ಬಾಂಗ್ಲಾದೇಶದ ಬೀಚ್ ರೆಸಾರ್ಟ್ನಲ್ಲಿ ಭೀಕರ ಅಗ್ನಿ ಅವಘಡ: ಮಕ್ಕಳು ಸೇರಿ 10 ಮಂದಿ ಸಜೀವ ದಹನ!

ಢಾಕಾ: ಬಾಂಗ್ಲಾದೇಶದ (Bangladesh) ಆಗ್ನೇಯ ಭಾಗದಲ್ಲಿರುವ ಕಡಲತೀರದ ರೆಸಾರ್ಟ್ ಒಂದರಲ್ಲಿ ಶನಿವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ 10 ಮಂದಿ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಕಾಕ್ಸ್ ಬಜಾರ್ ಜಿಲ್ಲೆಯ ಇನಾನಿಯಲ್ಲಿರುವ ‘ತುಪ್ತುಪ್ ರೆಸ್ಟೋ & ರೆಸಾರ್ಟ್’ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಜಿಲ್ಲೆಯ ಅಗ್ನಿಶಾಮಕ ಸೇವೆ ಮತ್ತು ನಾಗರಿಕ ರಕ್ಷಣಾ ವಿಭಾಗದ ಉಪ ಸಹಾಯಕ ನಿರ್ದೇಶಕ ಸೈಯದ್ ಮೊಹಮ್ಮದ್ ಮೊರ್ಷೆದ್ ಹೊಸೈನ್ ತಿಳಿಸಿದ್ದಾರೆ. ಈ ರೆಸಾರ್ಟ್ ಬಂಗಾಳ ಕೊಲ್ಲಿಯ ಸಮೀಪದಲ್ಲಿದೆ.ಬೆಳಗ್ಗೆ ಬೆಂಕಿ ಕಾಣಿಸಿಕೊಂಡು, ಮೂರು ಅಂತಸ್ತಿನ ಮರದ ರೆಸಾರ್ಟ್ನಾದ್ಯಂತ ವೇಗವಾಗಿ ಹರಡಿಕೊಂಡಿತು. ಮೃತಪಟ್ಟವರಲ್ಲಿ ಮಕ್ಕಳೂ ಇದ್ದಾರೆ ಎಂದು ಹೊಸೈನ್ ತಿಳಿಸಿದ್ದಾರೆ.