Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೊಲೆ ಬೆದರಿಕೆ ಹಾಕಿ ಯುವತಿಯ ಕೈಗೆ ಫೆವಿಕ್ವಿಕ್ ಹಚ್ಚಿದ ಖದೀಮ: ಸಾರ್ವಜನಿಕರಿಂದಲೇ ಸೆರೆ!

Spread the love

ಬೆಂಗಳೂರು : ನಗರದ ಅತ್ಯಂತ ಜನನಿಬಿಡ ಪ್ರದೇಶವಾದ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ (ಅಕ್ಟೋಬರ್ 31ರಂದು) ನಡೆದ ಈ ಬೆಚ್ಚಿಬೀಳಿಸುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಯನ್ನು ಪ್ರಭುರಾಜ್ ಅಲಿಯಾಸ್ ರಾಜ್ ಎಂದು ಗುರುತಿಸಲಾಗಿದೆ.

ಕೊ*ಲೆ ಮಾಡ್ತಾರೆಂದು ನುಗ್ಗಿ ಕೈಗೆ ಫೆವಿಕ್ವಿಕ್ ಹಚ್ಚಿದ ಖದೀಮ!

ಅಕ್ಟೋಬ‌ರ್ 31ರ ಬೆಳಿಗ್ಗೆ ಸುಮಾರು 11:45ರ ವೇಳೆಗೆ ಇಂದಿರಾನಗರದ ಪ್ರೀಮಿಯಂ ಶೂ ಮತ್ತು ಬ್ಯಾಗ್ ರಿಪೇರಿ ಅಂಗಡಿಯಲ್ಲಿ ಜಯಶ್ರೀ ಎಂಬ ಯುವತಿ ಎಂದಿನಂತೆ ಕೆಲಸ ಮಾಡುತ್ತಿದ್ದರು. ಈ ವೇಳೆ ಅಂಗಡಿಗೆ ಏಕಾಏಕಿ ನುಗ್ಗಿದ ಪ್ರಭುರಾಜ್, ‘ನನ್ನನ್ನು ಯಾರೋ ಕೊಲೆ ಮಾಡಲು ಬೆನ್ನಟ್ಟಿದ್ದಾರೆ, ರಕ್ಷಿಸಿ’ ಎಂದು ನಾಟಕವಾಡಿದ್ದಾನೆ. ಯುವತಿ ಆತಂಕಗೊಳ್ಳುತ್ತಿದ್ದಂತೆಯೇ ತನ್ನ ಅಸಲಿ ರೂಪ ತೋರಿಸಿದ ಖದೀಮ, ಆಕೆಯ ಕುತ್ತಿಗೆಗೆ ಚಾಕು ಇಟ್ಟು ಹೆದರಿಸಿದ್ದಾನೆ.

ಯುವತಿ ಪ್ರತಿರೋಧ ಒಡ್ಡಬಾರದು ಮತ್ತು ಓಡಿಹೋಗಬಾರದು ಎಂಬ ದುರುದ್ದೇಶದಿಂದ ತನ್ನ ಬಳಿಯಿದ್ದ ಫೆವಿಕ್ವಿಕ್ (Fevikwik) ಅನ್ನು ಆಕೆಯ ಎರಡೂ ಕೈಗಳಿಗೆ ಸುರಿದು ಅಂಗಡಿಯ ಟೇಬಲ್‌ಗೆ ಬಲವಾಗಿ ಅಂಟಿಸಿದ್ದಾನೆ. ಬಳಿಕ ಆಕೆಯ ಕುತ್ತಿಗೆಯಲ್ಲಿದ್ದ ಬರೋಬ್ಬರಿ 4.5 ಲಕ್ಷ ರೂ. ಮೌಲ್ಯದ 35 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಸಿದುಕೊಂಡಿದ್ದಾನೆ.ಕುತ್ತಿಗೆಗೆ ಚಾಕು ಇಟ್ಟು ಕೊ*ಲೆ ಬೆದರಿಕೆ: ರಕ್ಷಿಸಿದ ಸಾರ್ವಜನಿಕರು!

ಸರ ಕಿತ್ತುಕೊಳ್ಳುತ್ತಿದ್ದಂತೆಯೇ ಜೀವಭಯದಿಂದ ಯುವತಿ ಜಯಶ್ರೀ ಜೋರಾಗಿ ಕೂಗಿಕೊಂಡಿದ್ದಾರೆ. ಆಕೆಯ ಧ್ವನಿ ಕೇಳಿ ಅಕ್ಕಪಕ್ಕದ ಅಂಗಡಿಯವರು ಹಾಗೂ ಸಾರ್ವಜನಿಕರು ತಕ್ಷಣ ಅಂಗಡಿಯತ್ತ ಧಾವಿಸಿದ್ದಾರೆ. ಜನ ಒಳಗೆ ಬರುತ್ತಿದ್ದಂತೆ ಗಾಬರಿಗೊಂಡ ಆರೋಪಿ, ಯುವತಿಯ ಕುತ್ತಿಗೆಗೆ ಚಾಕು ಹಿಡಿದು, ‘ಯಾರಾದರೂ ಹತ್ತಿರ ಬಂದರೆ ಈಕೆಯನ್ನು ಕೊಲೆ ಮಾಡುತ್ತೇನೆ’ ಎಂದು ಬೆದರಿಸಿ ಸಿನೆಮಾ ಮಾದರಿಯಲ್ಲಿ ಅಲ್ಲಿಂದ ಎಸ್ಕೆಪ್ ಆಗುವುದಕ್ಕೆ ಹೈಡ್ರಾಮಾ ಸೃಷ್ಟಿಸಿದ್ದಾನೆ. ಆದರೆ ಧೃತಿಗೆಡದ ಸ್ಥಳೀಯರು ಸಮಯಪ್ರಜ್ಞೆ ಮೆರೆದು, ಚಾಣಾಕ್ಷತನದಿಂದ ಖದೀಮನ ಗಮನ ಬೇರೆಡೆ ಸೆಳೆದು ಆತನನ್ನು ಹಿಡಿದು ಯುವತಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಖದೀಮನಿಗೆ ಹಿಗ್ಗಾಮುಗ್ಗಾ ಗೂಸ: ಜೈಲಿಗಟ್ಟಿದ ಪೊಲೀಸರು

ಸಿಕ್ಕಿಬಿದ್ದ ಪ್ರಭುರಾಜ್‌ಗೆ ಸ್ಥಳೀಯರು ಹಿಗ್ಗಾಮುಗ್ಗಾ ಧರ್ಮದೇಟು ನೀಡಿ ಇಂದಿರಾನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಾಳು ಯುವತಿಯನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಆರೋಪಿ ಪ್ರಭುರಾಜ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *