ಅಮೆರಿಕ: ಮಿಸೌರಿಯಲ್ಲಿ ಭೀಕರ ವಿಮಾನ ದುರಂತ; ಸ್ಕೈಡೈವರ್ಸ್ ಪ್ರಯಾಣಿಸುತ್ತಿದ್ದ ಪ್ಲೇನ್ ಕ್ರಾಶ್ ಆಗಿ 12 ಮಂದಿ ದುರ್ಮ*ರಣ!

ಮಿಸ್ಟೋರಿ: ಇಲ್ಲಿನ ಬಟ್ಲರ್ ಸ್ಮಾರಕ ವಿಮಾನ ನಿಲ್ದಾಣದ ಬಳಿಯ ಮೈದಾನದಲ್ಲಿ ಸೈಡೈವರ್ಸ್ ಅವರನ್ನು ಕರೆದೊಯ್ಯುತ್ತಿದ್ದ ವಿಮಾನವೊಂದು ಪತನಗೊಂಡು ಎಲ್ಲ 12 ಮಂದಿ ಮೃತಪಟ್ಟಿದ್ದಾರೆ. ಪತನಗೊಂಡ ವಿಮಾನ ಬೆಂಕಿ ಹತ್ತಿಕೊಂಡು ದಟ್ಟ ಹೊಗೆಯಿಂದ ಆವೃತವಾಗಿರುವ ದೃಶ್ಯಾವಳಿಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಪರಿಹಾರ ಕಾರ್ಯದಲ್ಲಿ ಬಟ್ಲರ್ ಪೊಲೀಸ್ ಠಾಣೆ ಮತ್ತು ಕೌಂಟಿ ಶ್ರಾಫ್ ಅಧಿಕಾರಿಗಳಿಗೆ ನೆರವಾಗುತ್ತಿರುವುದಾಗಿ ಮಿಸ್ಪೋರಿ ರಾಜ್ಯ ಹೆದ್ದಾರಿ ಗಸ್ತು ಪಡೆ ಹೇಳಿದೆ. ಕಾನ್ಸಸ್ ನಗರದಿಂದ 65 ಕಿಲೋಮೀಟರ್ ದಕ್ಷಿಣದ ಬಟ್ಲರ್ ಎಂಬ ಪಟ್ಟಣದಲ್ಲಿ ಈ ದುರಂತ ಸಂಭವಿಸಿದೆ.

ಸೈಡೈವರ್ಗಳನ್ನು ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ ವಿಮಾನ ಬೆಳಿಗ್ಗೆ 11.30ರ ವೇಳೆಗೆ ತುರ್ತು ಸಂದೇಶವನ್ನು ರವಾನಿಸಿದೆ. ವಿಮಾನ ಪತನಗೊಂಡು ಬೆಂಕಿ ಹತ್ತಿಕೊಂಡಿದೆ ಎಂದು ಮಿಸ್ಟೋರಿ ಹೆದ್ದಾರಿ ಗಸ್ತು ವಿಭಾಗದ ಸಾರ್ಜಂಟ್ ಜೆಸ್ಟಿನ್ ಇವಿಂಗ್ ಹೇಳಿದ್ದಾರೆ.
ದಟ್ಟ ಹೊಗೆಯಿಂದ ಆವರಿಸಿದ್ದ ವಿಮಾನದ ಅವಶೇಷಗಳ ಬಳಿಗೆ ತೆರಳಿ ತುರ್ತು ಸ್ಪಂದನಾ ಪಡೆಯವರು ಸ್ಪಂದಿಸುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ. ತಕ್ಷಣವೇ ಬೆಂಕಿ ನಂದಿಸಿದ್ದು, ಈ ಚಿತ್ರಣ ಅತ್ಯಂತ ಭಯಾನಕವಾಗಿತ್ತು ಎಂದು ಸಿಬ್ಬಂದಿ ಬಣ್ಣಿಸಿದ್ದಾರೆ.