ಏಷ್ಯನ್ ಗೇಮ್ಸ್ ಬಾಕ್ಸಿಂಗ್: ಫೈನಲ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಬರೆದ ಪರ್ವೀನ್ ಹೂಡಾ!

ನಗೋಯಾ: ಭಾರತದ ಖ್ಯಾತ ಮಹಿಳಾ ಬಾಕ್ಸರ್ ಪರ್ವೀನ್ ಹೂಡಾ(Parveen Hooda) ಅವರು ಏಷ್ಯನ್ ಗೇಮ್ಸ್ 2026 ರ ಮಹಿಳೆಯರ 65 ಕೆಜಿ ವಿಭಾಗದ ಬಾಕ್ಸಿಂಗ್(Boxing) ಫೈನಲ್‌ನಲ್ಲಿ ಚಿನ್ನದ ಪದಕ (Gold Medal) ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ.ರೋಮಾಂಚಕ ಫೈನಲ್ ಪಂದ್ಯದಲ್ಲಿ ಪರ್ವೀನ್ ಅವರು ಚೈನೀಸ್ ತೈಪೆಯ ಮಾಜಿ ವಿಶ್ವ ಚಾಂಪಿಯನ್ ಚೆನ್ ನಿಯೆನ್-ಚಿನ್ ಅವರನ್ನು 3-2 ರ ಸ್ಪ್ಲಿಟ್ ನಿರ್ಧಾರದಿಂದ ಸೋಲಿಸಿ ಈ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು. ಈ ಮೂಲಕ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟ 3ನೇ ಭಾರತೀಯ ಮಹಿಳಾ ಬಾಕ್ಸರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆಪರ್ವೀನ್ ಹೂಡಾ ಅವರ ಪ್ರಮುಖ ಸಾಧನೆಗಳು:

- ಏಷ್ಯನ್ ಗೇಮ್ಸ್ (2026): 65 ಕೆಜಿ ವಿಭಾಗದಲ್ಲಿ ಚಿನ್ನದ ಪದಕ.
- ವರ್ಲ್ಡ್ ಬಾಕ್ಸಿಂಗ್ ಕಪ್ ಫೈನಲ್ಸ್ (2025): 60 ಕೆಜಿ ವಿಭಾಗದಲ್ಲಿ ಚಿನ್ನದ ಪದಕ.
- ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ (2022): 63 ಕೆಜಿ ವಿಭಾಗದಲ್ಲಿ ಚಿನ್ನದ ಪದಕ.
- ವಿಶ್ವ ಚಾಂಪಿಯನ್‌ಶಿಪ್ (2022): ಕಂಚಿನ ಪದಕ.
12 ಚಿನ್ನ, 25 ಬೆಳ್ಳಿ, 35 ಕಂಚಿನ ಪದಕ ಸೇರಿ ಒಟ್ಟು 72 ಪದಕ ಪಡೆದಿರುವ ಭಾರತ ಪದಕ ಪಟ್ಟಿಯಲ್ಲಿ 6 ಸ್ಥಾನಕ್ಕೆ ಜಿಗಿದಿದೆ.