Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಿಲ್‌ನಲ್ಲಿ ವೆಜ್ ಬಿರಿಯಾನಿ, ಪ್ಲೇಟ್‌ನಲ್ಲಿ ಚಿಕನ್: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎಡವಟ್ಟು!

Spread the love

ಬೆಂಗಳೂರು: ವೆಜ್ ಬಿರಿಯಾನಿ ಆರ್ಡರ್ ಮಾಡಿದ ಸಸ್ಯಾಹಾರಿ ಕುಟುಂಬಕ್ಕೆ ಚಿಕನ್ ಬಿರಿಯಾನಿ (Chicken Biryani) ನೀಡಲಾಗಿದೆ ಎಂಬ ಗಂಭೀರ ಆರೋಪ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಕೇಳಿಬಂದಿದೆ.

ಸಸ್ಯಾಹಾರಿ ಕುಟುಂಬದ ಮಕ್ಕಳು ಕೂಡ ಅರಿವಿಲ್ಲದೆ ಮಾಂಸಾಹಾರ ಸೇವಿಸಿದ್ದಾರೆ ಎನ್ನಲಾಗಿದ್ದು, ಘಟನೆ ಸಂಬಂಧ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1ರ ಗೇಟ್ ಸಂಖ್ಯೆ 16-17ರ ಸಮೀಪವಿರುವ ಟೇಸ್ಟ್ ಆಫ್ ಇಂಡಿಯಾ ರೆಸ್ಟೋರೆಂಟ್ ವಿರುದ್ಧ ಈ ಆರೋಪ ಕೇಳಿಬಂದಿದೆ. ಬಿಲ್‌ನಲ್ಲಿ ವೆಜ್ ಬಿರಿಯಾನಿ, ಪ್ಲೇಟ್‌ನಲ್ಲಿ ಚಿಕನ್ ಬಿರಿಯಾನಿ:
ಪಿಯೂಷ್ ಅಗರ್ವಾಲ್ ಎಂಬುವವರ ಕುಟುಂಬ ರೆಸ್ಟೋರೆಂಟ್‌ನಲ್ಲಿ ವೆಜ್ ಬಿರಿಯಾನಿ ಆರ್ಡರ್ ಮಾಡಿತ್ತು ಎನ್ನಲಾಗಿದೆ. ರೆಸ್ಟೋರೆಂಟ್ ನೀಡಿದ ಬಿಲ್‌ನಲ್ಲಿಯೂ ವೆಜ್ ಬಿರಿಯಾನಿ ಎಂದೇ ನಮೂದಿಸಲಾಗಿತ್ತು. ಆದರೆ ಕುಟುಂಬಕ್ಕೆ ನೀಡಿದ ಆಹಾರದಲ್ಲಿ ಚಿಕನ್ ತುಂಡುಗಳು ಪತ್ತೆಯಾಗಿವೆ ಎಂದು ಆರೋಪಿಸಲಾಗಿದೆ. ಸಸ್ಯಾಹಾರಿ ಕುಟುಂಬದ ಸದಸ್ಯರು ಹಾಗೂ ಮಕ್ಕಳು ಆಹಾರದಲ್ಲಿ ಮಾಂಸ ಇರುವುದನ್ನು ಅರಿಯದೆ ಸೇವಿಸಿದ್ದಾರೆ ಎಂದು ಪಿಯೂಷ್ ಅಗರ್ವಾಲ್ ಆರೋಪಿಸಿದ್ದಾರೆ.
ರೆಸ್ಟೋರೆಂಟ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಕುಟುಂಬ:
ಆಹಾರದಲ್ಲಿ ಚಿಕನ್ ಇರುವುದನ್ನು ಗಮನಿಸಿದ ಕುಟುಂಬಸ್ಥರು ರೆಸ್ಟೋರೆಂಟ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಆಹಾರದಲ್ಲಿ ಚಿಕನ್ ಇರುವುದನ್ನು ರೆಸ್ಟೋರೆಂಟ್ ಮ್ಯಾನೇಜರ್ ಹಾಗೂ ಶೆಫ್ ಒಪ್ಪಿಕೊಂಡಿದ್ದಾರೆ ಎಂದು ಕುಟುಂಬದವರು ಹೇಳಿಕೊಂಡಿದ್ದಾರೆ. ಸಸ್ಯಾಹಾರಿ ಆಹಾರ ಆರ್ಡರ್ ಮಾಡಿದರೂ ಮಾಂಸಾಹಾರ ನೀಡಿರುವುದು ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *