ಕೋರ್ಟ್‌ನಲ್ಲಿ ಉಲ್ಟಾ ಹೊಡೆದ ಐ ವಿಟ್ನೆಸ್: ಇಂದು ಪುನೀತ್ ವಿಚಾರಣೆ ನಡೆಸಲಿರುವ ಎಸ್‌ಪಿಪಿ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder case) ವಿಚಾರಣೆ ಇಂದು 59ನೇ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಲಿದೆ. ಪ್ರಕರಣದ ಐ ವಿಟ್ನೆಸ್ ಪುನೀತ್ ಪ್ರತಿಕೂಲ ಸಾಕ್ಷಿಯಾಗಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ, ಇಂದು ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ಪ್ರಸನ್ನ ಕುಮಾರ್ ಅವರು ಪುನೀತ್ ಅವರನ್ನು ಪಾಟಿಸವಾಲಿಗೆ ಒಳಪಡಿಸಲಿದ್ದಾರೆ.

ಈ ಹಿಂದೆ ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಪರವಾಗಿ ಕೇಳಿದ ಪ್ರಶ್ನೆಗಳಿಗೆ ಪುನೀತ್, ʻಗೊತ್ತಿಲ್ಲ, ನೋಡಿಲ್ಲ, ನೆನಪಿಗೆ ಬರುತ್ತಿಲ್ಲʼ ಎಂದು ಉತ್ತರಿಸಿದ್ದ. ಹೀಗಾಗಿ ಅವರನ್ನು ಪ್ರತಿಕೂಲ ಸಾಕ್ಷಿ (ಹಾಸ್ಟೈಲ್ ವಿಟ್ನೆಸ್) ಎಂದು ಪರಿಗಣಿಸುವಂತೆ ಎಸ್‌ಪಿಪಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
164ರ ಹೇಳಿಕೆ ಮುಂದಿಟ್ಟುಕೊಂಡು ಪ್ರಶ್ನೆ
ತನಿಖೆಯ ಸಂದರ್ಭದಲ್ಲಿ ಪುನೀತ್ ನ್ಯಾಯಾಧೀಶರ ಮುಂದೆ ಸಿಆರ್‌ಪಿಸಿ 164ರ ಅಡಿಯಲ್ಲಿ ಹೇಳಿಕೆ ನೀಡಿದ್ದರು. ಇದೀಗ ಆ ಹೇಳಿಕೆಯ ದಾಖಲೆಯನ್ನು ತರಿಸಿಕೊಂಡು ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಪುನೀತ್‌ನನ್ನು ಪ್ರಶ್ನಿಸಲಿದ್ದಾರೆ.
ಹಿಂದೆ ನೀಡಿದ್ದ ಹೇಳಿಕೆ ಮತ್ತು ಈಗ ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆಗಳ ನಡುವಿನ ವ್ಯತ್ಯಾಸದ ಬಗ್ಗೆ ಪ್ರಶ್ನಿಸುವ ಸಾಧ್ಯತೆಯಿದೆ. ಪ್ರತಿಕೂಲ ಸಾಕ್ಷಿಯಾಗಿ ಹೇಳಿಕೆ ನೀಡಿರುವುದರ ಬಗ್ಗೆಯೂ ಪಾಟಿಸವಾಲು ನಡೆಸಲಿದ್ದಾರೆ.