Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನಂದಿನಿ ಹಾಲು, ಮೊಸರಿನ ದರ ಏರಿಕೆ ಅಧಿಕೃತ: ನವೆಂಬರ್ 1ರಿಂದ ಹೊಸ ದರ ಜಾರಿ!

Spread the love

ಬೆಂಗಳೂರು: ಹಾಲಿನ ದರ ಏರಿಕೆ ಬೆನ್ನಲ್ಲೇ ರಾಜ್ಯದ ಜನತೆಗೆ ಮತ್ತೊಂದು ಶಾಕ್‌ ಎದುರಾಗಿದೆ. ರಾಜ್ಯ ಸಚಿವ ಸಂಪುಟ ಸಭೆಯ ನಿರ್ಧಾರದಂತೆ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಹೆಚ್ಚಿಸಿ ಕರ್ನಾಟಕ ಹಾಲು ಮಹಾಮಂಡಳಿ ಶುಕ್ರವಾರ ಆದೇಶ ಹೊರಡಿಸಿದೆ.

ಪರಿಷ್ಕೃತ ದರವು ನ.1 ರಿಂದಲೇ ಜಾರಿಗೆ ಬರಲಿದೆ. ಅರ್ಧ ಲೀಟ‌ರ್ ಮೊಸರಿನ ದರವನ್ನ 28 ರೂ. ನಿಂದ 34 ರೂ.ಗೆ ಹಾಗೂ 1 ಲೀಟರ್ ಮೊಸರಿನ ದರವನ್ನು 54 ರೂ. ನಿಂದ 68 ರೂ.ಗೆ ಹೆಚ್ಚಿಸಲಾಗಿದೆ .

ಹಾಲಿನ ಮಾದರಿ ಯಾವುದು ಎಷ್ಟು ಹೆಚ್ಚಳ?
* ಟೋನ್ಡ್‌ ಹಾಲು – ಹಳೆಯ ದರ 46 ರೂ. – ಹೊಸ ದರ 54 ರೂ.
* ಹೋಮೋಜಿನೈಸ್ಡ್‌ ಟೋನ್ಡ್‌ ಹಾಲು – ಹಳೆಯ ದರ 47 ರೂ. – ಹೊಸ ದರ 56 ರೂ.
* ಹೋಮೋಜಿನೈಸ್ಡ್‌ ಹಸುವಿನ ಹಾಲು – ಹಳೆಯ ದರ 50 ರೂ. – ಹೊಸ ದರ 58 ರೂ.
* ಸ್ಪೆಷಲ್‌ ಟೋನ್ಡ್‌ ಹಾಲು – ಹಳೆಯ ದರ 52 ರೂ. – ಹೊಸ ದರ 64 ರೂ.
* ಶುಭಂ ಹಾಲು – ಹಳೆಯ ದರ 52 ರೂ. – ಹೊಸ ದರ 64 ರೂ.
* ಜೋಮೋಜಿನೈಸ್ಡ್‌ ಶುಭಂ ಹಾಲು – ಹಳೆಯ ದರ – 53 ರೂ. – 65 ರೂ.
* ಮೊಸರು, 500 ಗ್ರಾಂ ಪೊಟ್ಟಣ ಹಾಲು – ಹಳೆಯ ದರ 28 ರೂ. – 34 ರೂ.
* ಮೊಸರು, 1 ಕೆಜಿ ಪೊಟ್ಟಣ – ಹಳೆಯ ದರ 54 ರೂ. – 68 ರೂ.

