ರಷ್ಯಾ: ಅಮುರ್ ಗ್ಯಾಸ್ ಕೆಮಿಕಲ್ ಕಾಂಪ್ಲೆಕ್ಸ್‌ನಲ್ಲಿ ಭಾರಿ ಬೆಂಕಿ ಹಾಗೂ ಸ್ಫೋಟ; 6 ಚೀನೀ ಪ್ರಜೆಗಳು ಸೇರಿದಂತೆ 7 ಸಾ*ವು!

ಮಾಸ್ಕೋ: ರಷ್ಯಾದ ದೂರದ ಪೂರ್ವದ ಅಮುರ್ ಪ್ರದೇಶದ ಅಮುರ್ ಗ್ಯಾಸ್ ಕೆಮಿಕಲ್ ಕಾಂಪ್ಲೆಕ್ಸ್ ನಲ್ಲಿ ಮಂಗಳವಾರ ಭಾರಿ ಬೆಂಕಿ ಮತ್ತು ಸ್ಫೋಟ ಸಂಭವಿಸಿದ್ದು, 6 ಚೀನೀ ಪ್ರಜೆಗಳು ಸೇರಿದಂತೆ 7 ಜನರು ಸಾವನ್ನಪ್ಪಿದ್ದಾರೆ.

ಶೀಘ್ರದಲ್ಲೇ ಉದ್ಘಾಟನೆಗೊಳ್ಳಬೇಕಿದ್ದ ಈ ಸ್ಥಾವರವು ಪೂರ್ವ-ಕಾರ್ಯನಿರ್ವಹಣೆಯ ಕೆಲಸದಲ್ಲಿತ್ತು. ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದು, 9 ಮಂದಿ ಕಾಣೆಯಾಗಿದ್ದಾರೆ. 36 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, 152 ಜನರಿಗೆ ಗಾಯಗಳಿಗೆ ಚಿಕಿತ್ಸೆ ನೀಡಲಾಗಿದೆ.ರಷ್ಯಾದ ಅಮುರ್ ಪ್ರದೇಶದ ಸ್ವೊಬೊಡ್ನಿ ಪಟ್ಟಣದ ಬಳಿ ಎಜಿಸಿಸಿ ನಿರ್ಮಾಣವಾಗುತ್ತಿದೆ. ಅಮುರ್ ಸಂಕೀರ್ಣವು ರಷ್ಯಾದ ಪೆಟ್ರೋಕೆಮಿಕಲ್ ಕಂಪನಿ ಸಿಬರ್ ಮತ್ತು ಚೀನಾದ ಸರ್ಕಾರಿ ಸ್ವಾಮ್ಯದ ತೈಲ ಮತ್ತು ಅನಿಲ ದೈತ್ಯ ಸಿನೊಪೆಕ್ ನಡುವಿನ ಜಂಟಿ ಉದ್ಯಮವಾಗಿದೆ. ಸುಮಾರು 30,000 ಬಿಲ್ಡರ್‌ಗಳು ಈ ಯೋಜನೆಯಲ್ಲಿ ಭಾಗಿಯಾಗಿದ್ದರು. ಇದು ಸುಮಾರು 10 ಬಿಲಿಯನ್ ಡಾಲರ್ ಯೋಜನೆಯಾಗಿದೆ.