Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನಿವೃತ್ತ ಶಿಕ್ಷಕ ಸಿದ್ದಪ್ಪ ಅಂಜುಟಗಿ ಕೊಲೆ ಪ್ರಕರಣದಬೆಚ್ಚಿಬೀಳಿಸುವ ರಹಸ್ಯ ಬಯಲು; ಆಸ್ತಿಗಾಗಿ ಸ್ವಂತ ಮಗಳೇ ಪ್ರಿಯಕರನೊಂದಿಗೆ ಸೇರಿ ಹ*ತ್ಯೆ!

Spread the love

ವಿಜಯಪುರ: ಜಿಲ್ಲೆಯ ಇಂಡಿ (Indi) ತಾಲೂಕಿನ ಚೌಡಿಹಾಳ್ ರಸ್ತೆಯ ಪೂಜಾರಿ ವಸ್ತಿ ತೋಟದ ಬಳಿ ನಡೆದಿದ್ದ ನಿವೃತ್ತ ಶಿಕ್ಷಕ (Retired Teacher) ಸಿದ್ದಪ್ಪ ಅಂಜುಟಗಿ ಕೊಲೆ ಪ್ರಕರಣ ರೋಚಕ ತಿರುವು ಪಡೆದಿದೆ. ಆಸ್ತಿ ವಿವಾದ ಹಾಗೂ ಅಕ್ರಮ ಸಂಬಂಧದಿಂದಾಗಿ ಪುತ್ರಿ (Daughter) ಹಾಗೂ ಆಕೆಯ ಪ್ರಿಯಕರ ತನ್ನ ಸ್ನೇಹಿತನ ಜೊತೆ ಸೇರಿ ಕೊಲೆ ಮಾಡಿರೋದು ಬೆಳಕಿಗೆ ಬಂದಿದೆ.

ಚೌಡಿಹಾಳ ರಸ್ತೆಯಲ್ಲಿ ಸಿದ್ದಪ್ಪ ಮೃತದೇಹ ಪತ್ತೆಯಾಗಿತ್ತು. ಆರಂಭದಲ್ಲಿ ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಮೃತ ಸಿದ್ದಪ್ಪನ ಹಿರಿಯ ಮಗಳು ನಿಖಿತಾ ನೀಡಿದ ದೂರಿನ ತನಿಖೆ ನಡೆಸಿದಾಗ ಪುತ್ರಿಯೇ ಹತ್ಯೆ ಮಾಡಿದ್ದು ಬಯಲಾಗಿದೆ

ಸಿದ್ದಪ್ಪ ಪುತ್ರಿ ಪ್ರಿಯಾಂಕಾ, ಆಕೆಯ ಪ್ರಿಯಕರ ಸಂತೋಷ್‌ನನ್ನು ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿಗಾಗಿ ಹುಡುಕಾಟ ನಡೆದಿದೆ. ಕಳೆದ ಎರಡು ವರ್ಷಗಳ ಹಿಂದೆ ಸಿದ್ದಪ್ಪ ನಿವೃತ್ತಿಯಾಗಿದ್ದರು. ಈ ವೇಳೆ ಅವರಿಗೆ ನಿವೃತ್ತಿ ಹಣ ಬಂದಿತ್ತು. ಇದರ ಜೊತೆಗೆ ಊರಲ್ಲಿ ಸ್ವಲ್ಪ ಆಸ್ತಿ (Property) ಇತ್ತು. ಈ ಆಸ್ತಿ ವಿಚಾರದಲ್ಲಿ ತಂದೆ ಮಗಳ ನಡುವೆ ಗಲಾಟೆ ನಡೆಯುತ್ತಿತ್ತು. ವಿಜಯಪುರದಲ್ಲಿ ವಾಸವಿದ್ದ ಪ್ರಿಯಾಂಕಾಗೆ ಆಟೋ ಚಾಲಕ ಸಂತೋಷ ಸಿಂಧೆ ಜೊತೆಗೆ ಅಕ್ರಮ ಸಂಬಂಧ ಬೆಳೆದಿತ್ತು. ಇದಕ್ಕೆ ತಂದೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಜೊತೆಗೆ ಆಸ್ತಿಯಲ್ಲಿ ಪಾಲು ನೀಡೋದಿಲ್ಲ ಎಂದಿದ್ದಕ್ಕೆ ಸಿಟ್ಟಿಗೆದ್ದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಆಸ್ತಿ ವಿಚಾರದಲ್ಲಿ ತಂದೆಯೊಂದಿಗೆ ಆಗಸ್ಟ್ 15ರಂದು ಪ್ರಿಯಾಂಕಾ ಗಲಾಟೆ ಮಾಡಿದ್ದಾಳೆ. ಗಲಾಟೆ ವಿಕೋಪಕ್ಕೆ ಹೋಗಿದ್ದ ವೇಳೆ ಪ್ರಿಯಕರನನ್ನು ಮನೆಗೆ ಬರಲು ಹೇಳಿ ತಂದೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿ, ಮೃತದೇಹವನ್ನು ರಸ್ತೆ ಪಕ್ಕದಲ್ಲಿ ಬಿಸಾಕಿ ಪರಾರಿಯಾಗಿದ್ದರು. ತನಿಖೆ ವೇಳೆ ಈ ಸ್ಫೋಟಕ ಮಾಹಿತಿ ಸಿಕ್ಕಿದೆ.


Spread the love
Share:

administrator

Leave a Reply

Your email address will not be published. Required fields are marked *