Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಆಂಧ್ರ ಪ್ರದೇಶದಲ್ಲಿ ಮುರಸು ಚಂಡಮಾರುತದ ಅಟ್ಟಹಾಸ: ಪ್ರವಾಹ ಪರಿಸ್ಥಿತಿ, ತತ್ತರಿಸಿದ ವಿಶಾಖಪಟ್ಟಣಂ!

Spread the love

ಅಮರಾವತಿ: ಆಂಧ್ರ ಪ್ರದೇಶದಲ್ಲಿ ಮುರಸು ಚಂಡಮಾರುತದ ಅರ್ಭಟ ತೀವ್ರವಾಗಿದ್ದು ರಾಜ್ಯದ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವರದಿಯಾಗಿದೆ. ವಿಶಾಖಪಟ್ಟಣಂ ಜಿಲ್ಲೆಯಾದ್ಯಂತ ವ್ಯಾಪಕ ಪ್ರಮಾಣದ ಹಾನಿಯುಂಟಾಗಿದ್ದು ತಗ್ಗುಪ್ರದೇಶಗಳು ಜಲಾವೃತಗೊಂಡಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಪ್ರತಿಕೂಲ ಹವಾಮಾನದಿಂದಾಗಿ ವಾಹನಗಳು ರಸ್ತೆಗಳಲ್ಲೇ ನಿಂತಿರುವ, ಮಗುಚಿ ಬಿದ್ದಿರುವ ದೃಶ್ಯಗಳು ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಕಂಡು ಬಂದಿದೆ.
ಮುರಸು ಚಂಡಮಾರುತದಿಂದಾಗಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಮಂಗಳವಾರ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ತಗ್ಗುಪ್ರದೇಶಗಳು ಜಲಾವೃತಗೊಂಡಿವೆ.
ಮುಂಜಾನೆ 3.30ರಿಂದ 5.30ರ ನಡುವೆ ಪ್ರಕಾಶಂ ಜಿಲ್ಲೆಯ ಒಂಗೋಲೆಗೆ ಸಮೀಪದ ನರಸಾಪುರ ಮತ್ತು ನೆಲ್ಲೂರು ನಡುವೆ ಇರುವ ದಕ್ಷಿಣ ಆಂಧ್ರ ಪ್ರದೇಶ ಕರಾವಳಿ ಪ್ರದೇಶದ ಮೂಲಕ ಮರಸು ಚಂಡಮಾರುತ ರಾಜ್ಯವನ್ನು ಪ್ರವೇಶಿಸಿದೆ.
ಪ್ರಾರಂಭದಲ್ಲಿ ಪ್ರತಿ ಗಂಟೆಗೆ 100ರಿಂದ 110 ಕಿಮೀ ವೇಗ ಹೊಂದಿದ್ದ ಗಾಳಿ, ಬಳಿಕ ಪ್ರತಿ ಗಂಟೆಗೆ 120 ಕಿಮೀ ವೇಗ ಪಡೆದುಕೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.


Spread the love
Share:

administrator

Leave a Reply

Your email address will not be published. Required fields are marked *