Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಧ್ಯಪ್ರದೇಶದಲ್ಲಿ ಆಘಾತಕಾರಿ ಘಟನೆ: 4 ವರ್ಷದ ಬಾಲಕನ ಸಾವಿಗೆ 12 ವರ್ಷದ ಬಾಲಕಿ ಕಾರಣ!

Spread the love

ಮಂದಸೌರ್​ (ಮಧ್ಯಪ್ರದೇಶ): ಚಾಕೊಲೇಟ್‌ಗೆ ಸಂಬಂಧಿಸಿದ ಜಗಳವೊಂದರ ವೇಳೆ ಮಹಿಳೆಯೊಬ್ಬರು ಬೈದಿದ್ದಕ್ಕೆ ಸಿಟ್ಟಿಗೆದ್ದ 12 ವರ್ಷದ ಬಾಲಕಿಯೊಬ್ಬಳು ಸೇಡು ತೀರಿಸಿಕೊಳ್ಳಲು, ಆ ಮಹಿಳೆಯ ನಾಲ್ಕು ವರ್ಷದ ಮಗನನ್ನು ನೀರಿನ ಟ್ಯಾಂಕ್‌ಗೆ ತಳ್ಳಿ ಕೊಂದಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಮಂದಸೌರ್​ನಲ್ಲಿನ ಶಾಮ್‌ಗಢದಲ್ಲಿ ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್​ 24ರಂದು 4 ವರ್ಷದ ಬಾಲಕನನ್ನು ಮಹಡಿ ಮೇಲೆ ಕರೆದೊಯ್ದು, ಅಲ್ಲಿ ಮೇಲ್ಚಾವಣಿ ಮೇಲಿದ್ದ ನೀರಿನ ಟ್ಯಾಂಕ್​ಗೆ ತಳ್ಳಿ ಬಳಿಕ ಅದನ್ನು ಕಲ್ಲಿನ ಚಪ್ಪಟೆಯಿಂದ ಬಾಲಕಿ ಮುಚ್ಚಿದ್ದಾಳೆ ಎಂದು ಮಂದಸೌರ್ ಪೊಲೀಸ್ ವರಿಷ್ಠಾಧಿಕಾರಿ ವಿನೋದ್ ಮೀನಾ ಮಾಹಿತಿ ನೀಡಿದ್ದಾರೆ.
ಸಾವನ್ನಪ್ಪಿದ ಬಾಲಕ ಮತ್ತು ಕೃತ್ಯ ಎಸಗಿದ ಬಾಲಕಿ ನೆರೆಹೊರೆಯ ಮನೆಯ ನಿವಾಸಿಗಳಾಗಿದ್ದಾರೆ. 4 ವರ್ಷದ ಬಾಲಕನ ತಾಯಿ ಬೈಯ್ದ ಹಿನ್ನೆಲೆ ಸಿಟ್ಟಿಗೆದ್ದ 12ರ ಬಾಲಕಿ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕೃತ್ಯ ಎಸಗಿದ ಬಾಲಕಿಯನ್ನು ವಶಕ್ಕೆ ಪಡೆಯಲಾಗಿದ್ದು, ಈ ಕುರಿತು ತನಿಖೆ ಸಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಮನೆ ಕುಸಿದು ಎರಡು ಸಾವು: ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ಛತರಿ ಪ್ರದೇಶದಲ್ಲಿ ಎರಡು ಅಂತಸ್ತಿನ ಮನೆ ಕುಸಿದು ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಮತ್ತೊರ್ವ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸದ್ಯ ರಕ್ಷಣಾ ಕಾರ್ಯ ಸಾಗಿದ್ದು, ಮನೆ ಕುಸಿಯಲು ಕಾರಣ ಏನು ಎಂಬ ತನಿಖೆ ಸಾಗಿದೆ. ಘಟನೆ ಕುರಿತು ಮಾಹಿತಿ ನೀಡಿದ ಛತಾರಿ ನಗರ ಪಂಚಾಯಿತಿ ಅಧ್ಯಕ್ಷ ಹಾಜಿ ಸಲೀಂ, ಈ ಘಟನೆಯಲ್ಲಿ ಮಹಿಳೆಯೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಅಲಿಗಢದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವನ್ನಪ್ಪಿದವರು ತಂದೆ- ಮಗ ಆಗಿದ್ದು, ಗಾಯಗೊಂಡ ಮಹಿಳೆ ಮೃತನ ಪತ್ನಿಯಾಗಿದ್ದಾರೆ.

ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ, ಉತ್ತರ ಪ್ರದೇಶದ ಅಮೇಥಿಯಲ್ಲಿನ ಜಾತ್ರೆಯೊಂದರಲ್ಲಿ ಅಂಗಡಿಯಿಂದ ಕಚೋರಿ ಮತ್ತು ಟಿಕ್ಕಿಗಳನ್ನು ತಿಂದ ಬಳಿಕ 102 ಮಂದಿ ಅಸ್ವಸ್ಥಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ಅಮೇಥಿ ಜಿಲ್ಲೆಯ ಕೋಟ್ವಾ ಗ್ರಾಮದಲ್ಲಿ ನಡೆದ ಜಾತ್ರೆಯಲ್ಲಿ ಆಹಾರದ ಅಂಗಡಿಯನ್ನು ಹಾಕಿದ್ದ ರಾಜಕುಮಾರ್ ಹಾಗೂ ಅಡುಗೆಗೆ ಬಳಸಿದ ಎಣ್ಣೆಯನ್ನು ಒದಗಿಸಿದ್ದ ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶರವಣನ್ ಟಿ. ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *