ಉದ್ಯಾವರ: ಪಾಪನಾಶಿನಿ ನದಿಯಲ್ಲಿ ಪತ್ತೆಯಾದ ಅಪರಿಚಿತ ವ್ಯಕ್ತಿಯ ಶವ; ಪೊಲೀಸರಿಂದ ತನಿಖೆ!

ಉಡುಪಿ: ಉದ್ಯಾವರದ ಪಿತ್ರೋಡಿಯ ಪಾಪನಾಶಿನಿ ನದಿಯಲ್ಲಿ ಆಗಸ್ಟ್ 5 ರಂದು ಸುಮಾರು 30-35 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ.

ಮಾಹಿತಿ ಪಡೆದ ನಂತರ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಪ್ರಕ್ರಿಯೆಗಳನ್ನು ಪ್ರಾರಂಭಿಸಿದರು.ಸಮಾಜ ಸೇವಕ ನಿತ್ಯಾನಂದ ವೊಲಕಾಡ್ ಅವರ ಸಹಾಯದಿಂದ ಶವವನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಹೆಚ್ಚಿನ ಮಾಹಿತಿಗಾಗಿ ಕಾಪು ಪೊಲೀಸ ರಾಣೆಯನ್ನು ಸಂಪರ್ಕಸುವಂತೆ ಮನವಿ ಮಾಡಿದ್ದಾರೆ.