Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚೇವಾರ್: ಚಲಿಸುತ್ತಿದ್ದ ಆಟೋರಿಕ್ಷಾ ಒಳಗೆ ಹಾವು ಪ್ರತ್ಯಕ್ಷ; ಚಾಲಕ ಹಾಗೂ ಪ್ರಯಾಣಿಕರು ಕೆಲಕಾಲ ಆತಂಕ!

Spread the love

ಕಾಸರಗೋಡು: ಜಿಲ್ಲೆಯ ಚೇವಾರ್‌ ಪ್ರದೇಶದಲ್ಲಿ ಚಲಿಸುತ್ತಿದ್ದ ಆಟೋರಿಕ್ಷಾದೊಳಗೆ ಹಾವು ಕಾಣಿಸಿಕೊಂಡ ಪರಿಣಾಮ ಚಾಲಕ ಹಾಗೂ ಪ್ರಯಾಣಿಕರು ಕೆಲಕಾಲ ಆತಂಕಕ್ಕೊಳಗಾದ ಘಟನೆ ನಡೆದಿದೆ.

ಪಿಯೂಸ್ ಎಂಬ ಆಟೋ ಚಾಲಕರು ಎಂದಿನಂತೆ ಪ್ರಯಾಣಿಕರೊಂದಿಗೆ ಆಟೋ ಚಲಾಯಿಸುತ್ತಿದ್ದ ವೇಳೆ, ಏಕಾಏಕಿ ಹಾವು ಅವರ ಕೈ ಮೇಲೆ ಬಿದ್ದಿದೆ. ಇದರಿಂದ ಬೆಚ್ಚಿಬಿದ್ದ ಚಾಲಕರು ಕೂಡಲೇ ಆಟೋವನ್ನು ನಿಲ್ಲಿಸಿದ್ದು, ಹಾವು ಆಟೋರಿಕ್ಷದ ಒಳಗೆ ಸೇರಿಕೊಂಡಿದೆ. ಆಟೋದಲ್ಲಿದ್ದ ಪ್ರಯಾಣಿಕರು ಹಾವನ್ನು ಕಂಡು ಭಯಭೀತರಾದರೂ, ಯಾವುದೇ ಅನಾಹುತ ಸಂಭವಿಸಿಲ್ಲ. ಸ್ಥಳೀಯರು ಸ್ಥಳಕ್ಕೆ ಧಾವಿಸಿ ಹಾವನ್ನು ಪರಿಶೀಲಿಸಿದಾಗ ಅದು ವಿಷರಹಿತ ಕಾಡುಹಾವು ಎಂದು ತಿಳಿದುಬಂದಿದೆ.ಮಳೆಗಾಲದಲ್ಲಿ ಹಾವುಗಳು ಸುರಕ್ಷಿತ ಆಶ್ರಯಕ್ಕಾಗಿ ವಾಹನಗಳೊಳಗೆ ನುಗ್ಗುವ ಸಾಧ್ಯತೆ ಇರುವುದರಿಂದ, ವಾಹನ ಚಾಲಕರು ಬೆಳಿಗ್ಗೆ ವಾಹನ ಚಾಲನೆಗೆ ಮುನ್ನ ಆಟೋ ಅಥವಾ ಕಾರಿನ ಒಳಭಾಗವನ್ನು ಪರಿಶೀಲಿಸುವುದು ಅಗತ್ಯ ಎಂದು ಸ್ಥಳೀಯರು ಸಲಹೆ ನೀಡಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿದ್ದು, ಮಳೆಗಾಲದಲ್ಲಿ ವಾಹನ ಬಳಸುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂಬ ಸಂದೇಶವನ್ನು ಮತ್ತೊಮ್ಮೆ ನೆನಪಿಸಿದೆ.


Spread the love
Share:

administrator

Leave a Reply

Your email address will not be published. Required fields are marked *