ಫಿಫಾ ವಿಶ್ವಕಪ್: ಇರಾಕ್ ವಿರುದ್ಧ ಸೆನೆಗಲ್ ಭರ್ಜರಿ ಜಯ; 32ರ ಹಂತಕ್ಕೆ ಮುನ್ನಡೆ!

ಟೊರಾಂಟೊ: ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಒಂದು ಪಂದ್ಯದಲ್ಲಿ ಐದು ಗೋಲುಗಳನ್ನು ಹೊಡೆದ ಮೊಟ್ಟಮೊದಲ ಆಫ್ರಿಕನ್ ತಂಡ ಎಂಬ ಹೆಗ್ಗಳಿಕೆಗೆ ಶುಕ್ರವಾರ ಸೆನೆಗಲ್ ಪಾತ್ರವಾಯಿತು. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಇರಾಕ್ ತಂಡವನ್ನು 5-0 ಗೋಲುಗಳ ಭರ್ಜರಿ ಅಂತರದಿಂದ ಗೆದ್ದ ಸೆನೆಗಲ್ 32ರ ಹಂತಕ್ಕೆ ಮುನ್ನಡೆಯಿತು.
ಮುಂದಿನ ಹಂತಕ್ಕೆ ತೇರ್ಗಡೆಯಾಗಲು ಉಭಯ ತಂಡಗಳು ಈ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯೊಂದಿಗೆ ಕಣಕ್ಕೆ ಇಳಿದಿದ್ದವು. ಇದೀಗ ದೊಡ್ಡ ಅಂತರದ ಗೆಲುವಿನೊಂದಿಗೆ ವಿಶ್ವಾಸ ವೃದ್ಧಿಸಿಕೊಂಡಿರುವ ಸೆನೆಗಲ್ ಅಂತಿಮ ಎಂಟರ ಘಟ್ಟಕ್ಕೇರುವ ಕನಸು ಕಾಣುತ್ತಿದೆ. ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಗೋಲು ಗಳಿಸಿದ ಮತ್ತು ಗೋಲು ಗಳಿಸಲು ನೆರವಾದ ಪ್ರಥಮ ಸೆನೆಗಲ್ ಆಟಗಾರ ಎಂಬ ಹೆಗ್ಗಳಿಕೆಗೆ ಇಸ್ಮಾಯಿಲಾ ಸರ್್ರ ಪಾತ್ರರಾದರು. ವಿಶ್ವಕಪ್‌ನಲ್ಲಿ ನಾಲ್ಕು ಗೋಲು ಗಳಿಸಿರುವ ಅವರು ಅತಿಹೆಚ್ಚು ವಿಶ್ವಕಪ್ ಗೋಲು ಗಳಿಸಿರುವ ಸೆನೆಗಲ್ ಆಟಗಾರ ಎನಿಸಿಕೊಂಡರು.
ಇಸ್ಮಾಯಿಲಾ ಸರ್್ರ, ಪೇಪ್ ಗ್ರೂಯೆ ಮತ್ತು ಇಲಿಮನ್ ದಿಯಾಯೆ ಹೀಗೆ ಮೂವರು ಆಟಗಾರರು ಗೋಲು ಗಳಿಸುವ ಜತೆಗೆ ಬೇರೆ ಆಟಗಾರ ಗೋಲು ಗಳಿಸಲು ನೆರವಾಗುವ ಮೂಲಕ ಒಂದೇ ತಂಡದ ಮೂವರು ಆಟಗಾರರು ಈ ಅವಳಿ ಸಾಧನೆ ಮಾಡಿದ ಖ್ಯಾತಿಗೆ ಪಾತ್ರರಾದರು. ಇದಕ್ಕೂ ಮುನ್ನ 2014ರ ವಿಶ್ವಕಪ್‌ನಲ್ಲಿ ಜರ್ಮನಿ ತಂಡದ ಟೋನಿ ಕ್ರಾಸ್, ಸಮಿ ಖೆದಿರಾ ಹಾಗೂ ಥಾಮಸ್ ಮುಲ್ಲರ್ ಬ್ರೆಜಿಲ್ ವಿರುದ್ಧ ಈ ಸಾಧನೆ ಮಾಡಿದ್ದರು. ಈ ಪಂದ್ಯವನ್ನು ಜರ್ಮನಿ 7-1 ಅಂತರದಿಂದ ಗೆದ್ದುಕೊಂಡಿತ್ತು.
