Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಕ್ಕೆ ಹಕ್ಕಿ ಡಿಕ್ಕಿ: 148 ಪ್ರಯಾಣಿಕರು ಸುರಕ್ಷಿತ!

Spread the love

ಬೆಂಗಳೂರು: ವಿಶಾಖಪಟ್ಟಣದಿಂದ ಬೆಂಗಳೂರಿಗೆ (Bengaluru) ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಕ್ಕೆ (Air India Express Flight) ಸೋಮವಾರ ಹಕ್ಕಿಯೊಂದಕ್ಕೆ ಡಿಕ್ಕಿ ಹೊಡೆದಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಸುರಕ್ಷಿತವಾಗಿ ಇಳಿದಿದೆ. ವಿಮಾನದಲ್ಲಿದ್ದ 148 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
ಘಟನೆ ನಡೆದಿದ್ದರೂ ವಿಮಾನವು ತನ್ನ ಪ್ರಯಾಣವನ್ನು ಪೂರ್ಣಗೊಳಿಸಿದೆ. ಭೂಸ್ಪರ್ಶದ ನಂತರ ಅದನ್ನು ಪಾರ್ಕಿಂಗ್ ಸ್ಟ್ಯಾಂಡ್‌ಗೆ ಸ್ಥಳಾಂತರಿಸಲಾಯಿತು. ಪ್ರಯಾಣಿಕರು ಅಥವಾ ಸಿಬ್ಬಂದಿಗೆ ಯಾವುದೇ ತೊಂದರೆಯಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ.ಶನಿವಾರ ಕೂಡ ಇಂತಹದ್ದೇ ಅವಘಡ ಸಂಭವಿಸಿತ್ತು. ದುಬೈನಿಂದ ಆಗಮಿಸಿದ ಎಮಿರೇಟ್ಸ್ ವಿಮಾನವೊಂದು ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಪಕ್ಷಿಯೊಂದಕ್ಕೆ ಡಿಕ್ಕಿ ಹೊಡೆದ (bird strike) ಪರಿಣಾಮವಾಗಿ, ಆ ವಿಮಾನದ ಹಾರಾಟದಲ್ಲಿ ವಿಳಂಬ ಉಂಟಾಗಿತ್ತು.
ಮಧ್ಯಾಹ್ನ 3:10ರ ಸುಮಾರಿಗೆ, ಟರ್ಮಿನಲ್ 3ರ ಸಮೀಪವಿರುವ ರನ್‌ವೇ ಮೇಲೆ ವಿಮಾನವು ಇಳಿಯುತ್ತಿದ್ದಾಗ ಈ ಘಟನೆ ನಡೆಯಿತು


Spread the love
Share:

administrator

Leave a Reply

Your email address will not be published. Required fields are marked *