ಜಲಾವೃತ ರಸ್ತೆಯಲ್ಲಿ ನಡೆಯುವಾಗ ಇಬ್ಬರು ಹುಡುಗಿಯರಿಗೆ ವಿದ್ಯುತ್ ಆಘಾತ!

ಮುಂಬೈ: ನವಿ ಮುಂಬೈನ ನೆರೂಲ್ ಪ್ರದೇಶದಲ್ಲಿ ಬುಧವಾರ ಸಂಜೆ ಸೇತುವೆಯ ಕೆಳಗೆ ಸಂಗ್ರಹವಾದ ಮಳೆನೀರಿನಲ್ಲಿ ನಡೆಯುವಾಗ ಇಬ್ಬರು ಹುಡುಗಿಯರು ವಿದ್ಯುತ್ ಆಘಾತಕ್ಕೆ ಒಳಗಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ನೆರೂಲ್ ಎಲ್ ಪಿ ಸೇತುವೆಯ ಕೆಳಗೆ ನಡೆದಿದೆ ಎಂದು ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಸಚಿನ್ ಕದಮ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.”ನೆರೂಲ್ ಎಲ್ ಪಿ ಸೇತುವೆಯ ಕೆಳಗೆ ಮಳೆ ನೀರು ಸಂಗ್ರಹವಾಗಿದೆ. ಇಬ್ಬರು ಹುಡುಗಿಯರು ಸ್ಥಳದಲ್ಲಿಯೇ ಆಘಾತಕ್ಕೊಳಗಾಗಿದ್ದು, ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಎಂಎನ್ಇಬಿ, ಪುರಸಭೆಯ ವಿದ್ಯುತ್ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳ ಸ್ಥಳದಲ್ಲಿದೆ” ಎಂದು ಅವರು ಹೇಳಿದರು.
ಮಳೆನೀರಿನೊಂದಿಗೆ ವಿದ್ಯುತ್ ತಂತಿ ಸಂಪರ್ಕಕ್ಕೆ ಬಂದು ಈ ಘಟನೆ ಸಂಭವಿಸಿರಬಹುದು ಎಂದು ಕದಮ್ ಹೇಳಿದರು.
ಘಟನೆಯ ನಂತರ, ಮಹಾರಾಷ್ಟ್ರ ರಾಜ್ಯ ವಿದ್ಯುತ್ ಮಂಡಳಿ (ಎಂಎಸ್ಇಬಿ), ಪುರಸಭೆ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದರು.
ಮಂಗಳವಾರ ರಾತ್ರಿಯಿಂದ ನವಿ ಮುಂಬೈನಲ್ಲಿ ಭಾರಿ ಮಳೆಯಾಗುತ್ತಿದ್ದು, ನಗರದಾದ್ಯಂತ ಹಲವಾರು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
