Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸಕಲೇಶಪುರದಲ್ಲಿ ಅರಣ್ಯ ಇಲಾಖೆಯ ಭರ್ಜರಿ ಕಾರ್ಯಾಚರಣೆ: ಎರಡು ನರಹಂತಕ ಪುಂಡಾನೆಗಳು ಸೆರೆ!

Spread the love

ಹಾಸನ: ಬೇಲೂರು (Beluru) ಭಾಗದಿಂದ ಸಕಲೇಶಪುರ (Sakleshpura) ಭಾಗಕ್ಕೆ ಬಂದಿದ್ದ ಎರಡು ನರಹಂತಕ ಪುಂಡಾನೆಗಳನ್ನು (Elephant) ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದಾರೆ.

ಸಕಲೇಶಪುರ ತಾಲೂಕಿನ ಉದೇವಾರ ಗ್ರಾಮದ ಕಾಫಿ ತೋಟದ ಬಳಿ ಎರಡು ಪುಂಡಾನೆಗಳನ್ನು ಅರಣ್ಯ ಇಲಾಖೆ (Forest Department) ಸಿಬ್ಬಂದಿ ಡ್ರೋನ್‌ ಬಳಸಿ ಪತ್ತೆ ಮಾಡಿದ್ದರು. ಬಳಿಕ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬಂದಾಗ ಪುಂಡಾನೆಗಳು ಜೊತೆಯಾಗಿಯೇ ಓಡ ತೊಡಗಿದ್ದವು. ಈ ವೇಳೆ ಒಂದು ಸಲಗಕ್ಕೆ ಅರವಳಿಕೆ ಮದ್ದನ್ನು ನೀಡಲಾಯಿತು. ಆದರೂ ಅದು ನಿತ್ರಾಣಗೊಳ್ಳದೇ ಸಾಕಷ್ಟು ದೂರ ಓಡಿ ಹೋಗಿತ್ತು

ಅರವಳಿಕೆ ನೀಡಿ ಒಂದು ಗಂಟೆ ಕಳೆದರೂ ಆನೆ ನಿತ್ರಾಣಗೊಳ್ಳದ ಕಾರಣ ಮತ್ತೊಂದು ಡಾಟ್‌ ನೀಡಲಾಯಿತು. ಈ ವೇಳೆ ಕಾಫಿ ತೋಟವೊಂದರಲ್ಲಿ ಓಡಿಹೋಗಿ ಕಾಡನೆ ನಿತ್ರಾಣಗೊಂಡು ನಿಂತುಕೊಂಡಿದೆ. ಈ ವೇಳೆ ಕುಮ್ಕಿ ಆನೆಗಳು ಆನೆಗಳನ್ನು ಸುತ್ತುವರೆಯಲು ಬಂದಾಗ ಜೊತೆಯಲ್ಲಿದ್ದ ಮತ್ತೊಂದು ಸಣ್ಣ ಸಲಗ ಘೀಳಿಡುತ್ತಾ ಬಂದಿದೆ. ಈ ವೇಳೆ ಆ ಸಣ್ಣ ಸಲಗಕ್ಕೂ ಅರಣ್ಯ ಸಿಬ್ಬಂದಿ ಅರವಳಿಕೆ ನೀಡಿದ್ದಾರೆ. ಇದರಿಂದ ಸಣ್ಣ ಸಲಗ ಓಡಿಹೋಗಿ, ಸ್ವಲ್ಪ ದೂರ ತೆರಳಿ ನಿತ್ರಾಣಗೊಂಡು ನಿಂತುಕೊಂಡಿತ್ತು. ಬಳಿಕ ಎರಡೂ ಆನೆಗಳನ್ನು ಕುಮ್ಕಿ ಆನೆಗಳು ಸುತ್ತುವರೆದವು. ಬಳಿಕ ಹಗ್ಗ ಕಟ್ಟಿ, ಅವುಗಳನ್ನು ರಸ್ತೆಗೆ ತರಲಾಗುತ್ತಿದೆ.

ಕ್ಯಾಪ್ಟನ್ ಪ್ರಶಾಂತ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಕಾರ್ಯಾಚರಣೆಯಲ್ಲಿ ಶ್ರೀಕಂಠ, ಅಶೋಕ, ರೋಹಿತ್, ಮಾಣಿಕ್ಯ, ಅಯ್ಯಪ್ಪ, ಏಕಲವ್ಯ ಕುಮ್ಕಿ ಆನೆಗಳು ಭಾಗಿಯಾಗಿವೆ. ನ.18 ರಂದು ಸತತ ಐದು ಗಂಟೆಗೂ ಹೆಚ್ಚು ಕಾಲ ಕಾನಳ್ಳಿ ಬಳಿ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಕಾರ್ಯಾಚರಣೆ ವಿಫಲವಾಗಿತ್ತು. 


Spread the love
Share:

administrator

Leave a Reply

Your email address will not be published. Required fields are marked *