Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಉಪ್ಪಿನಂಗಡಿ: ಕಂದಮ್ಮಗಳನ್ನು ಬಾವಿಗೆ ಎಸೆದ ಪ್ರಕರಣ – ಆರೋಪಿ ಮಹಿಳೆ ನೂರುನ್ನಿಸಾಳಿಗೆ 15 ದಿನಗಳ ನ್ಯಾಯಾಂಗ ಬಂಧನ!

Spread the love

ಉಪ್ಪಿನಂಗಡಿ : ಬಂಟ್ವಾಳ ತಾಲೂಕಿನ ಪೆರ್ನೆ ಸಮೀಪ ಕುಟುಂಬ ಕಲಹದ ಹಿನ್ನೆಲೆಯಲ್ಲಿ ಇಬ್ಬರು ಕಂದಮ್ಮಗಳನ್ನು ಬಾವಿಗೆ ಎಸೆದು, ಮಗುವೊಂದರ ಸಾವಿಗೆ ಕಾರಣವಾಗಿದ್ದ ಆರೋಪಿ ಮಹಿಳೆ ನೂರುನ್ನಿಸಾಳಿಗೆ ಪುತ್ತೂರು ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.ಘಟನೆಗೆ ಸಂಬಂಧಿಸಿದಂತೆ ಆರೋಪಿ ನೂರುನ್ನಿಸಾಳನ್ನು ಉಪ್ಪಿನಂಗಡಿ ಪೊಲೀಸರು ಭಾನುವಾರ ಪುತ್ತೂರು ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ 15 ದಿನಗಳ ಕಾಲ ರಿಮಾಂಡ್ ವಿಧಿಸಿದ್ದಾರೆ. ಕಳೆದ ಸೆಪ್ಟೆಂಬರ್ 19ರಂದು ಶನಿವಾರದಂದು ಕುಟುಂಬದ ಆಂತರಿಕ ಜಗಳದ ಕಾರಣಕ್ಕೆ ನೂರುನ್ನೀಸಾ ತನ್ನ ಸ್ವಂತ ಹೆಣ್ಣು ಮಗು ಆಲಿಯಾ (2 ವರ್ಷ) ಹಾಗೂ ಗಂಡನ ತಂಗಿಯ ಮಗುವಾಗಿದ್ದ ರಬೀಹ್ (3 ವರ್ಷ) ಎಂಬಿಬ್ಬರನ್ನು ಮನೆಯಲ್ಲಿದ್ದ ಬಾವಿಗೆ ಎಸೆದಿದ್ದಳು.ದುರಂತದಲ್ಲಿ 3 ವರ್ಷದ ಕಂದಮ್ಮ ರಬೀಹ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರೆ, ಮತ್ತೊಂದು ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಕೊಲೆ ಹಾಗೂ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *