆ ಬಂದಿದೆ. ಈ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ನಿಸಿಎ)ಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ ಎಂದು ಬಂಡೀಪುರ ನಿರ್ದೇಶಕ ಎಲ್. ನಂದೀಶ್ ಮಾಹಿತಿ ನೀಡಿದ್ದಾರೆ.
ಪರಿಸರವಾದಿಗಳ ಆಂತಕ: ಚಾಮರಾಜನಗರ ಜಿಲ್ಲೆಯ ಬಂಡಿಪುರದ ಮದ್ದೂರು ವಲಯದಲ್ಲಿ ಹುಲಿ ಮತ್ತು ಆನೆ ಕಳೇಬರ ದೊರೆತ್ತಿರುವ ಬಗ್ಗೆ ಪರಿಸರವಾದಿ ಜೋಸೆಫ್ ಹೂವರ್ ಪ್ರತಿಕ್ರಿಯೆ ನೀಡಿದ್ದು, ಅರಣ್ಯದ 300 ಮೀಟರ್ ಒಳಗೆ ಉರುಳು ಹಾಕಲಾಗಿದೆ. ಜೊತೆಗೆ, ಹುಲಿ ಮೃತಪಟ್ಟು ಬಹಳಷ್ಟು ದಿನಗಳಾದ ಬಳಿಕ ಅರಣ್ಯ ಇಲಾಖೆಗೆ ವಿಚಾರ ಗೊತ್ತಾಗಿದೆ. ಅರಣ್ಯಾಧಿಕಾರಿಗಳು ಸರಿಯಾಗಿ ಗಸ್ತು ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *