ಆಯುಧಪೂಜೆ ಸಂಭ್ರಮ: ಬೆಲೆ ಏರಿಕೆಯ ನಡುವೆಯೂ ಬೆಂಗಳೂರಿನಲ್ಲಿ ಖರೀದಿ ಜೋರು!

ಬೆಂಗಳೂರು: ಆಯುಧಪೂಜೆ ಮತ್ತು ವಿಜಯದಶಮಿ ಹಬ್ಬದ ಹಿನ್ನೆಲೆ ಬೆಂಗಳೂರಿನ ಮಾರುಕಟ್ಟೆಗಳಲ್ಲಿ (Bengaluru Market) ಖರೀದಿ ಭರಾಟೆ ಜೋರಾಗಿದೆ. ಮಳೆಯಿಂದಾಗಿ ಬೆಳೆ ಹಾನಿಯಾಗಿ ಹೂವು, ಹಣ್ಣು, ಬೂದುಕುಂಬಳ, ನಿಂಬೆಹಣ್ಣು ಹಾಗೂ ಏಲಕ್ಕಿ ಬಾಳೆಹಣ್ಣಿನ ಬೆಲೆಗಳು ಗಗನಮುಖಿಯಾಗಿವೆ.

ಹೊರರಾಜ್ಯಗಳಿಂದ ಪೂರೈಕೆ ಹೆಚ್ಚಿರುವುದರಿಂದ ಸೇಬಿನ ಬೆಲೆ ಇಳಿಕೆಯಾಗಿದ್ದು, ಉಳಿದಂತೆ ಸೇವಂತಿ, ಮಲ್ಲಿಗೆ ಸೇರಿದಂತೆ ಬಹುತೇಕ ಪೂಜಾ ಸಾಮಗ್ರಿಗಳ ದುಬಾರಿ ದರ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ. ಇದೆಲ್ಲದರ ನಡುವೆಯೂ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದೆ.
ಹೂವುಗಳ ದರ
> ದುಂಡುಮಲ್ಲಿಗೆ – ಕೆಜಿಗೆ 1,400 ರಿಂದ 1,600 ರೂ.
> ಬಟನ್ ರೋಸ್ – ಕೆಜಿಗೆ 500 ರಿಂದ 600 ರೂ.
> ಸೇವಂತಿಗೆ ಹೂವು – ಕೆಜಿಗೆ 250 ರಿಂದ 300 ರೂ.
> ಕನಕಾಂಬರ – ಕೆಜಿಗೆ 1,500 ರಿಂದ 1,800 ರೂ.
> ಚೆಂಡುಹೂವು ಕೆಜಿಗೆ 60 ರಿಂದ 70 ರೂ.