Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕಾರಿನ ಮೇಲೆ ಬಿದ್ದ ಕಂಟೇನರ್ ಟ್ರಕ್ – ಒಂದೇ ಕುಟುಂಬದ ಮೂವರು ಸೇರಿದಂತೆ ನಾಲ್ವರು ದುರ್ಮರ*ಣ, 6 ವರ್ಷದ ಮಗು ಪಾರು!”

Spread the love

ಡೆಹ್ರಾಡೂನ್ : ಡೆಹ್ರಾಡೂನ್-ದೆಹಲಿ ಎಕ್ಸ್‌ಪ್ರೆಸ್‌ವೇಯ ರಾಜಧಾನಿ ಪ್ರವೇಶ ದ್ವಾರ ಮೊಹಬ್ಬೇವಾಲಾ ಚೌಕ್ ಬಳಿ ಬುಧವಾರ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಪ್ಲಾಸ್ಟಿಕ್ ಧಾನ್ಯದ ಚೀಲಗಳಿಂದ ತುಂಬಿದ್ದ ಕಂಟೇನರ್ ಟ್ರಕ್ ಕಾರಿನ ಮೇಲೆ ಬಿದ್ದು ಒಂದೇ ಕುಟುಂಬದ ಮೂವರು ಸೇರಿದಂತೆ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಕೇವಲ 6 ವರ್ಷದ ಪುಟ್ಟ ಮಗುವೊಂದು ಪವಾಡಸದೃಶ ರೀತಿಯಲ್ಲಿ ಜೀವಾಪಾಯದಿಂದ ಪಾರಾಗಿದೆ.

ಉತ್ತರ ಪ್ರದೇಶದ ಸಹರಾನ್‌ಪುರ ಮೂಲದ ವಿಶ್ವೇಶ್ ಕಪೂರ್ (38), ಅವರ ಪತ್ನಿ ನಿಶಾ ಆನಂದ್ ಕಪೂರ್ (35), ತಾಯಿ ಕಿರಣ್ ಕಪೂರ್ (63) ಹಾಗೂ 6 ವರ್ಷದ ಮಗ ಸಹರಾನ್‌ಪುರದಿಂದ ಡೆಹ್ರಾಡೂನ್‌ಗೆ ಹುಂಡೈ ಐ20 (i20) ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಡೆಹ್ರಾಡೂನ್‌ನಲ್ಲಿ ವಾಸಿಸುತ್ತಿರುವ ವಿಶ್ವೇಶ್ ಅವರ ಕಿರಿಯ ಸಹೋದರ ದೀಪೇಶ್ ಕಪೂರ್ ಅವರ ಪತ್ನಿ ಗರ್ಭಿಣಿಯಾಗಿದ್ದು, ಆಕೆಯನ್ನು ಭೇಟಿಯಾಗಲು ಕುಟುಂಬ ಸಮೇತ ಖುಷಿಯಿಂದ ತೆರಳುತ್ತಿದ್ದರು. ಆದರೆ ಡೆಹ್ರಾಡೂನ್ ನಗರದ ಗಡಿ ಪ್ರವೇಶಿಸುತ್ತಿದ್ದಂತೆ ಮೊಹಬ್ಬೇವಾಲಾ ಚೌಕ್ ಬಳಿ ನವೆಂಬರ್ 4 ರಂದು ಮಧ್ಯಾಹ್ನ ಸುಮಾರು 3:30 ರ ವೇಳೆಗೆ ಯಮಸ್ವರೂಪಿಯಾಗಿ ಬಂದ ಕಂಟೇನರ್ ಕಾರಿನ ಮೇಲೆ ಬಿದ್ದಿದೆ.

ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ವಿಶ್ವೇಶ್ ಕಪೂರ್, ಪತ್ನಿ ನಿಶಾ ಆನಂದ್, ತಾಯಿ ಕಿರಣ್ ಕಪೂರ್ ಹಾಗೂ ಕಾರು ಚಾಲಕ ನೀರಜ್ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.
ಅದೃಷ್ಟವಶಾತ್ 6 ವರ್ಷದ ಬಾಲಕ ಗಂಭೀರ ಗಾಯಗಳೊಂದಿಗೆ ಬದುಕುಳಿದಿದ್ದು, ಮಗುವನ್ನು ತಕ್ಷಣವೇ ಕೊರೊನಾ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡೆಹ್ರಾಡೂನ್ ಸಿಒ ಸದರ್ ಅಂಕಿತ್ ಕಂಧಾರಿ ತಿಳಿಸಿದ್ದಾರೆ.

ಡೆಹ್ರಾಡೂನ್-ದೆಹಲಿ ಎಕ್ಸ್‌ಪ್ರೆಸ್‌ವೇ ನಿರ್ಮಾಣವಾದಾಗಿನಿಂದ ಮೊಹಬ್ಬೇವಾಲಾ ಚೌಕ್ ವ್ಯಾಪ್ತಿಯು ಭೀಕರ ಅಪಘಾತಗಳ ತಾಣವಾಗಿದೆ. ಪ್ರಸ್ತುತ ವರ್ಷವೊಂದರಲ್ಲೇ ಈ ಜಂಕ್ಷನ್‌ನಲ್ಲಿ 15 ಕ್ಕೂ ಹೆಚ್ಚು ಭೀಕರ ರಸ್ತೆ ಅಪಘಾತಗಳು ಸಂಭವಿಸಿವೆ. ಸ್ಥಳೀಯ ಜಿಲ್ಲಾಡಳಿತ, ಪೊಲೀಸ್ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಹಲವು ಸಲಹೆಗಳನ್ನು ನೀಡಿದ್ದರೂ ಸಹ, ಈ ಅಪಾಯಕಾರಿ ಪ್ರದೇಶವನ್ನು ಇಂದಿಗೂ ಅಧಿಕೃತವಾಗಿ ‘ಬ್ಲ್ಯಾಕ್ ಸ್ಪಾಟ್’ (Black Spot) ಎಂದು ಘೋಷಿಸದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಕೆಲವು ಗಂಟೆಗಳ ಕಾಲ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು. ಕ್ರೇನ್ ನೆರವಿನಿಂದ ಕಂಟೇನರ್ ಹಾಗೂ ಅಜ್ಜರವಾದ ಕಾರನ್ನು ತೆರವುಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಅನವು ಮಾಡಿಕೊಡಲಾಗಿದೆ.  ಘಟನೆಗೆ ಸಂಬಂಧಿಸಿದಂತೆ ಕಂಟೇನರ್ ಚಾಲಕನ ಪ್ರಕರಣ ದಾಖಲಿಸಿಕೊಂಡು ಡೆಹ್ರಾಡೂನ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *