ಅತ್ತೆ ಮನೆಗೆ ಹೋಗಲು ನಿರಾಕರಿಸಿದ ಪತ್ನಿ: ಹೆಲ್ಮೆಟ್‌ನಿಂದ ಬರ್ಬರವಾಗಿ ಕೊ*ಲೆಗೈದ ಪತಿ!

ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ತಾರಿಹಾಳ ಗ್ರಾಮದಲ್ಲಿ ಮದುವೆಯಾಗಿ ಕೇವಲ ನಾಲ್ಕು ತಿಂಗಳಾಗಿದ್ದ ಪತ್ನಿಯನ್ನು ಪತಿಯೊಬ್ಬ ಹೆಲ್ಮೆಟ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ನಡೆದಿದೆ.
ಮೃತಳನ್ನು ನಾಗರತ್ನ (19ವ) ಎಂದು ಗುರುತಿಸಲಾಗಿದ್ದು, ಮದುವೆಯಾದ ಬಳಿಕ ಪತಿ ಶಿವರಾಜ್ ಜೊತೆ ಹಲವು ಭಿನ್ನಾಭಿಪ್ರಾಯಗಳು ಉಂಟಾಗಿದ್ದವು. ಈ ಕಾರಣದಿಂದ ನಾಗರತ್ನ ತವರು ಮನೆಗೆ ಬಂದು ಮತ್ತೆ ಪತಿಯ ಮನೆಗೆ ತೆರಳದಿರಲು ನಿರ್ಧರಿಸಿದ್ದಳು ಎನ್ನಲಾಗಿದೆ.ನನ್ನ ಮಗಳು ಅತ್ತೆಮನೆಗೆ ಹೋಗಲು ನಿರಾಕರಿಸಿದ್ದಳು. ಆದರೆ ಅವಳ ಪತಿ, ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ನಮಗೆ ಭರವಸೆ ನೀಡಿದ್ದ. ನಂತರ ಅತ್ತೆಮನೆಯವರು ಮತ್ತು ಪತಿ ಸೇರಿ ಸಂಚು ರೂಪಿಸಿ ನನ್ನ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ನಾಗರತ್ನ ಅವರ ತಾಯಿ ಆರೋಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಶಿವರಾಜ್‌ನನ್ನು ಬಂಧಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ
