Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಂಗಳೂರು: ಇನ್ಮುಂದೆ ಪ್ರೀ-ವೆಡ್ಡಿಂಗ್, ಬರ್ತ್‌ಡೇ ಪಾರ್ಟಿಗೆ ಕೆಎಸ್‌ಟಿಡಿಸಿಯ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್ ಬಾಡಿಗೆಗೆ ಲಭ್ಯ!

Spread the love

ಬೆಂಗಳೂರು: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್ ಅನ್ನು ಈಗ ಬೆಂಗಳೂರಿನಲ್ಲಿ ಖಾಸಗಿ ಸಮಾರಂಭಗಳು, ಕಾರ್ಪೊರೇಟ್ ಈವೆಂಟ್‌ಗಳು ಮತ್ತು ಪ್ರೀ-ವೆಡ್ಡಿಂಗ್ ಫೋಟೋಶೂಟ್‌ಗಳಿಗಾಗಿ ಬುಕ್ ಮಾಡಬಹುದಾಗಿದೆ

ಪ್ರವಾಸೋದ್ಯಮ ಇಲಾಖೆಯ ಅಂಬಾರಿ ಡಬಲ್ ಡೆಕರ್ ಬಸ್​​​​ಗಳು ಇನ್ಮುಂದೆ ಬೆಂಗಳೂರು ನಗರದಲ್ಲಿ ಓಡಾಡಲು ಸೀಮಿತವಾಗಿರುವುದಿಲ್ಲ. ಬದಲಾಗಿ ಪ್ರಿ ವೆಡ್ಡಿಂಗ್ ಶೂಟ್, ಬರ್ತ್​​​​ ಡೇ ಸೆಲೆಬ್ರೆಶನ್​​​ಗೆ ಬಸ್​​​​​ಗಳು ಬಾಡಿಗೆಗೆ ಸಿಗಲಿವೆ.2026ರ ಜನವರಿಯಲ್ಲಿ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್‌ಗಳ ಸೇವೆಯನ್ನು ಪ್ರಾರಂಭಿಸಲಾಯಿತು. ಕೆಎಸ್‌ಟಿಡಿಸಿ ನಿರ್ವಹಿಸುವ ಮೂರು ಬಸ್‌ಗಳು ಇದುವರೆಗೆ ಪ್ರವಾಸಿಗರಿಗೆ ನಗರ ಪರ್ಯಟನೆಯ ‘ಹಾಪ್-ಆನ್, ಹಾಪ್-ಆಫ್’ ಸೇವೆಯನ್ನು ನೀಡುತ್ತಿದ್ದವು. ಇವು ರವೀಂದ್ರ ಕಲಾಕ್ಷೇತ್ರ, ಹಡ್ಸನ್ ಸರ್ಕಲ್, ಕಸ್ತೂರ್ಬಾ ರಸ್ತೆ, ಕಂಠೀರವ ಕ್ರೀಡಾಂಗಣ, ಕಬ್ಬನ್ ರಸ್ತೆ, ವಿಧಾನ ಸೌಧ ಹಾಗೂ ವಿಶ್ವೇಶ್ವರಯ್ಯ ಮ್ಯೂಸಿಯಂ ಸೇರಿದಂತೆ ಒಟ್ಟು 26 ಪ್ರಮುಖ ಆಕರ್ಷಣೀಯ ಸ್ಥಳಗಳನ್ನು ಸುತ್ತಾಡುತ್ತಿತ್ತು.ಇನ್ನು ಈ ಬಸ್ ಒಂದು ದಿನಕ್ಕೆ ವಾರದ ದಿನಗಳಲ್ಲಿ 32 ಸಾವಿರ ರೂಪಾಯಿ, ವಾರಾಂತ್ಯದಲ್ಲಿ 40 ಸಾವಿರ ರೂ. ಬಾಡಿಗೆ ನಿಗದಿಪಡಿಸಲಾಗಿದೆ. ಇನ್ನು ಸಮಾರಂಭಗಳು ಮತ್ತು ಪಾರ್ಟಿಗಳಿಗೆ 5 ಗಂಟೆಗಳ ಅವಧಿಗೆ ವಾರಾಂತ್ಯ (Sat-Sun): 28,000 + 5% GST, ವಾರದ ದಿನಗಳು (Mon-Fri 26,000 ರೂ. + 5% GST. ಒಂದು ವೇಳೆ ನಿಯಮಿತ ಸಮಯ ಮೀರಿದರೆ, ಇಡೀ ದಿನದ ದರ ಅನ್ವಯಿಸುತ್ತದೆ.
ಫೋಟೋಶೂಟ್‌ಗಳಿಗೆ (2 ಗಂಟೆಗಳ ಅವಧಿ) ವಾರಾಂತ್ಯ (Sat-Sun): 16,000 ರೂಪಾಉಇ + 5% GST. ವಾರದ ದಿನಗಳು (Mon-Fri):12,000 ರೂ. + 5% GST.2 ಗಂಟೆಗಿಂತ ಹೆಚ್ಚುವರಿ ಸಮಯಕ್ಕೆ ವಾರಾಂತ್ಯದಲ್ಲಿ ಪ್ರತಿ ಗಂಟೆಗೆ 7,000 ಹಾಗೂ ವಾರದ ದಿನಗಳಲ್ಲಿ ಪ್ರತಿ ಗಂಟೆಗೆ 6,000 ರೂಪಾಯಿ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.ಕೆಎಸ್‌ಟಿಡಿಸಿ ಅಧಿಕಾರಿಯೊಬ್ಬರು,ಜನವರಿಯಿಂದ ಇದುವರೆಗೆ ಸುಮಾರು 20,000 ಜನರು ಈ ಹಾಪ್-ಆನ್, ಹಾಪ್-ಆಫ್ ಸೇವೆಯನ್ನು ಬಳಸಿಕೊಂಡಿದ್ದಾರೆ. ವಾರಾಂತ್ಯಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ ಹಾಗೂ ವಾರದ ದಿನಗಳಲ್ಲೂ ಉತ್ತಮ ಸ್ಪಂದನೆ ಸಿಗುತ್ತಿದೆ. ಹೀಗಾಗಿ ಸಾರ್ವಜನಿಕರಿಗೆ ಜನ್ಮದಿನದ ಆಚರಣೆಗಳು, ಕಾರ್ಪೊರೇಟ್ ಈವೆಂಟ್‌ಗಳು ಹಾಗೂ ಪ್ರೀ-ವೆಡ್ಡಿಂಗ್ ಫೋಟೋಶೂಟ್‌ಗಳಿಗೆ ಅಂಬಾರಿ ಬಸ್‌ಗಳನ್ನು ಕಾಯ್ದಿರಿಸಲು ಅವಕಾಶ ನೀಡಲು ನಿರ್ಧರಿಸಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *