Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹೈದರಾಬಾದ್: ಹಣಕ್ಕಾಗಿ 5 ವರ್ಷದ ಕಂದಮ್ಮನ ಭೀಕರ ಹ*ತ್ಯೆ, ಮಾಜಿ ಸೆಕ್ಯುರಿಟಿ ಗಾರ್ಡ್ ಅರೆಸ್ಟ್!

Spread the love

ಹೈದರಾಬಾದ್ : ಹಣದಾಸೆಗಾಗಿ ವಸತಿ ಸಮುಚ್ಚಯದ ಮಾಜಿ ಸೆಕ್ಯುರಿಟಿ ಗಾರ್ಡ್‌ನೊಬ್ಬ ಐದು ವರ್ಷದ ಕಂದಮ್ಮನನ್ನು ಅಪಹರಿಸಿ, ಕೊಲೆಗೈದು ನೀರಿನ ಸಂಪ್‌ನಲ್ಲಿ ಶವ ಬಚ್ಚಿಟ್ಟಿರುವ ಅತ್ಯಂತ ಕ್ರೂರ ಹಾಗೂ ಅಘಾತಕಾರಿ ಘಟನೆ ತೆಲಂಗಾಣದ ಹೈದರಾಬಾದ್‌ನ ಕೌಕೂರ್ (ಬೊಲ್ಲಾರಂ) ಪ್ರದೇಶದಲ್ಲಿ ನಡೆದಿದೆ. ಬಿಹಾರದ ನಳಂದಾ ಜಿಲ್ಲೆ ಮೂಲದ ವಿಕ್ರಮ್ ಕುಮಾರ್ (ಬಂಧಿತ ಆರೋಪಿ) ಈ ಕೃತ್ಯ ಎಸಗಿದ ನೀಚನಾಗಿದ್ದಾನೆ. ಮೃತ ಬಾಲಕಿಯನ್ನು ವಿಜ್ಞಾನಿ ಮಿಲ್ಟನ್ ಫೆರ್ನಾಂಡಿಸ್ ಮೋಸೆಸ್ ಅವರ 5 ವರ್ಷದ ಮಗಳು ಔರೇಲಿಯಾ ಎಂದು ಗುರುತಿಸಲಾಗಿದೆ.ಬೊಲ್ಲಾರಂನಲ್ಲಿರುವ ‘ಸೀಡ್ ವರ್ಕ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್‌’ನಲ್ಲಿ ಸಂಶೋಧನಾ ವಿಜ್ಞಾನಿಯಾಗಿ ಕೆಲಸ ಮಾಡುತ್ತಿರುವ ಮಿಲ್ಟನ್ ಫೆರ್ನಾಂಡಿಸ್ ಅವರ ಕುಟುಂಬವು ಹೈದರಾಬಾದ್‌ನ ಗೇಟೆಡ್ ಕಮ್ಯುನಿಟಿಯೊಂದರಲ್ಲಿ ವಾಸಿಸುತ್ತಿದೆ. ಅಕ್ಟೋಬರ್ 10 ರ ಸಂಜೆ ಬಾಲಕಿ ಸಮುಚ್ಚಯದ ಕ್ಲಬ್‌ಹೌಸ್ ಬಳಿ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದಳು. ಮಗಳು ಕಾಣೆಯಾದ ಬಗ್ಗೆ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದಂತೆಯೇ, ಅಂದೇ ಸಂಜೆ 7:45 ರ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬ ಪೋಷಕರ ಮೊಬೈಲ್‌ಗೆ ಕರೆ ಮಾಡಿ, ಮಗು ತನ್ನ ವಶದಲ್ಲಿದೆ ಎಂದು ಬೆದರಿಸಿ 20 ಲಕ್ಷ ರೂ. ಸುಲಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದನು. ತಕ್ಷಣ ಪೋಷಕರು ಬೊಲ್ಲಾರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಪ್ರಕರಣದ ಗಂಭೀರತೆ ಅರಿತ ಮಲ್ಕಾಜ್‌ಗಿರಿ ಪೊಲೀಸ್ ಆಯುಕ್ತೆ ಬಿ. ಸುಮತಿ ಅವರ ನೇತೃತ್ವದಲ್ಲಿ 10 ವಿಶೇಷ ತಂಡಗಳು ಕಾರ್ಯಾಚರಣೆಗಿಳಿದಿದ್ದವು. ಕೇವಲ 4 ಗಂಟೆಗಳಲ್ಲಿ ಬರೋಬ್ಬರಿ 130 ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಜಾಲಡಿದ್ದಾರೆ. ಸಿಸಿಟಿವಿ ದೃಶ್ಯದಲ್ಲಿ ಬಾಲಕಿಯ ಹಿಂದೆ ವ್ಯಕ್ತಿಯೊಬ್ಬ ತೆರಳುತ್ತಿರುವುದು ಕಂಡುಬಂದಿದೆ. ಈ ವೇಳೆ ಅದೇ ವಸತಿ ಸಮುಚ್ಚಯದಲ್ಲಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 6 ರವರೆಗೆ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿ ಬಳಿಕ ಕೆಲಸದಿಂದ ತೆಗೆದುಹಾಕಲ್ಪಟ್ಟಿದ್ದ ವಿಕ್ರಮ್ ಕುಮಾರ್ ಮೇಲೆ ಅನುಮಾನಗೊಂಡು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.ವಿಚಾರಣೆ ವೇಳೆ ಆರೋಪಿ ವಿಕ್ರಮ್ ಕುಮಾರ್ ತಪ್ಪೊಪ್ಪಿಕೊಂಡಿದ್ದಾನೆ. “ಹಣಕ್ಕಾಗಿ ಮಗುವನ್ನು ಅಪಹರಿಸಿದ್ದೆ. ಆದರೆ, ಮಗುವಿನ ಪೋಷಕರು 20-25 ಲಕ್ಷ ರೂ. ನೀಡುವವರೆಗೆ ಮಗುವನ್ನು ನನ್ನ ಬಳಿಯೇ ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಕಷ್ಟ ಹಾಗೂ ಮಗು ಅಳುವುದನ್ನು ನಿಲ್ಲಿಸುವುದಿಲ್ಲ ಎಂದು ಭಾವಿಸಿದೆ. ಹೀಗಾಗಿ ಮಗುವಿನ ಕೈ-ಕಾಲುಗಳನ್ನು ಕಟ್ಟಿ, ನೆಲಮಾಳಿಗೆಯಲ್ಲಿದ್ದ (Basement) ಬಳಕೆಯಲ್ಲಿಲ್ಲದ ನೀರಿನ ಸಂಪ್‌ಗೆ (Water Tank) ಎಸೆದು ಕೊಲೆ ಮಾಡಿದೆ” ಎಂದು ಬಾಯ್ದುಬಿಟ್ಟಿದ್ದಾನೆ.ಮತ್ತೊಬ್ಬ ಸೆಕ್ಯುರಿಟಿ ಗಾರ್ಡ್‌ನ ಸಿಮ್ ಕಾರ್ಡ್ ಬಳಸಿ ಪೋಷಕರಿಗೆ ಆತ ಕರೆ ಮಾಡಿದ್ದ ಎಂಬ ಅಂಶವೂ ಬೆಳಕಿಗೆ ಬಂದಿದೆ. ಪೊಲೀಸರು ಶೋಧ ನಡೆಸಿ ಕ್ಲಬ್‌ಹೌಸ್ ನೆಲಮಾಳಿಗೆಯ ನೀರಿನ ಟ್ಯಾಂಕ್‌ನಿಂದ ಬಾಲಕಿಯ ಮೃತದೇಹವನ್ನು ಹೊರತೆಗೆದಿದ್ದಾರೆ. ಈ ಭೀಕರ ಘಟನೆಯು ವಸತಿ ಸಮುಚ್ಚಯಗಳಲ್ಲಿ ಭದ್ರತಾ ಸಿಬ್ಬಂದಿಯ ಹಿನ್ನೆಲೆ ಪರಿಶೀಲನೆ (Background Verification) ಹಾಗೂ ಮಕ್ಕಳ ಸುರಕ್ಷತೆಯ ಬಗ್ಗೆ ಗಂಭೀರ ಕಳವಳ ಮೂಡಿಸಿದೆ.


Spread the love
Share:

administrator

Leave a Reply

Your email address will not be published. Required fields are marked *