Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮದ ವೇದಿಕೆಯಲ್ಲಿ ಅಸಭ್ಯ ನೃತ್ಯ: ಬಿಜೆಪಿಯ ನಕಲಿ ಹಿಂದುತ್ವ ಬಯಲು – ‘ದಿ ಸಫ್ರಾನ್ ಫ್ರಂಟ್’ ಆಕ್ರೋಶ

Spread the love

ಮಹಾರಾಷ್ಟ್ರದ ದಹಿಹಂಡಿ ಉತ್ಸವದಲ್ಲಿ ಇತ್ತೀಚೆಗೆ ನಡೆದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳ ಹೆಸರಿನಲ್ಲಿನ ಅಸಭ್ಯ ನೃತ್ಯ ಕಾರ್ಯಕ್ರಮಗಳು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದು. ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದ ದಹಿಹಂಡಿ ಸಮಾರಂಭಗಳಲ್ಲಿ ಅಶ್ಲೀಲ ಹಾಡುಗಳಿಗೆ ನೃತ್ಯಗಳನ್ನು ಪ್ರದರ್ಶಿಸಿರುವುದನ್ನು ‘ದ ಸಫ್ರಾನ್ ಫ್ರಂಟ್’ ತೀವ್ರವಾಗಿ ಖಂಡಿಸಿದೆ. ಈ ವಿಚಾರವಾಗಿ ‘ದ ಸಫ್ರಾನ್ ಫ್ರಂಟ್’ ರಾಷ್ಟ್ರೀಯ ಅಧ್ಯಕ್ಷ ರಾಜೇಶ್ ಪವಿತ್ರನ್ ಮಾಧ್ಯಮದೊಂದಿಗೆ ಮಾತನಾಡಿ, ಹಿಂದೆ ಸಿನೆಮಾಗಳ ಸಣ್ಣ ವಿಷಯಗಳಿಗೂ ದೊಡ್ಡ ಮಟ್ಟದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದವರು, ಈಗ ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರವಿರುವ ರಾಜ್ಯದಲ್ಲಿ ಇಂತಹ ಅಶ್ಲೀಲತೆ ರಾಜಾರೋಷವಾಗಿ ನಡೆಯುತ್ತಿರುವುದು ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದರು. ಸನಾತನ ಸಂಸ್ಕೃತಿಯ ಬಗ್ಗೆ ಬಿಜೆಪಿಯ ಮನಸ್ಥಿತಿ ಜಗಜ್ಜಾಹೀರಾಗಿದ್ದು, ಬಿಜೆಪಿಯ ನಕಲಿ ಹಿಂದುತ್ವವಾದದ ಮುಖವಾಡ ಕಳಚಿಬಿದ್ದಿದೆ; ಇದಕ್ಕೆ ವೇದಿಕೆಯಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಬೃಹತ್ ಚಿತ್ರಗಳು ರಾರಾಜಿಸುತ್ತಿರುವುದು ಸಾಕ್ಷಿಯಾಗಿದೆ ಎಂದರು. ಇದೇ ಸಂದರ್ಭದಲ್ಲಿ “ಕುರಿ ಕಾಯಲು ನರಿಯನ್ನು ಆಯೋಜಿಸಿದಂತೆ” ಎಂಬ ಗಾದೆ ಮಾತನ್ನು ನೆನಪಿಸಿದ ಅವರು,ಸನಾತನ ಧರ್ಮದ ರಕ್ಷಣೆಯ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿಯ ದ್ವಂದ್ವ ನಿಲುವು ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.


Spread the love
Share:

administrator

Leave a Reply

Your email address will not be published. Required fields are marked *