Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭಾರತದ ಸ್ವದೇಶಿ ಡ್ರೋನ್ ಬೇಟೆಗಾರ ‘ಭಾರ್ಗವಾಸ್ತ್ರ’ ಪರೀಕ್ಷೆ ಯಶಸ್ವಿ; ಶತ್ರು ರಾಷ್ಟ್ರಗಳಿಗೆ ಎಚ್ಚರಿಕೆ!

Spread the love

ಜೈಪುರ: ಭಾರತದ ಮೊಟ್ಟಮೊದಲ ಸ್ವದೇಶಿ ವಿನ್ಯಾಸದ, ಎರಡು ಹಂತದಲ್ಲಿ ಅಭಿವೃದ್ಧಿಪಡಿಸಲಾಗಿರುವ, ವಾಹನದ ಮೇಲೆ ಅಳವಡಿಸಬಹುದಾದ, ಡ್ರೋನ್ ಬೇಟೆಗಾರ `ಭಾರ್ಗವಾಸ್ತ್ರ’ (Bhargavastra) ತನ್ನ ಅಭಿವೃದ್ಧಿ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ರಾಜಸ್ಥಾನದ (Rajasthan) ಪೋಖ್ರಾನ್ (Pokhran) ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ಗುರುವಾರ (ನ.26) ಸ್ವದೇಶಿ ತಂತ್ರಜ್ಞಾನದ ಸಾಮರ್ಥ್ಯವನ್ನು ಪ್ರದರ್ಶನ ಮಾಡಿದ್ದು, ಈ ವಾಯು ರಕ್ಷಣಾ ವ್ಯವಸ್ಥೆಯ ಆಂತರಿಕ ಅಭಿವೃದ್ಧಿ ಪರೀಕ್ಷೆಗಳನ್ನು ನವೆಂಬರ್ 20 ರಿಂದ 24 ರವರೆಗೆ ನಡೆಸಲಾಗಿದೆ. ಇದು ಶತ್ರುಗಳ ಡ್ರೋನ್‌ಗಳ ಮೇಲೆ ದಾಳಿ ಹಾಗೂ ಏಕಕಾಲದಲ್ಲಿ ಗುಂಪು ಗುಂಪಾಗಿ ಬರುವ ಡ್ರೋನ್‌ಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.

ಎರಡು ಹಂತದ ರಕ್ಷಣಾ ವ್ಯವಸ್ಥೆ
ಭಾರ್ಗವಾಸ್ತ್ರವನ್ನು ಎರಡು ಆವೃತ್ತಿಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ. ಆವೃತ್ತಿ-1 ವಾಯು ರಕ್ಷಣಾ ರಾಕೆಟ್‌ಗಳನ್ನು ಬಳಸಿದರೆ, ಆವೃತ್ತಿ-2 ನಿಖರವಾದ ದಾಳಿಗಾಗಿ ಸ್ವಯಂಚಾಲಿತ ಮಾರ್ಗದರ್ಶನ ಹೊಂದಿದೆ. ಈ ವ್ಯವಸ್ಥೆಯ ಪತ್ತೆ ಮತ್ತು ಟ್ರ‍್ಯಾಕಿಂಗ್ ನೆಟ್‌ವರ್ಕ್‌ನಲ್ಲಿ ರೇಡಿಯೋ-ಫ್ರೀಕ್ವೆನ್ಸಿ ಡಿಟೆಕ್ಟರ್‌ಗಳು ಮತ್ತು ರಾಡಾರ್‌ಗಳನ್ನು ಒಳಗೊಂಡಿದೆ.

ಈ ಡ್ರೋನ್‌ನಲ್ಲಿ ವಾಯು ರಕ್ಷಣಾ ರಾಕೆಟ್‌ಗಳು ಮತ್ತು ನಿಖರವಾಗಿ ಗುರಿ ತಲುಪುವ ಮಾರ್ಗದರ್ಶಿತ ಸೂಕ್ಷ್ಮ ಕ್ಷಿಪಣಿಗಳನ್ನು ಬಳಕೆ ಮಾಡಲಾಗುತ್ತದೆ. ಜೊತೆಗೆ ಇದು ರಾಡಾರ್, ಸಂವೇದಕಗಳು ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ನಿಯಂತ್ರಣ ವ್ಯವಸ್ಥೆಯ ನೆರವಿನಿಂದ ಡ್ರೋನ್‌ಗಳ ಪತ್ತೆ ಮತ್ತು ನಿಗಾವಹಿಸಲಿದೆ.

ಈ ಡ್ರೋನ್ ಅನ್ನು ಸೋಲಾರ್ ಡಿಫೆನ್ಸ್ ಆಂಡ್ ಏರೋಸ್ಪೇಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದ್ದು, 2027ರ ಮಾರ್ಚ್‌ವರೆಗೆ ಭಾರತೀಯ ಸೇನೆಗೆ ಹಸ್ತಾಂತರಿಸುವ ಗುರಿ ಹೊಂದಲಾಗಿದೆ. ಈ ಮೂಲಕ ಡ್ರೋನ್ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲು ಭಾರತದ ಬತ್ತಳಿಕೆಗೆ ಮತ್ತೊಂದು ಸ್ವದೇಶಿ ಅಸ್ತ್ರ ಸೇರ್ಪಡೆಯಾಗಲಿದೆ.


Spread the love
Share:

administrator

Leave a Reply

Your email address will not be published. Required fields are marked *