Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಯುವತಿ ಎಂದು ನಂಬಿಸಿ ಮನೆಗೆ ಬಂದ ಮಂಗಳಮುಖಿಯರು: ₹20 ಲಕ್ಷದ ಚಿನ್ನಾಭರಣ ಸುಲಿಗೆ!

Spread the love

ಬೆಂಗಳೂರು: ಡೇಟಿಂಗ್ ಆ್ಯಪ್‌ನಲ್ಲಿ (Dating App) ಪರಿಚಯವಾದ ಯುವತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಮಂಗಳಮುಖಿಯರು ಶಾಕ್ ಕೊಟ್ಟಿದ್ದಾರೆ. ಮನೆಗೆ ಬಂದವರು 20 ಲಕ್ಷ ಮೌಲ್ಯದ ಚಿನ್ನಾಭರಣ ಸುಲಿಗೆ (Crime) ಮಾಡಿದ ಘಟನೆ ಬೆಂಗಳೂರಿನ ಚಂದ್ರ ಲೇಔಟ್‌ನಲ್ಲಿ ನಡೆದಿದೆ.
ಘಟನೆಯ ಸಂಬಂಧ ನಾಜಿಯಾ ಮತ್ತು ಸೈಯದ್ ಮೌಷೀನ್ ಎಂಬ ಮಂಗಳಮುಖಿಯರನ್ನು ಪೊಲೀಸರು ಬಂಧಿಸಿದ್ದಾರೆ.
ಹರ್ಷವರ್ಧನ್ ಎಂಬುವವರಿಗೆ ಡೇಟಿಂಗ್ ಆ್ಯಪ್‌ನಲ್ಲಿ ಯುವತಿಯ ಹೆಸರಿನಲ್ಲಿ ಮಂಗಳಮುಖಿಯೊಬ್ಬಳು ಪರಿಚಯವಾಗಿದ್ದಳು. ಖಾಸಗಿ ಸಂಸ್ಥೆ ಉದ್ಯೋಗಿಯೊಬ್ಬರು ನಾಗರಭಾವಿಯಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಕಳೆದ ಅ. 22 ರಂದು ತಮಿಳುನಾಡಿಗೆ ಹೋಗಬೇಕಾಗಿದ್ದ ಕಾರಣ ಮನೆಗೆ ಬಂದಿದ್ದ ಸ್ನೇಹಿತ ಹರ್ಷವರ್ಧನ್‌ಗೆ ಮನೆ ಕೀ ಕೊಟ್ಟಿದ್ದರು. ಈ ವೇಳೆ ಹರ್ಷವರ್ಧನ್ ಡೇಟಿಂಗ್ ಆ್ಯಪ್ ಮೂಲಕ ಚಾಟ್ ಮಾಡಿ ಯುವತಿಯನ್ನು ತಾನಿದ್ದ ಸ್ನೇಹಿತನ ಮನೆಗೆ ಕರೆಸಿಕೊಂಡಿದ್ದಾನೆ.
ಹರ್ಷವರ್ಧನ್ ಯುವತಿ ಅಂತ ಬುಕ್ ಮಾಡಿದ್ರೆ ಮನೆಗೆ ಬಂದಿದ್ದು ಮಂಗಳಮುಖಿ. ಚಾಟ್‌ನಲ್ಲಿ ಯುವತಿ ಎಂದು ಯಾಮಾರಿಸಿದ್ದ ಮಂಗಳಮುಖಿ ಮತ್ತೋರ್ವ ಮಂಗಳಮುಖಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡು, ಹರ್ಷವರ್ಧನನಿಗೆ ಚಾಕು ತೋರಿಸಿ ಬೆದರಿಸಿದ್ದಾರೆ. ಇಬ್ಬರು ಮಂಗಳಮುಖಿಯರು ಮನೆಯ ಕಬೋರ್ಡ್‌ಲ್ಲಿದ್ದ 20 ಲಕ್ಷ ಮೌಲ್ಯದ 226 ಗ್ರಾಂ ಚಿನ್ನಾಭರಣ ಕದ್ದು ಪರಾರಿ ಆಗಿದ್ದಾರೆ. ಇದನ್ನು ಮನೆ ಮಾಲೀಕರಿಗೆ ಹರ್ಷವರ್ಧನ್ ಹೇಳಿದ್ದು, ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಚಂದ್ರಾಲೇಔಟ್ ಪೊಲೀಸರು, ನಾಜಿಯಾ ಮತ್ತು ಸೈಯದ್ ಮೌಷೀನ್ ಎಂಬ ಮಂಗಳಮುಖಿಯರನ್ನು ಬಂಧಿಸಿದ್ದಾರೆ.”


Spread the love
Share:

administrator

Leave a Reply

Your email address will not be published. Required fields are marked *