Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಾಷಿಂಗ್ಟನ್: ಅಮೆರಿಕ ಸೇನೆಯಿಂದ ಭಾರತದ ಮ್ಯಾಪ್ ತಿರುಚುವಿಕೆ; ‘ಇಂಡೋ ಪೆಸಿಫಿಕ್ ಕಮಾಂಡ್’ ಹೆಸರು ಮರುನಾಮಕರಣ!

Spread the love

ವಾಶಿಂಗ್ಟನ್: ಅಮೆರಿಕದ ಇಂಡೋ ಪೆಸಿಫಿಕ್ ಕಮಾಂಡ್ ಅನ್ನು ಅದರ ಮೂಲ ಹೆಸರಾದ ಯುಎಸ್ ಪೆಸಿಫಿಕ್ ಕಮಾಂಡ್ ಎಂದು ಮರುನಾಮಕರಣ ಮಾಡುವುದಾಗಿ ಯುನೈಟೆಡ್ ಸ್ಟೇಟ್ಸ್ ಡಿಪಾರ್ಟೆಂಟ್ ಆಫ್ ವಾರ್ ಘೋಷಿಸಿದೆ.
ಇದಲ್ಲದೆ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿನ ತನ್ನ ಕಾರ್ಯವ್ಯಾಪ್ತಿಯನ್ನು ತೋರಿಸುವ ಅಧಿಕೃತ ವೆಬ್‌ಸೈಟ್‌ನಲ್ಲಿ ಯುಎಸ್ ಪೆಸಿಫಿಕ್ ಕಮಾಂಡ್ ಭಾರತದ ನಕ್ಷೆಯನ್ನು ತಪ್ಪಾಗಿ ಪ್ರದರ್ಶಿಸಿದೆ. ಇದು ವಿವಾದಕ್ಕೆ ಕಾರಣವಾಗಿದೆ.
USPACOM ವೆಬ್‌ಸೈಟ್‌ನಲ್ಲಿ ‘ಕಾರ್ಯವ್ಯಾಪ್ತಿಯ ನಕ್ಷೆ’ ವಿಭಾಗದಲ್ಲಿ ಪ್ರದರ್ಶಿಸಿದ ನಕ್ಷೆಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನದ ಭಾಗವಾಗಿ ತೋರಿಸಲಾಗಿದೆ. ಭಾರತದ ಸಾರ್ವಭೌಮತ್ವಕ್ಕೆ ಸಂಬಂಧಿಸಿದ ಈ ವಿಷಯವು ಆಕ್ಷೇಪಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿವೆ.

ಇತ್ತೀಚಿನ ನಿರ್ಧಾರವನ್ನು ಪ್ರಕಟಿಸಿದ ಯುನೈಟೆಡ್ ಸ್ಟೇಟ್ಸ್ ಡಿಪಾರ್ಟೆಂಟ್ ಆಫ್ ವಾರ್, USPACOM ಕಮಾಂಡ್‌ನ ಐತಿಹಾಸಿಕ ಗುರುತು ಮತ್ತು ಸಾಂಸ್ಥಿಕ ಪರಂಪರೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಅದರ ಮೂಲ ಹೆಸರನ್ನು ಮರುನಾಮಕರಣ ಮಾಡಿರುವುದಾಗಿ ತಿಳಿಸಿದೆ. ಕೇವಲ ಹೆಸರನ್ನು ಮಾತ್ರ ಮರುನಾಮಕರಣ ಮಾಡಲಾಗಿದ್ದು, ಹೆಸರು ಬದಲಾವಣೆಯಿಂದ ಕಮಾಂಡ್‌ನ ಕಾರ್ಯಾಚರಣೆ, ಕಾರ್ಯತಂತ್ರ ಅಥವಾ ಭೌಗೋಳಿಕ ವ್ಯಾಪ್ತಿ (ಕಾರ್ಯವ್ಯಾಪ್ತಿಯ ಪ್ರದೇಶ) ವಿಚಾರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

1947ರ ಜನವರಿ 1ರಂದು ಅಂದಿನ ಅಮೆರಿಕ ಅಧ್ಯಕ್ಷ ಹ್ಯಾರಿ ಎಸ್ ಟೂಮನ್ ಅವರ ಆಡಳಿತಾವಧಿಯಲ್ಲಿ ಈ ಕಮಾಂಡ್ ಸ್ಥಾಪಿಸಲಾಯಿತು. ನಂತರ ಇದು ಅಮೆರಿಕದ ಸೇನಾ ವ್ಯವಸ್ಥೆಯಲ್ಲಿನ ಅತ್ಯಂತ ಹಳೆಯ ಹಾಗೂ ಅತಿ ದೊಡ್ಡ ಏಕೀಕೃತ ಯುದ್ಧ ಕಮಾಂಡ್‌ಗಳಲ್ಲಿ ಒಂದಾಗಿದೆ.
ದಶಕಗಳ ಕಾಲ ಈ ಕಮಾಂಡ್ ಏಷ್ಯಾದಲ್ಲಿ ಎರಡನೇ ಮಹಾಯುದ್ಧದ ನಂತರದ ಭದ್ರತಾ ವ್ಯವಸ್ಥೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದರ ಜೊತೆಗೆ, ಮಾನವೀಯ ನೆರವು, ಪ್ರಕೃತಿ ವಿಕೋಪ ಪರಿಹಾರ ಕಾರ್ಯಾಚರಣೆಗಳು ಹಾಗೂ ತುರ್ತು ಪ್ರತಿಕ್ರಿಯೆ ಕಾರ್ಯಗಳಿಗೆ ಕೂಡ ಮಹತ್ವದ ಕೊಡುಗೆ ನೀಡಿದೆ.


Spread the love
Share:

administrator

Leave a Reply

Your email address will not be published. Required fields are marked *