ಹೊಸದಿಲ್ಲಿ/ನಗೋಯಾ: ಏಷ್ಯನ್ ಗೇಮ್ಸ್ ಶೂಟಿಂಗ್‌ನಲ್ಲಿ ಭಾರತಕ್ಕೆ ಮತ್ತೊಂದು ಕಂಚಿನ ಪದಕ – ಅನಂತ್ ಜೀತ್ ಸಿಂಗ್ ಹಾಗೂ ಪರಿನಾಝ್ ಧಲಿವಾಲ್ ಸಾಧನೆ!

ಹೊಸದಿಲ್ಲಿ/ನಗೋಯಾ: ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಶೂಟರ್ಗಳಾದ ಅನಂತ್ ಜೀತ್ ಸಿಂಗ್ ನರುಕಾ ಮತ್ತು ಪರಿನಾಝ್ ಧಲಿವಾಲ್ ಅವರು ಮಿಕ್ಸೆಡ್ ಟೀಮ್ ಸ್ಟೀಟ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಫೈನಲ್ ನಲ್ಲಿ ಭಾರತೀಯ ಜೋಡಿ ಒಟ್ಟು 44 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆಯಿತು. ಅರ್ಹತಾ ಸುತ್ತಿನಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಈ ಜೋಡಿ ಫೈನಲ್ ಗೆ ಪ್ರವೇಶಿಸಿತ್ತು.
ಆರು ಸರಣಿಗಳಲ್ಲೂ ಸ್ಥಿರ ಪ್ರದರ್ಶನ ಕಾಯ್ದುಕೊಂಡ ಭಾರತದ ಜೋಡಿ ಅಂತಿಮವಾಗಿ 44 ಅಂಕಗಳನ್ನು ಕಲೆಹಾಕಿತು.
ಈ ಪದಕದೊಂದಿಗೆ ಪ್ರಸಕ್ತ ಏಷ್ಯನ್ ಗೇಮ್ಸ್ ಶೂಟಿಂಗ್ ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.
ಬುಧವಾರ ಭಾರತದ ಪುರುಷರ ಮತ್ತು ಮಹಿಳೆಯರ ಸ್ವೀಟ್ ಶೂಟಿಂಗ್ ತಂಡಗಳು ತಲಾ ಒಂದು ಕಂಚಿನ ಪದಕ ಗೆದ್ದುಕೊಂಡಿದ್ದವು.
