ಬಿಜೆಪಿಯವರ ರಾಜಕೀಯ ಕುತಂತ್ರ ಎಳೆಎಳೆಯಾಗಿ ಬಿಚ್ಚಿಡ್ತೀನಿ: ಡಿಕೆಶಿ ವಾಗ್ದಾಳಿ!

ಬೆಂಗಳೂರು: ಬಿಜೆಪಿಯವರ (BJP) ತಂತ್ರ, ಕುತಂತ್ರ ಎಲ್ಲ ಬಿಚ್ಚಿಡ್ತೀನಿ ಎಂದು ಎಸ್‌ಐಆರ್ ವಿಚಾರವಾಗಿ ಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ವಾಗ್ದಾಳಿ ನಡೆಸಿದರು.

ಗಾಂಧಿ ಜಯಂತಿ ಹಿನ್ನೆಲೆ ವಿಧಾನಸೌಧದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ಸಿಎಂ ಮಾಲಾರ್ಪಣೆ ಮಾಡಿದರು. ಜೊತೆಗೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಫೋಟೊಗೂ ಮಾಲಾರ್ಪಣೆ ಮಾಡಿದರು.
54 ಲಕ್ಷ ವೋಟ್ ಡಿಲೀಟ್ ಬಗೆಗಿನ ಹೇಳಿಕೆ ವಿಚಾರವಾಗಿ ಮಾತನಾಡಿದ ಸಿಎಂ, ಬಿಜೆಪಿಯವರ ತಂತ್ರ ಕುತಂತ್ರ ಎಲ್ಲ ಬಿಚ್ಚಿಡ್ತೀನಿ. ಚುನಾವಣಾ ಅಯೋಗ ಏನು ದಡ್ಡರಲ್ಲ. ನನ್ನ ವಿರುದ್ಧ ದೂರು ಕೊಡೋದಿದ್ರೆ ಕೊಡಲಿ, ಸಂತೋಷ. ನಾನು ಈ ಸಂದರ್ಭದಲ್ಲಿ ಮಾತನಾಡಲ್ಲ ಎಂದು ಬಿಜೆಪಿಗೆ ಟಾಂಗ್ ಕೊಟ್ಟರು