Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಾಷಿಂಗ್ಟನ್: ಶ್ವೇತಭವನದ UFC ಪಂದ್ಯಾವಳಿ ವೇಳೆ ಡ್ರೋನ್ ಹಾಗೂ ಸ್ನೈಪರ್ ದಾಳಿ ಸಂಚು ವಿಫಲ; ಐವರು ಅರೆಸ್ಟ್!

Spread the love

ವಾಷಿಂಗ್ಟನ್: ಮಹತ್ವದ ಬೆಳವಣಿಗೆಯಲ್ಲಿ ಶ್ವೇತಭವನದ UFC ಕಾರ್ಯಕ್ರಮದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಲು ರೂಪಿಸಿದ್ದ ಸಂಚು ವಿಫಲವಾಗಿದ್ದು, ಈ ಸಂಬಂಧ ಐದು ಆರೋಪಿಗಳನ್ನು ಬಂಧಿಸವಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಜನ್ಮದಿನದ ಅಂಗವಾಗಿ ಕಳೆದ ವಾರಾಂತ್ಯದಲ್ಲಿ ಶ್ವೇತಭವನದಲ್ಲಿ ಆಯೋಜಿಸಲಾಗಿದ್ದ UFC ಮಿಶ್ರ ಸಮರ ಕಲೆ (Mixed Martial Arts) ಕಾರ್ಯಕ್ರಮವನ್ನು ಗುರಿಯಾಗಿಸಿಕೊಂಡು ರೂಪಿಸಲಾಗಿದ್ದ ದಾಳಿ ಸಂಚನ್ನು ಕಾನೂನು ಜಾರಿ ಸಂಸ್ಥೆಗಳು ವಿಫಲಗೊಳಿಸಿದ್ದು, ಈ ಸಂಬಂಧ ಹಲವರನ್ನು ವಶಕ್ಕೆ ಪಡೆದಿವೆ ಎಂದು ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ (Kash Patel) ಮಂಗಳವಾರ ತಿಳಿಸಿದ್ದಾರೆ.

ಸಂಭಾವ್ಯ ದಾಳಿಯ ನಿಖರ ಸ್ವರೂಪವನ್ನು ತಕ್ಷಣವೇ ಬಹಿರಂಗಪಡಿಸಲಾಗಿಲ್ಲ. ಬಂಧಿತರ ವಿರುದ್ಧದ ಆರೋಪಗಳನ್ನು ಅಧಿಕೃತವಾಗಿ ಪ್ರಕಟಿಸಿದ ನಂತರ ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓಹಿಯೊ, ಮಿಸೌರಿ ಹಾಗೂ ಕ್ಯಾಲಿಫೋರ್ನಿಯಾ ಸೇರಿದಂತೆ ವಿವಿಧ ರಾಜ್ಯಗಳಿಂದ ಐವರನ್ನು ಬಂಧಿಸಲಾಗಿದೆ ಎಂದು ಪ್ರಕರಣದ ಮಾಹಿತಿ ಹೊಂದಿರುವ ಕಾನೂನು ಜಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜೂನ್ 10ರಂದು ಎಫ್‌ಬಿಐಗೆ ಈ ಸಂಭಾವ್ಯ ಬೆದರಿಕೆ ಕುರಿತು ಮಾಹಿತಿ ಲಭ್ಯವಾಗಿತ್ತು. ಶ್ವೇತಭವನದ ದಕ್ಷಿಣ ಲಾನ್‌ನಲ್ಲಿ ನಡೆದ UFC ಕಾರ್ಯಕ್ರಮಕ್ಕೆ ನಾಲ್ಕು ದಿನಗಳ ಮುನ್ನವೇ ಈ ಮಾಹಿತಿ ದೊರೆತಿತ್ತು ಎನ್ನಲಾಗಿದೆ.

“ಎಫ್‌ಬಿಐ ಮತ್ತು ನಮ್ಮ ಪಾಲುದಾರ ಸಂಸ್ಥೆಗಳು ಹಾಗೂ ನ್ಯಾಯಾಂಗ ಇಲಾಖೆಯ ತ್ವರಿತ ಮತ್ತು ಬಹು-ರಾಜ್ಯ ಕಾರ್ಯಾಚರಣೆಯ ಪರಿಣಾಮವಾಗಿ ಹಲವರನ್ನು ವಶಕ್ಕೆ ಪಡೆಯಲಾಗಿದೆ ಮತ್ತು ಯೋಜಿತ ದಾಳಿಗಳನ್ನು ಸಂಪೂರ್ಣವಾಗಿ ತಡೆಗಟ್ಟಲಾಗಿದೆ” ಎಂದು ಕಾಶ್ ಪಟೇಲ್ ಸಾಮಾಜಿಕ ಜಾಲತಾಣ Xನಲ್ಲಿ ಮಾಹಿತಿ ನೀಡಿದ್ದಾರೆ.

ಇದೇ ವೇಳೆ, ಸೀನ್ ಕರನ್ ನೇತೃತ್ವದ ಅಮೆರಿಕದ ಸೀಕ್ರೆಟ್ ಸರ್ವಿಸ್ ಕೂಡ ಆರೋಪಿಗಳನ್ನು ಗುರುತಿಸಿ ಕಾನೂನು ಕ್ರಮಕ್ಕೆ ಒಳಪಡಿಸಲು ಹಗಲಿರುಳು ಶ್ರಮಿಸಿದೆ ಎಂದು ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದೆ.

ಟ್ರಂಪ್ ಜನ್ಮ ದಿನಾಚರಣೆ

ಭಾನುವಾರ ನಡೆದ UFC ಕಾರ್ಯಕ್ರಮದಲ್ಲಿ ತಮ್ಮ 80ನೇ ಜನ್ಮದಿನವನ್ನು ಆಚರಿಸಿಕೊಂಡ ಟ್ರಂಪ್, ಈ ಕಾರ್ಯಕ್ರಮವನ್ನು ಅಮೆರಿಕದ ಸ್ವಾತಂತ್ರ್ಯ ಘೋಷಣಾಪತ್ರಕ್ಕೆ ಸಹಿ ಹಾಕಿದ 250ನೇ ವಾರ್ಷಿಕೋತ್ಸವದ ಆಚರಣೆಯೊಂದಿಗೂ ಜೋಡಿಸಿದ್ದರು.

ಆದರೆ, ಫ್ರಾನ್ಸ್‌ನ ಎವಿಯಾನ್-ಲೆ-ಬೈನ್ಸ್‌ನಲ್ಲಿ ನಡೆದ ಜಿ-7 ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಈ ವಿಫಲಗೊಳಿಸಲಾದ ದಾಳಿ ಸಂಚು ಕುರಿತು ತನಗೆ ಯಾವುದೇ ಅಧಿಕೃತ ಮಾಹಿತಿ ನೀಡಲಾಗಿಲ್ಲ ಎಂದು ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *