Contact Information
The Saffron Productions
3rd Floor Kudvas Granduer
Surathkal Mangalore 575014
- June 27, 2026
ದೇಶ – ವಿದೇಶ
ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಕುಸಿದು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವು!
- By Sauram Tv
- . November 7, 2025
ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯಲ್ಲಿ ಗೌರವದ ದುರಂತ ಒಂದು ಸಂಭವಿಸಿದ್ದು ಕಟ್ಟಡ ಕಾಮಗಾರಿ ಸಂದರ್ಭದಲ್ಲಿ ಏಕಾಏಕಿ ಲಿಫ್ಟ್ ಕುಸಿದು ಬಿದ್ದು ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ
ನಂಬಲುಸಾಧ್ಯ! ಇರುವೆಗಳಿಗೆ ಭಯಪಟ್ಟು ಆತ್ಮಹತ್ಯೆ ಮಾಡಿದ ಮಹಿಳೆ.
- By Sauram Tv
- . November 7, 2025
ಹೈದರಾಬಾದ್: ಸಾಮಾನ್ಯವಾಗಿ ಹಾವು, ಜಿರಲೆ, ಇಲಿ, ಚೇಳುಗಳನ್ನು ಕಂಡರೆ ಹೆಣ್ಣುಮಕ್ಕಳು ಹೆದರುವುದು ಸಹಜ ಆದರೆ ಆತ್ಮಹತ್ಯೆ(Suicide) ಮಾಡಿಕೊಳ್ಳುವ ಹಂತಕ್ಕೆ ಹೋಗುತ್ತಾರೆಂದರೆ ನಂಬಲಸಾಧ್ಯ. ಮಹಿಳೆಯೊಬ್ಬರು ಇರುವೆಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. 25 ವರ್ಷದ ಮಹಿಳೆಗೆ ಮೊದಲಿನಿಂದಲೂ ಇರುವೆ ಭಯ ಇತ್ತು ಎಂದು ಪೋಷಕರು ತಿಳಿಸಿದ್ದಾರೆ. ಈ ಘಟನೆ ನವೆಂಬರ್ 04ರಂದು ನಡೆದಿದೆ. ಮಹಿಳೆ 2022ರಲ್ಲಿ ವಿವಾಹವಾಗಿದ್ದರು. ಮೂರು ಮಕ್ಕಳಿದ್ದಾರೆ. ಆಕೆ ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.ಪೊಲೀಸರು ಹೇಳಿರುವ ಪ್ರಕಾರ, ಆಕೆಗೆ ಬಾಲ್ಯದಿಂದಲೂ ಇರುವೆಗಳ ಭಯ ಇತ್ತು. ಈ ಹಿಂದೆ ತನ್ನ ಊರು ಮಂಚೇರಿಯಲ್ನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಘಟನೆಯ ದಿನ ತನ್ನ ಮಗಳನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಹೋಗಿದ್ದಳು. ಮನೆ ಸ್ವಚ್ಛಗೊಳಿಸಿದ ನಂತರ ಕರೆದುಕೊಂಡು ಹೋಗುವುದಾಗಿ ಹೇಳಿದ್ದಳು. ಬೆಳಗ್ಗೆ ಕೆಲಸಕ್ಕೆ ಹೋಗಿದ್ದ ಪತಿ ಸಂಜೆ ಹಿಂದಿರುಗಿದಾಗ ಬಾಗಿಲು ಒಳಗಡೆಯಿಂದ ಲಾಕ್ ಆಗಿತ್ತು. ಅಕ್ಕಪಕ್ಕದ ಮನೆಯವರ ಸಹಾಯದಿಂದ ಬಾಗಿಲು ಒಡೆದು ನೋಡಿದಾಗ ಅವರ ಪತ್ನಿ ನೇಣು ಬಿಗಿದ ಸ್ಥಿತಿಯಲ್ಲಿದ್ದರು. ಸ್ಥಳದಲ್ಲಿ ಸಿಕ್ಕಿ ಆತ್ಮಹತ್ಯಾ ಪತ್ರದಲ್ಲಿ ಕ್ಷಮಿಸಿ ನಾನು ಈ ಇರುವೆಗಳೊಂದಿಗೆ ಬದುಕಲು ಸಾಧ್ಯವಿಲ್ಲ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ, ಜಾಗರೂಕರಾಗಿರಿ ಎಂದು ಬರೆದಿದ್ದಳು. ಆಕೆ ಮನೆಯನ್ನು ಶುಚಿಗೊಳಿಸುವಾಗ ಇರುವೆಗಳನ್ನು ನೋಡಿರಬಹುದು ಮತ್ತು ಭಯದಿಂದ ಈ ತಪ್ಪು ನಿರ್ಧಾರ ತೆಗೆದುಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಅಮೀನ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಗೇಮ್ ನಿಲ್ಲಿಸಿದ್ದಕ್ಕೆ 8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ
- By Sauram Tv
- . November 7, 2025
ಜೈಪುರ: ಮೊಬೈಲ್ ಗೇಮ್ ಆಡಬೇಡ ಎಂದು ತಂದೆ ಬೈದಿದ್ದಕ್ಕೆ 15 ವರ್ಷದ ಬಾಲಕ ಆತ್ಮಹತ್ಯೆ(Suicide)ಗೆ ಶರಣಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ನವೆಂಬರ್ 5ರಂದು ಧೋಲ್ಪುರ್ ಜಿಲ್ಲೆಯ ಕುರ್ರೆಂಡಾ ಗ್ರಾಮದಲ್ಲಿ ಘಟನೆ ಡನೆದಿದ್ದು, ಬಾಲಕ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಮೃತ ಬಾಲಕನ ಹೆಸರು ರಾಜವೀರ್ ಬಘೇಲ್. ಪ್ರಾಥಮಿಕ ಮಾಹಿತಿಗಳ ಪ್ರಕಾರ, ಬಾಲಕ ಫ್ರೀ ಫೈರ್ ಎಂಬ ಮೊಬೈಲ್ ಗೇಮ್ಗೆ ಅಡಿಕ್ಟ್ ಆಗಿದ್ದ, ಇದರಿಂದಾಗಿ ತಂದೆ ಕೋಪಗೊಂಡು ಮೊಬೈಲ್ ಗೇಮ್ ಬಿಟ್ಟು ಓದಿನೆಡೆಗೆ ಹೆಚ್ಚು ಗಮನಕೊಡು ಎಂದು ಗದರಿದ್ದರು. ಅಷ್ಟೇ ಅಲ್ಲದೆ ತಂದೆ ರಾಜವೀರ್ ಬಘೇಲ್ ಆಟ ಆಡುತ್ತಿದ್ದಾಗ ಅವನ ಫೋನ್ ಅನ್ನು ಕಸಿದುಕೊಂಡು ವಶಪಡಿಸಿಕೊಂಡಿದ್ದರು. ಕೋಪಗೊಂಡ ಹುಡುಗ ನೇರವಾಗಿ ತನ್ನ ಕೋಣೆಗೆ ಹೋದನು. ಅಷ್ಟರಲ್ಲಿ, ಕುಟುಂಬದ ಇತರ ಸದಸ್ಯರು ಊಟ ಮಾಡುತ್ತಿದ್ದರು. ಊಟದ
ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿ ಅಜಿತ್ ಸಿಂಗ್ ಚೌಧರಿ ಮೃತದೇಹ ಪತ್ತೆ
- By Sauram Tv
- . November 7, 2025
ಮಾಸ್ಕೋ: ರಷ್ಯಾ(Russia)ದ ಉಫಾ ನಗರದಲ್ಲಿ ನಾಪತ್ತೆಯಾಗಿದ್ದ 22 ವರ್ಷದ ಭಾರತೀಯ ವಿದ್ಯಾರ್ಥಿಯ ಮೃತದೇಹ ಗುರುವಾರ ಅಣೆಕಟ್ಟಿನಲ್ಲಿ ಪತ್ತೆಯಾಗಿದೆ. ರಾಜಸ್ಥಾನದ ಅಲ್ವಾರ್‌ನ ಲಕ್ಷ್ಮಣಗಢದ ಕಫನ್ವಾಡ ಗ್ರಾಮದ ನಿವಾಸಿ ಅಜಿತ್ ಸಿಂಗ್ ಚೌಧರಿ ಅವರು 2023 ರಲ್ಲಿ ಎಂಬಿಬಿಎಸ್ ಕೋರ್ಸ್‌ಗಾಗಿ ಬಶ್ಕಿರ್
ದೆಹಲಿ ಏರ್‌ಪೋರ್ಟ್‌ನಲ್ಲಿ 100ಕ್ಕೂ ಹೆಚ್ಚು ವಿಮಾನಗಳ ಹಾರಾಟ ವಿಳಂಬ: ATC ವ್ಯವಸ್ಥೆಯಲ್ಲಿ ತಾಂತ್ರಿಕ ದೋಷದಿಂದ ಪ್ರಯಾಣಿಕರ ಪರದಾಟ
- By Sauram Tv
- . November 7, 2025
ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (IGIA) ಏರ್ ಟ್ರಾಫಿಕ್ ಕಂಟ್ರೋಲರ್ (ATC) ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆ ಶುಕ್ರವಾರ (ಇಂದು) ಬೆಳಗ್ಗೆ 100ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದೆ ಎಂದು
ಬಿಹಾರ ಚುನಾವಣೆ: ದಾಖಲೆ ಬರೆದ ಮೊದಲ ಹಂತದ ಮತದಾನ; 1951ರ ನಂತರ ಅತಿ ಹೆಚ್ಚು 64.66% ವೋಟಿಂಗ್
- By Sauram Tv
- . November 7, 2025
ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಅತಿ ಹೆಚ್ಚು 64.66% ಮತದಾನವಾಗಿದೆ (Voter Turnout). ಇದು ರಾಜ್ಯದ ಇತಿಹಾಸದಲ್ಲೇ ಹೊಸ ದಾಖಲೆಯಾಗಿದ್ದು, ಪ್ರಜಾಪ್ರಭುತ್ವದ ಗೆಲುವು ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh
ಮೋದಿ ‘ಮಹಾನ್ ವ್ಯಕ್ತಿ’, ‘ಒಳ್ಳೆಯ ಸ್ನೇಹಿತ’: ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವ ಸುಳಿವು ನೀಡಿದ ಡೊನಾಲ್ಡ್ ಟ್ರಂಪ್
- By Sauram Tv
- . November 7, 2025
ವಾಷಿಂಗ್ಟನ್: ಒಂದು ಕಡೆ ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ (Narendra Modi) ಜೊತೆಗಿನ ಬಾಂಧವ್ಯವನ್ನು ಪದೇ ಪದೇ ಹೊಗಳುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ಮತ್ತೊಂದು ಕಡೆ ವ್ಯಾಪಾರ ಯುದ್ಧವನ್ನು ಮುಂದುವರಿಸಿದ್ದಾರೆ.
‘ಮುಸ್ಲಿಮರು ಎಂದರೆ ಕಾಂಗ್ರೆಸ್, ಕಾಂಗ್ರೆಸ್ ಎಂದರೆ ಮುಸ್ಲಿಮರು’: ವಿವಾದ ಸೃಷ್ಟಿಸಿದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹೇಳಿಕೆ
- By Sauram Tv
- . November 7, 2025
ಹೈದರಾಬಾದ್: ಮುಸ್ಲಿಮರು (Muslims) ಎಂದರೆ ಕಾಂಗ್ರೆಸ್ ಮತ್ತು ಕಾಂಗ್ರೆಸ್ (Congress) ಎಂದರೆ ಮುಸ್ಲಿಮರು ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ (Revanth Reddy) ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್
ಬಿಹಾರ ಚುನಾವಣೆ: 20 ವರ್ಷಗಳಲ್ಲೇ ದಾಖಲೆ ಮತದಾನ; ಮೊದಲ ಹಂತದಲ್ಲಿ ಶೇ.64.6 ರಷ್ಟು ಮತ ಚಲಾವಣೆ
- By Sauram Tv
- . November 7, 2025
ಪಾಟ್ನಾ: 243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ (Bihar Election) ಗುರುವಾರ (ನ.6) 121 ಕ್ಷೇತ್ರಗಳಿಗೆ ನಡೆದ ಮೊದಲ ಹಂತದ ಮತದಾನದಲ್ಲಿ ಶೇ.64.6ರಷ್ಟು ಮತ ಚಲಾವಣೆಯಾಗಿದೆ. 2020ರಲ್ಲಿ ನಡೆದ ಚುನಾವಣೆ ವೇಳೆ ಮೊದಲ ಹಂತದಲ್ಲಿ ಶೇ.52ರಷ್ಟು
TTP ಉಗ್ರ ಸಂಘಟನೆ ಸಂಪರ್ಕ: ರಾಜಸ್ಥಾನದಲ್ಲಿ ಮೌಲಾನಾ ಒಸಾಮಾ ಉಮರ್ ಬಂಧನ; ನಾಲ್ಕು ವರ್ಷಗಳ ಸಂಪರ್ಕ ಬಹಿರಂಗ
- By Sauram Tv
- . November 7, 2025
ಜೈಪುರ್: ಉಗ್ರರೊಂದಿಗೆ ಸಂಪರ್ಕ ಹೊಂದಿದ್ದ ಶಂಕಿತ ಆರೋಪಿಯನ್ನು ರಾಜಸ್ಥಾನದ ಭಯೋತ್ಪಾದನಾ ನಿಗ್ರಹ ದಳ (Anti Terrorism Squad) ಅಧಿಕಾರಿಗಳು ಬಂಧಿಸಿದ್ದಾರೆ. ರಾಜಸ್ಥಾನದ (Rajasthan) ಬಾರ್ಮರ್ ಮೂಲದ ಮೌಲಾನಾ ಒಸಾಮಾ ಉಮರ್ ಬಂಧಿತ ಆರೋಪಿಯಾಗಿದ್ದಾನೆ. ಈತ ಸಂಚೋರ್‌ನಲ್ಲಿ