Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಒಳ ಉಡುಪಿನಲ್ಲಿ 155 ಗ್ರಾಂ ಚಿನ್ನದ ಪುಡಿ ಸಾಗಾಟ: ದೆಹಲಿ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿ ಬಂಧನ!

Spread the love

ನವದೆಹಲಿ: ಇಲ್ಲಿನ ಜಾಮಾ ಮಸೀದಿ ಮೆಟ್ರೋ ನಿಲ್ದಾಣದಲ್ಲಿ (Delhi Metro) ತಪಾಸಣೆ ವೇಳೆ ವ್ಯಕ್ತಿಯೊಬ್ಬ ಪರಾರಿಗೆ ಯತ್ನಿಸಿದ ಘಟನೆ ನಡೆದಿದ್ದು, ಆತನನ್ನು ಭದ್ರತಾ ಸಿಬ್ಬಂದಿ ಬೆನ್ನಟ್ಟಿ ಹಿಡಿದಿದ್ದಾರೆ. ಆತನ ಬ್ಯಾಗ್‌ ಪರಿಶೀಲಿಸಿದಾಗ ಒಳ ಉಡುಪಿನಲ್ಲಿ 155 ಗ್ರಾಂ ಚಿನ್ನದ ಪುಡಿ ( Gold Powder) ಇರುವುದು ಪತ್ತೆಯಾಗಿದೆ.
ಬಂಧಿತನನ್ನು ಮೊಹಮ್ಮದ್ ಶೋಯೆಬ್ ಎಂದು ಗುರುತಿಸಲಾಗಿದೆ. ಈತ ಉತ್ತರ ಪ್ರದೇಶದ ಮುಜಾಫರ್‌ನಗರದವನೆಂದು ತಿಳಿದುಬಂದಿದೆ. ಅಲ್ಲದೇ ಮಲೇಷ್ಯಾದ ಕೌಲಾಲಂಪುರದಲ್ಲಿಯೂ ಮನೆ ಇರುವುದಾಗಿ ಆತ ಹೇಳಿಕೊಂಡಿದ್ದಾನೆ. ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ತಪಾಸಣೆ ವೇಳೆ ಸ್ಕ್ಯಾನರ್‌ನಲ್ಲಿ ಅನುಮಾನಾಸ್ಪದ ವಸ್ತುವೊಂದು ಕಂಡುಬಂದಾಗ ಶೋಯೆಬ್ ಅಲ್ಲಿಂದ ಓಡಿಹೋಗಲು ಯತ್ನಿಸಿದ್ದ. ಆದರೆ, ನಿರ್ಗಮನ ದ್ವಾರದ ಬಳಿ ಸಿಐಎಸ್‌ಎಫ್ (CISF) ಸಿಬ್ಬಂದಿ ಆತನನ್ನು ಹಿಡಿದಿದ್ದರು. ಬಳಿಕ ಪರಿಶೀಲನೆ ನಡೆಸಿದಾಗ ಚಿನ್ನದ ಪುಡಿ ಪತ್ತೆಯಾಗಿದೆ.ಆರಂಭದಲ್ಲಿ ಇದು ಮಾದಕ ವಸ್ತುವಿರಬಹುದೆಂದು ಶಂಕಿಸಿದ ಪೊಲೀಸರು, ಮಾದಕ ದ್ರವ್ಯ ನಿಯಂತ್ರಣ ಅಧಿಕಾರಿಗಳನ್ನು ಸಂಪರ್ಕಿಸಿದರು. ಅಧಿಕಾರಿಗಳ ಪರಿಶೀಲನೆ ಬಳಿಕ ಅದು ಮಾದಕ ವಸ್ತುವಲ್ಲ ಎಂಬುದು ತಿಳಿದು ಬಂದಿದೆ.
ವಿಚಾರಣೆ ವೇಳೆ ಶೋಯೆಬ್‌, ತಾನು ಮಲೇಷ್ಯಾದ ಜವಳಿ ವಲಯದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಲ್ಲಿ ಮಲೇಷ್ಯಾ ಮೂಲದ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿರುವುದಾಗಿ ತಿಳಿಸಿದ್ದಾನೆ.
ಅ.16 ರಂದು ಚಿನ್ನವನ್ನು ದೆಹಲಿಗೆ ತಂದಿದ್ದು, ಜಾಮಾ ಮಸೀದಿ ಪ್ರದೇಶದ ಹೋಟೆಲ್ ಒಂದರಲ್ಲಿ ತಂಗಿದ್ದೆ. ಲಜಪತ್ ನಗರಕ್ಕೆ ಹೋಗಲು ಮೆಟ್ರೋ ನಿಲ್ದಾಣಕ್ಕೆ ಬಂದಿದ್ದೆ ಎಂದು ತಿಳಿಸಿದ್ದಾನೆ. ಈ ಬಗ್ಗೆ ಪೊಲೀಸರು ಕಸ್ಟಮ್ಸ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಈ ಪ್ರಕರಣವು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಕ್ರಮ ಕೈಗೊಳ್ಳಲು ನಿರಾಕರಿಸಿದ್ದಾರೆ.
ಪತ್ತೆಯಾದ ವಸ್ತುವಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಲು ಅಥವಾ ಅದನ್ನು ಏಕೆ ಸಾಗಿಸುತ್ತಿದ್ದೆ ಎಂಬುದಕ್ಕೆ ಸಮರ್ಪಕವಾದ ವಿವರಣೆ ನೀಡಲು ಶೋಯೆಬ್ ವಿಫಲನಾಗಿದ್ದಾನೆ. ಆತನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ರೋ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *