Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಗ್ರಿಗೋಲ್ಡ್ ಸಂತ್ರಸ್ತರಿಗೆ ಮತ್ತೆ ಆಶಾಕಿರಣ: ಎಲೂರು ವಿಶೇಷ ನ್ಯಾಯಾಲಯದಲ್ಲಿ ಡಿ.ಡಿ. ಸಲ್ಲಿಕೆ!

Spread the love

ಬೆಂಗಳೂರು:ಅಗ್ರಿಗೋಲ್ಡ್ ಹೂಡಿಕೆದಾರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾನೂನು ಹೋರಾಟ ಮತ್ತೊಂದು ಮಹತ್ವದ ಘಟ್ಟ ತಲುಪಿದೆ. ತಮಿಳುನಾಡು ಹೊಸೂರು ಆಸ್ತಿಗೆ ಸಂಬಂಧಿಸಿದಂತೆ ಉಳಿದ 1 ಕೋಟಿ 63 ಲಕ್ಷ ರೂಪಾಯಿ ಮೊತ್ತದ ಡಿ.ಡಿ.ಯನ್ನು ನಿನ್ನೆ ಎಲೂರು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಅಖಿಲ ಭಾರತ ಅಗ್ರಿಗೋಲ್ಡ್ ಗ್ರಾಹಕರ ಮತ್ತು ಪ್ರತಿನಿಧಿಗಳ ವೆಲ್ಫೇರ್ ಅಸೋಸಿಯೇಷನ್ ಮಾಹಿತಿ ನೀಡಿದೆ.

ಈ ಡಿಡಿ ಮೊತ್ತವು ನ್ಯಾಯಾಲಯದ ಖಾತೆಗೆ ಜಮೆಗೊಂಡ ಬಳಿಕ, ನಿಯಮಾನುಸಾರ ಆಸ್ತಿಯನ್ನು ಮೂರನೇ ವ್ಯಕ್ತಿಗೆ ಹಸ್ತಾಂತರಿಸುವ ಪ್ರಕ್ರುತಿ ನಡೆಯಲಿದೆ. ಈ ಕುರಿತು ವಿಶೇಷ ಪಿಪಿ ಅವರು ಸಚಿವರ ಸಮಿತಿಗೂ ಅಧಿಕೃತ ಮಾಹಿತಿ ನೀಡಿದ್ದಾರೆ.

ಜೊತೆಗೆ, ಹೈದರಾಬಾದ್‌ನ ಕೊತ್ತೂರು ಆಸ್ತಿಗೆ ಸಂಬಂಧಿಸಿದ ಪ್ರಮುಖ ಬೆಳವಣಿಗೆಯೊಂದರಲ್ಲಿ, ಹೂಡಿಕೆದಾರರ ಪರವಾಗಿ ಆಸ್ತಿಯನ್ನು ಪಡೆದುಕೊಳ್ಳಲು ಮೂರನೇ ವ್ಯಕ್ತಿ ಮುಂದೆ ಬಂದಿದ್ದಾರೆ. ನ್ಯಾಯಾಲಯದ ಅನುಮತಿ ಸಿಕ್ಕ ಕೂಡಲೇ ಹಣ ಪಾವತಿಸಿ ಆಸ್ತಿ ಸ್ವೀಕರಿಸಲು ಸಿದ್ಧವಿರುವುದಾಗಿ ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ಈ ಪ್ರಮುಖ ಪ್ರಕರಣದ ಮುಂದಿನ ವಿಚಾರಣೆಯು 2026 ಆಗಸ್ಟ್ 8 ರಂದು ನಡೆಯಲಿದೆ.

ಅಗ್ರಿಗೋಲ್ಡ್ ಹೂಡಿಕೆದಾರರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ನಡೆಯುತ್ತಿರುವ ಈ ಕಾನೂನು ಹೋರಾಟದ ಬೆಳವಣಿಗೆಗಳ ಕುರಿತು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಕೂಟದ ರಾಜ್ಯಾಧ್ಯಕ್ಷ ಹಾಗೂ ಅಖಿಲ ಭಾರತ ಅಗ್ರಿಗೋಲ್ಡ್ ಗ್ರಾಹಕರ ಮತ್ತು ಪ್ರತಿನಿಧಿಗಳ ವೆಲ್ಫೇರ್ ಅಸೋಸಿಯೇಷನ್ ಸ್ಥಾಪಕ ಅಧ್ಯಕ್ಷರಾದ ಸಿ. ರಾಘವೇಂದ್ರ ಕುಂಬ್ಳೆ ಹರ್ಷ ವ್ಯಕ್ತಪಡಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *