Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಎಐ, ರೊಬೊಟಿಕ್ಸ್ ಕ್ಷೇತ್ರದಲ್ಲಿ ಸಾಧನೆ: ಪುಟಿನ್ ಭೇಟಿಯಾದ ಕೇರಳದ ಬಾಲಕ

Spread the love

ಕೊಚ್ಚಿ,: ಚಿಕ್ಕ ವಯಸ್ಸಿನಲ್ಲೇ ತಂತ್ರಜ್ಞಾನದ ಜಗತ್ತಿನಲ್ಲಿ ಆಸಕ್ತಿ ಬೆಳೆಸಿಕೊಂಡು, ಎಐ ಮತ್ತು ರೊಬೊಟಿಕ್ಸ್ ಕ್ಷೇತ್ರದಲ್ಲಿ ತನ್ನದೇ ಆದ ಗುರುತು ಮೂಡಿಸಿರುವ ಕೇರಳದ ಯುವ ಪ್ರತಿಭೆ ಈಗ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಮನರಂಜನೆಗಾಗಿ ವಿಡಿಯೋ ಮಾಡುತ್ತಿದ್ದ ಬಾಲಕನೊಬ್ಬ ರಷ್ಯಾ ಅಧ್ಯಕ್ಷ ಅವರನ್ನು ಭೇಟಿಯಾಗುವ ಅವಕಾಶ ಪಡೆದಿದ್ದಾರೆ. ಈ ಅಪರೂಪದ ಕ್ಷಣವನ್ನು ನೆನೆದು ‘ರಾಹುಲ್ ದಿ ರಾಕ್‌ಸ್ಟಾರ್’ ಎಂದೇ ಪರಿಚಿತರಾಗಿರುವ ರಾಹುಲ್ ಜಾನ್ ಅಜು ಇನ್‌ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಪುಟಿನ್ ಭೇಟಿಯ ಬಗ್ಗೆ ಭಾವುಕ ಪೋಸ್ಟ್

ರಾಹುಲ್ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ, “ಇನ್ನೂ ಈ ಕ್ಷಣವನ್ನು ಅರಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಚಿಕ್ಕ ಮಗುವಾಗಿದ್ದಾಗ ಕೇವಲ ಮೋಜಿಗಾಗಿ ವಿಡಿಯೋಗಳನ್ನು ಮಾಡುತ್ತಿದ್ದ ನಾನು, 17ನೇ ವಯಸ್ಸಿಗೆ ಅಧ್ಯಕ್ಷ ಪುಟಿನ್ ಅವರನ್ನು ಭೇಟಿಯಾಗುತ್ತೇನೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ. ಜೀವನ ನನಗೆ ಇಂತಹ ಅವಕಾಶಗಳನ್ನು ನೀಡಿದೆ. ಇನ್ನೂ ಕಲಿಯುವುದು ಬಹಳಷ್ಟಿದೆ, ಸಾಧಿಸುವುದು ಇನ್ನೂ ಹೆಚ್ಚಿದೆ. ಈ ಪ್ರಯಾಣದಲ್ಲಿ ಜೊತೆಯಾದ ಪ್ರತಿಯೊಬ್ಬರಿಗೂ ಕೃತಜ್ಞತೆಗಳು” ಎಂದು ಬರೆದುಕೊಂಡಿದ್ದಾರೆ.ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿರುವ ಅವರು, ಈ ಹಂತದವರೆಗೆ ಬರಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.

ಯಾರು ಈ ರಾಹುಲ್ ಜಾನ್ ಅಜು?

ಕೇರಳದ ಕೊಚ್ಚಿಯ ರಾಹುಲ್ ಜಾನ್ ಅಜು ಉದ್ಯಮಿ, ಡೆವಲಪರ್ ಮತ್ತು ಭಾಷಣಕಾರರಾಗಿ ಗುರುತಿಸಿಕೊಂಡಿದ್ದಾರೆ. ‘ಎಐ ಕಿಡ್ ಆಫ್ ಇಂಡಿಯಾ’ ಎಂದೇ ಪ್ರಸಿದ್ಧರಾಗಿರುವ ಅವರು ಚಿಕ್ಕ ವಯಸ್ಸಿನಿಂದಲೇ ಕೃತಕ ಬುದ್ಧಿಮತ್ತೆ (AI) ಮತ್ತು ರೊಬೊಟಿಕ್ಸ್ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ.

ಸ್ವಯಂ ಕಲಿಕೆಯ ಮೂಲಕ ತಂತ್ರಜ್ಞಾನದ ವಿವಿಧ ವಿಷಯಗಳನ್ನು ಅಭ್ಯಾಸ ಮಾಡಿರುವ ರಾಹುಲ್, AI Realm Technologies ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ತಂತ್ರಜ್ಞಾನವನ್ನು ಕೇವಲ ಕಲಿಯುವುದಷ್ಟೇ ಅಲ್ಲದೆ, ಇತರರಿಗೂ ಅದರ ಜ್ಞಾನ ತಲುಪಿಸಬೇಕು ಎಂಬ ಉದ್ದೇಶದಿಂದ ಉಚಿತ ಎಐ ಶಿಕ್ಷಣ ಕಾರ್ಯಕ್ರಮಗಳನ್ನೂ ನಡೆಸುತ್ತಿದ್ದಾರೆ.

ಯುವಜನರಿಗೆ ಎಐ ಶಿಕ್ಷಣ ನೀಡುವ ಪ್ರಯತ್ನ

ರಾಹುಲ್ ಅವರ ಪ್ರಮುಖ ಪ್ರಯತ್ನಗಳಲ್ಲಿ ಥಿಂಕ್ ಕ್ರಾಫ್ಟ್​ ಅಕಾಡೆಮಿ ಕೂಡ ಒಂದು. ಇದರ ಮೂಲಕ ವಿದ್ಯಾರ್ಥಿಗಳು ಮತ್ತು ಯುವಜನರಿಗೆ ಕೃತಕ ಬುದ್ಧಿಮತ್ತೆಯ ಬಗ್ಗೆ ತಿಳಿವಳಿಕೆ ನೀಡುವ ಉದ್ದೇಶ ಹೊಂದಿದ್ದಾರೆ. ಇಂದಿನ ದಿನಗಳಲ್ಲಿ ಎಐ ತಂತ್ರಜ್ಞಾನ ಶಿಕ್ಷಣ, ಉದ್ಯೋಗ, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವೇಗವಾಗಿ ಬೆಳೆಯುತ್ತಿದೆ. ಇಂತಹ ಸಂದರ್ಭದಲ್ಲಿ ಯುವಜನರಿಗೆ ಎಐ ಕುರಿತು ಆರಂಭಿಕ ಹಂತದಲ್ಲೇ ಜ್ಞಾನ ನೀಡುವುದು ಅಗತ್ಯ ಎಂಬ ನಿಟ್ಟಿನಲ್ಲಿ ರಾಹುಲ್ ಕೆಲಸ ಮಾಡುತ್ತಿದ್ದಾರೆ.

ಇನ್ನೂ ಕಲಿಯಬೇಕು, ಸಾಧಿಸಬೇಕು ಎಂಬ ಗುರಿ

ಪುಟಿನ್ ಭೇಟಿಯನ್ನು ತಮ್ಮ ಜೀವನದ ಮಹತ್ವದ ಅನುಭವವೆಂದು ಪರಿಗಣಿಸಿರುವ ರಾಹುಲ್, ಇದನ್ನೇ ತಮ್ಮ ಸಾಧನೆಯ ಅಂತಿಮ ಹಂತ ಎಂದು ಭಾವಿಸಿಲ್ಲ. ಬದಲಿಗೆ ಇನ್ನಷ್ಟು ಕಲಿಯಬೇಕು, ಹೊಸ ಅವಕಾಶಗಳನ್ನು ಬಳಸಿಕೊಳ್ಳಬೇಕು ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಬಾಲ್ಯದಲ್ಲಿ ಹವ್ಯಾಸವಾಗಿ ಆರಂಭಿಸಿದ ವಿಡಿಯೋಗಳಿಂದ ಉದ್ಯಮಶೀಲತೆ ಮತ್ತು ಎಐ ಕ್ಷೇತ್ರದ ಕೆಲಸಗಳವರೆಗೆ ಬೆಳೆದ ಅವರ ಪ್ರಯಾಣ ಈಗ ಹಲವರ ಗಮನ ಸೆಳೆಯುತ್ತಿದೆ.


Spread the love
Share:

administrator

Leave a Reply

Your email address will not be published. Required fields are marked *