17 ವರ್ಷದ ಬಾಲಕನ ಭೀಕರ ಕೊ*ಲೆ: ಗೋಣಿಚೀಲದಲ್ಲಿ ತುಂಬಿದ ಶವ ಕೃಷಿಭೂಮಿಯಲ್ಲಿ ಪತ್ತೆ, ಮೂವರು ವಶಕ್ಕೆ!

ತಿರುವನಂತಪುರಂ: ರಾಜಧಾನಿಯನ್ನು ಸೋಮವಾರ ಸಂಜೆ ಬೆಚ್ಚಿಬೀಳಿಸಿದ ಭೀಕರ ಘಟನೆಯೊಂದರಲ್ಲಿ ಭಾನುವಾರ ಮನೆಯಿಂದ ನಾಪತ್ತೆಯಾಗಿದ್ದ 17 ವರ್ಷದ ಬಾಲಕನ ದೇಹವನ್ನು ಗೋಣಿಚೀಲದಲ್ಲಿ ತುಂಬಿಸಿ ಕೊಲೆ ಮಾಡಿ ಶ್ರೀಕಾರ್ಯಂ ಬಳಿಯ ಪಂಗಪ್ಪರದಲ್ಲಿ ಕೃಷಿಭೂಮಿಯಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ, ಈ ಕೊಲೆಗೆ ಶಂಕಿತ ಅಕ್ರಮ ಸಂಬಂಧವೇ ಕಾರಣ ಎಂದು ವರದಿಯಾಗಿದೆ.
ಓಲಿಯಾದ ಎಂ.ಡಿ, ಅಭಿರಾಮ್, ಎಐಟಿಯುಸಿ ಯೂನಿಯನ್ ಕೆಲಸಗಾರ ಮಧು ಅವರ ಪುತ್ರ, ವರುತಿಪಾರದ ಎನ್‌ಎಸ್‌ಎಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ 12 ನೇ ತರಗತಿ ವಿದ್ಯಾರ್ಥಿಯಾಗಿದ್ದ, ಕೊಲೆಯ ನಂತರ, ಶ್ರೀಕಾರ್ಯ೦ ಪೊಲೀಸರು ಅಪ್ರಾಪ್ತ ಬಾಲಕಿ ಆಕೆಯ ಸ್ನೇಹಿತ ಮತ್ತು ಗೂಂಡಾ ಪಟ್ಟಿಯಲ್ಲಿರುವ ವ್ಯಕ್ತಿ ಒಮರ್ ಸೇರಿದಂತೆ ಮೂವರನ್ನು ವಶಕ್ಕೆ ಪಡೆದರು. ಆರೋಪಿಗಳು ಅಪರಾದ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಸಂಜೆಯಿಂದ ಹುಡುಗ ಮನೆಯಿಂದ ಕಾಣೆಯಾಗಿದ್ದ, ಅಪರಾಧದಲ್ಲಿ ಭಾಗಿಯಾಗಿದ್ದಾನ ಎನ್ನಲಾದ ಹುಡುಗಿಯಿಂದ ಕರೆ ಅಥವಾ ಇನ್‌ಸ್ಟಾಗ್ರಾಮ್ ಸಂದೇಶ ಬಂದ ನಂತರ ಅವನು ಮನೆಯಿಂದ ಹೊರಟು ಹೋಗಿದ್ದಾನೆ ಎಂದು ವರದಿಯಾಗಿದೆ, “ಅಭಿರಾಮ್ ಸಂಜೆ ಮನೆಯಿಂದ ಹೊರಟು ತನ್ನ ಸ್ನೇಹಿತರನ್ನು ಭೇಟಿಯಾಗಲು ಹೋಗುತ್ತಿದ್ದೇನೆ ಎಂದು ಪೋಷಕರಿಗೆ ತಿಳಿಸಿದ. ರಾತ್ರಿ 8 ಗಂಟೆಯಾದರೂ ಅವನು ಹಿಂತಿರುಗದ ಕಾರಣ, ಪೋಷಕರು ಶ್ರೀಕಾರ್ಯಂ ಪೊಲೀಸರಿಗೆ ದೂರು ನೀಡಿದ್ದಾರೆ” ಎಂದು ಶ್ರೀಕಾರ್ಯಂ ವಿಭಾಗದ ಮಾಜಿ ಕೌನ್ಸಿಲರ್ ಸ್ಪಾನ್ಸಿ ಡಿ’ಕ್ರೂಜ್ ಹೇಳಿದರು.
ಬಾನುವಾರ ಅಭಿರಾಮ್ ಅವರ ಫೋನ್ ಕರೆ ದಾಖಲೆಗಳ ಮೇಲೆ ಕೇಂದ್ರೀಕರಿಸಿದ ಪೊಲೀಸ್ ತನಿಖೆಯ ನಂತರ ಕೊಲೆಯ ವಿವರಗಳು ಬೆಳಕಿಗೆ ಬಂದವು. “ಕರೆ ದಾಖಲೆಗಳಿಂದ, ಅಪ್ರಾಪ್ತ ಬಾಲಕಿಯಿಂದ ಫೋನ್ ಕರೆ ಬಂದ ನಂತರ ಅವನು ಮನೆಯಿಂದ ಹೊರಟು ಹೋಗಿದ್ದಾನೆ ಎಂದು ಕಂಡುಬಂದಿದೆ. ಅಪರಾಧ ಯತ್ನದ ಬಗ್ಗೆ ತಿಳಿಯಲು ನಾವು ಹುಡುಗಿ ಮತ್ತು ಅಭಿರಾಮ್ ಅವರ ಇತರ ಸ್ನೇಹಿತರನ್ನು ವಿಚಾರಿಸಿದವು. ಪ್ರಕರಣದಲ್ಲಿ ಭಾಗಿಯಾಗಿರುವ ಬಲಿಪಶು ಸೇರಿದಂತೆ ಮೂವರು ಆಪ್ರಾಪ್ತ ವಯಸ್ಕರು ಮೊದಲೇ ಪರಸ್ಪರ ತಿಳಿದಿದ್ದರು, ಶಂಕಿತ ಸಂಬಂಧದ ಬಗ್ಗೆ ಅವರಿಗೆ ಭಿನ್ನಾಭಿಪ್ರಾಯಗಳಿದ್ದವು ಎಂದು ನಾವು ತೀರ್ಮಾನಿಸಿದ್ದೇವೆ” ಎಂದು ಅಧಿಕಾರಿಯೊಬ್ಬರು ಹೇಳಿದರು.ವಿಚಾರಣೆಯ ನಂತರ, ಹುಡುಗಿ ಪೊಲೀಸರಿಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿದಳು. “ಆಕೆಯ ಪ್ರಕಾರ, ಕೊಲೆ ಮಾಡಿದ್ದು ತನ್ನ ಸ್ನೇಹಿತೆ ಮತ್ತು ಸ್ಥಳೀಯ ಗೊಂಡಾಗ ಮಾಹಿತಿ ನೀಡಿದ್ದಾಳೆ, ಅವರು ಶವವನ್ನು ಬಿಟ್ಟು ಹೋಗಿದ್ದಾರೆ. ಇಬ್ಬರು ಅಪ್ರಾಪ್ತ ವಯಸ್ಕರು ಸೇರಿದಂತೆ ಮೂವರನ್ನು ನಾವು ವಶಕ್ಕೆ ಪಡೆದಿದ್ದೇವೆ” ಎಂದು ಪೊಲೀಸ್ ಅಧಿಕಾರಿ ಹೇಳಿದರು. ಶವದ ಕೈ ಮತ್ತು ಕಾಲುಗಳನ್ನು ಕಟ್ಟಿ ಹಾಕಲಾಗಿತ್ತು.
“ಸಾವಿನ ನಿಖರವಾದ ಸಮಯವನ್ನು ನಾವು ಇನ್ನೂ ಸ್ಥಾಪಿಸಿಲ್ಲ, ಮರಣೋತ್ತರ ಪರೀಕ್ಷೆಯನ್ನು ಮಂಗಳವಾರ ನಡೆಸಲಾಗುವುದು, ಸ್ಥಳೀಯ ಗೂಂಡಾ ಒಮರ್ ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಅಪರಾಧದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾನೆ. ಮೊದಲ ಆರೋಪಿ, ಅಪ್ರಾಪ್ತ ವಯಸ್ಕ, ಅಪರಾದದ ಇತಿಹಾಸವನ್ನು ಹೊಂದಿದ್ದಾನ ಮತ್ತು ಒಮರ್ ಜೊತೆಗೆ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಕೊಲೆಯನ್ನು ಯೋಜಿಸಲಾಗಿದೆಯೇ ಎಂದು ನಾವು ತನಿಖೆ ನಡೆಸುತ್ತಿದ್ದೇವೆ” ಎಂದು ಶ್ರೀಕಾರ್ಯಂ SHO ಸಜು ಕುಮಾರ್ ಸುದ್ದಿಗಾರರಿಗೆ ತಿಳಿಸಿದರು,
ಶವ ಪತ್ತೆಯಾದ ಸ್ಥಳವು ಪ್ರತ್ಯೇಕ ಪ್ರದೇಶ ಎಂದು ಸ್ಥಳೀಯ ಜನರು ಹೇಳಿದ್ದಾರೆ. “ಈ ಸ್ಥಳದಲ್ಲಿ ದೀಪಗಳಿಲ್ಲ ಮತ್ತು ಸುಲಭವಾಗಿ ಗಮನಕ್ಕೆ ಬರುವುದಿಲ್ಲ, ಶವವನ್ನು ಹೂತುಹಾಕಿ, ಕಾಲುಗಳು ಮತ್ತು ಕೈಗಳನ್ನು ಕಟ್ಟಿದ ನಂತರ ಚೀಲದಲ್ಲಿ ಸುತ್ತಿಡಲಾಗಿತ್ತು. ಪೊಲೀಸರು ಮತ್ತು ವಿಧಿವಿಜ್ಞಾನ ವಿಭಾಗವು ಆ ಪ್ರದೇಶವನ್ನು ಶೋಧಿಸಿದಾಗ ಶವ ಪತ್ತೆಯಾಗಿದೆ” ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದರು.
