ಕರ್ತವ್ಯಲೋಪ: ಕಚೇರಿಗೆ ಬಾರದ ಪಿಡಿಒ ಅಮಾನತು!

ಬೀದರ್: ಸರಿಯಾಗಿ ಕಚೇರಿಗೆ ಬಾರದ ಪಿಡಿಒ (PDO) ಅವರನ್ನು ಅಮಾನತು ಮಾಡಿದ ಜಿ.ಪಂ ಸಿಇಒ ಗಿತ್ತೆ ಮಾದವ್ ವಿಠಲರಾವ್ ಅವರು ಆದೇಶ ಹೊರಡಿಸಿದ್ದಾರೆ.ಬೀದರ್ (Bidar) ಜಿಲ್ಲೆಯ ಕಮಲನಗರ (Kamalanagar) ತಾಲೂಕಿನ ಮದನೂರು (Madanuru) ಗ್ರಾಮ ಪಂಚಾಯತಿಯಲ್ಲಿ ಈ ಘಟನೆ ನಡೆದಿದೆ. ಮದನೂರು ಗ್ರಾಪಂ ಪಿಡಿಒ ರಂಗಾಚಾರಿ ನಾರೋಜ ಅವರನ್ನು ಅಮಾನತು ಮಾಡಿ ಜಿಪಂ ಸಿಇಒ ಆದೇಶಿಸಿದ್ದಾರೆ.ಜಿಪಂ ಸಿಇಒ ಗ್ರಾಪಂಗೆ ಏಕಾಏಕಿ ಭೇಟಿ ನೀಡಿದ್ದರು. ಈ ವೇಳೆ ಕಚೇರಿಯಲ್ಲಿ ಪಿಡಿಒ ಇರಲಿಲ್ಲ. ಆಗ ಗೈರಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಸರಿಯಾಗಿ ಗ್ರಾಪಂ ಕಚೇರಿಗೆ ಬರುತ್ತಿಲ್ಲ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಸರಿಯಾಗಿ ಬಾರದ ಕಾರಣ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಪಿಡಿಒ ನಿರ್ಲಕ್ಷ್ಯ ಮಾಡಿದ್ದು, ಹೀಗಾಗಿ ಮದನೂರು ಪಂಚಾಯಿತಿಗೆ ಬರುವ ನಾಲ್ಕೈದು ಹಳ್ಳಿಗಳಲ್ಲಿ ಸಮಸ್ಯೆಗಳು ತಾಂಡವವಾಡುತ್ತಿದೆ. ಹೀಗಾಗಿ ಜಿಪಂ ಸಿಇಒಗೆ ಆರೋಪಗಳು ಬಂದ ಹಿನ್ನೆಲ ಪಿಡಿಒರನ್ನು ಅಮಾನತು ಮಾಡಿ, ಜಿಪಂ ಸಿಇಒ ಆದೇಶ ಮಾಡಿದ್ದಾರೆ.