ಪ್ರಕಟಣೆಯಲ್ಲಿ ಏನಿದೆ?
ಕರ್ನಾಟಕ ಹಾಲು ಮಹಾಮಂಡಳಿಯು (ಕೆಎಂಎಫ್) ಕಳೆದ 5 ದಶಕಗಳಿಂದ “ರೈತರಿಂದ, ರೈತರಿಗಾಗಿ ಮತ್ತು ರೈತರಿಗೋಸ್ಕರ” ಎಂಬ ಸಹಕಾರ ತತ್ವದಡಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯದ ಲಕ್ಷಾಂತರ ಹೈನುಗಾರ ರೈತರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ಸುಮಾರು 26.89 ಲಕ್ಷ ಹೈನುಗಾರ ರೈತ ಸದಸ್ಯರಿದ್ದು, ಸುಮಾರು 8.9 ಲಕ್ಷ ರೈತರು ಪ್ರತಿದಿನ ಹಾಲನ್ನು ಸಹಕಾರ ಸಂಘಗಳಿಗೆ ಪೂರೈಸುತ್ತಿದ್ದಾರೆ. ಹಾಲು ಉತ್ಪಾದಕರಿಗೆ ಪ್ರತಿದಿನ ಸರಾಸರಿ 28.60 ಕೋಟಿ ರೂ. ಪಾವತಿಸಲಾಗುತ್ತಿದೆ.ಈ ವರ್ಷ ಸಕಾಲದಲ್ಲಿ ಉತ್ತಮ ಮಳೆಯಾಗದ ಕಾರಣ ನೀರು ಮತ್ತು ಮೇವು ಕೊರತೆ ಉಂಟಾಗಿದ್ದು, ಬರದ ಪರಿಸ್ಥಿತಿ ಎದುರಾಗಿದೆ. ಹಾಲು ಉತ್ಪಾದಕ ರೈತರು ಪಶುಗಳ ನಿರ್ವಹಣೆ, ಔಷಧೋಪಚಾರ ಮತ್ತು ಮೇವು ಪೂರೈಕೆಗೆ ಹೆಚ್ಚಿನ ವೆಚ್ಚವಾಗುತ್ತಿದ್ದು, ಹೈನುಗಾರಿಗೆ ಮುಂದುವರಿಸುವುದು ಕಷ್ಟಕರವಾಗುತ್ತಿದೆ. ಹೀಗಾಗಿ ತುರ್ತಾಗಿ ಹಾಲು ಖರೀದಿ ದರವನ್ನ ಪ್ರತಿ ಲೀಟರ್‌ಗೆ ಕನಿಷ್ಠ 10 ರಿಂದ ರೂ.12 ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ, ಹಾಲು ಉತ್ಪಾದಕ ರೈತರ ಹಿತಾಸಕ್ತಿಯನ್ನು ಪರಿಗಣಿಸಿ ಸೂಕ್ತ ಪ್ರೋತ್ಸಾಹ ನೀಡುವ ಹಾಗೂ ಹೈನುಗಾರಿಕೆ ಕ್ಷೇತ್ರವನ್ನು ಸುಸ್ಥಿರವಾಗಿ ಬೆಳೆಸುವ ಉದ್ದೇಶದಿಂದ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ‘ನಂದಿನಿ’ ಟೋನ್ಡ್ ಹಾಲಿನ ದರ ಪ್ರತಿ ಲೀಟರ್‌ಗೆ 8 ರೂ. ನಂತೆ ದರ ಪರಿಷ್ಕರಣೆಗೆ ಮತ್ತು ಪರಿಷ್ಕರಣೆಯಾದ ಮೊತ್ತದಲ್ಲಿ 7 ರೂ. ಹಾಲು ಉತ್ಪಾದಕರಿಗೆ ವರ್ಗಾಹಿಸುವಂತೆ ಸೂಚಿಸಲಾಗಿದೆ.

ಇದರ ಜೊತೆಗೆ ನ.1 ರಿಂದ ಜಾರಿಗೆ ಬರುವಂತೆ ಜಿಡ್ಡಿನಾಂಶ (ಫ್ಯಾಟ್) ಪ್ರಮಾಣದ ಆಧಾರದ ಮೇಲೆ ‘ನಂದಿನಿ’ಯ ಎಲ್ಲಾ ಮಾದರಿಯ ಹಾಲು ಮತ್ತು ಮೊಸರಿನ ಮಾರಾಟ ದರಗಳನ್ನೂ ಪರಿಷ್ಕರಿಸಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *