Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸೌದಿ ಅರೇಬಿಯಾ: ತೈಲ ಘಟಕಗಳು ಹಾಗೂ ವಿಮಾನ ನಿಲ್ದಾಣಗಳ ಮೇಲೆ ಸರಣಿ ದಾಳಿ – ಹೌತಿ ಬಂಡುಕೋರರಿಂದ ಮತ್ತಷ್ಟು ದಾಳಿಯ ಭೀಕರ ಎಚ್ಚರಿಕೆ!

Spread the love

ರಿಯಾದ್: ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳು ಮತ್ತು ತೈಲ ಘಟಕಗಳ ಮೇಲೆ ದಾಳಿಗಳನ್ನು ಮುಂದುವರಿಸುವುದಾಗಿ ಯೆಮನ್‌ ಹೌತಿ ಬಂಡುಕೋರರು ಬುಧವಾರ ಎಚ್ಚರಿಕೆ ನೀಡಿದ್ದಾರೆ ಎಂದು reuters.com ವರದಿ ಮಾಡಿದೆ.
ತೈಲ ದೈತ್ಯ ಕಂಪೆನಿ ಸೌದಿ ಅರಾಮೊದ ಪ್ರಧಾನ ಕಚೇರಿಯ ಮೇಲೂ ದಾಳಿ ನಡೆಸಿರುವುದಾಗಿ ಹೌತಿ ಬಂಡುಕೋರರು ತಿಳಿಸಿದ್ದಾರೆ.
ಧಹ್ರಾನ್‌ನಲ್ಲಿರುವ ಸೌದಿ ಅರಾಮ್ಮೊ ಘಟಕಗಳು, ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ರಿಯಾದ್‌ನಲ್ಲಿರುವ ಅರಾನ್ನೊ ತೈಲ ಸಂಸ್ಕರಣಾಗಾರದ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಡೋನ್‌ಗಳ ಮೂಲಕ ದಾಳಿ ನಡೆಸಿರುವುದಾಗಿ ಹೌತಿ ಹೇಳಿದೆ. ಆದರೆ, ಈ ದಾಳಿ ಯಾವಾಗ ನಡೆದವು ಎಂಬುದನ್ನು ಸ್ಪಷ್ಟಪಡಿಸಿಲ್ಲ.
ಕಳೆದ ಒಂದು ವಾರದಿಂದ ಸೌದಿ ಅರೇಬಿಯಾ ಮೇಲೆ ಹೌತಿ ಬಂಡುಕೋರರು ದಾಳಿಯನ್ನು ತೀವ್ರಗೊಳಿಸಿದ್ದಾರೆ. ಶನಿವಾರ ರಿಯಾದ್ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯೂ ಇದರಲ್ಲಿ ಸೇರಿದ್ದು, ಈ ದಾಳಿಯಲ್ಲಿ 13 ಮಂದಿ ಮೃತಪಟ್ಟಿದ್ದರು.


Spread the love
Share:

administrator

Leave a Reply

Your email address will not be published. Required fields are marked *