Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮೂಡುಬಿದಿರೆ: ವಿದ್ಯುತ್ ಅವಘಡದಿಂದ ತಾಯಿ-ಮಗ ದುರ್ಮರಣ – ಸಂತ್ರಸ್ತ ಕುಟುಂಬಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಸಾಂತ್ವನ!

Spread the love

ಮೂಡುಬಿದಿರೆ : ಪಾಲಡ್ಕ ಗ್ರಾಮದ ವರ್ಣಬೆಟ್ಟು ಪೊಸಲಾಯಿಯಲ್ಲಿ ವಿದ್ಯುತ್ ಅವಘಡ ಸಂಭವಿಸಿ ಪ್ರಾಣ ಕಳೆದುಕೊಂಡ ಮರ್ಸಿ ಮಸ್ಕರೇನ್ಹಸ್ ಹಾಗೂ ಶೋನ್ ಮಸ್ಕರೇನ್ಹಸ್ ಅವರ ಮನೆಗೆ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಶುಕ್ರವಾರ ಭೇಟಿ ನೀಡಿ, ದುಃಖದಲ್ಲಿರುವ ಸಂತ್ರಸ್ತ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ತಕ್ಷಣವೇ ಮೆಸ್ಕಾಂ (MESCOM) ಅಧಿಕಾರಿಗಳಿಗೆ ಸ್ಥಳ ಪರಿಶೀಲನೆ ನಡೆಸಲು ತಾಕೀತು ಮಾಡಲಾಗಿದೆ. ಮನೆಯಲ್ಲಿ ವಿದ್ಯುತ್ ಪ್ರವಹಿಸಲು ಅಸಲಿ ಕಾರಣವೇನು ಎಂಬುದನ್ನು ಪತ್ತೆ ಹಚ್ಚಿ, ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಅನಾಹುತಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಶಾಸಕರು ತಿಳಿಸಿದರು.

ಈ ಸಂದರ್ಭದಲ್ಲಿ ಪಾಲಡ್ಕ ಪಂಚಾಯತ್ ಮಾಜಿ ಉಪಾಧ್ಯಕ್ಷ ಸುಕೇಶ್ ಶೆಟ್ಟಿ, ಮಾಜಿ ಸದಸ್ಯ ಶೆಡ್ಯ ಸುರೇಶ್ ಪೂಜಾರಿ, ಸ್ಥಳೀಯರಾದ ಜಯ ಪೂಜಾರಿ ಹಾಗೂ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ವಿದೇಶದಲ್ಲಿದ್ದ ಮೃತರ ಹತ್ತಿರದ ಸಂಬಂಧಿ ಜೆರಿ ಮಸ್ಕರೇನ್ಹಸ್ ಅವರು ಶುಕ್ರವಾರ ಊರಿಗೆ ವಾಪಸ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ  ಶನಿವಾರ ಪಾಲಡ್ಕ ಸೈಂಟ್ ಇಗ್ನೇಶಿಯಸ್ ಚರ್ಚ್‌ನಲ್ಲಿ ಮರ್ಸಿ ಹಾಗೂ ಶೋನ್ ಅವರ ಮೃತದೇಹಗಳ ಅಂತಿಮ ವಿಧಿ-ವಿಧಾನ ಹಾಗೂ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.


Spread the love
Share:

administrator

Leave a Reply

Your email address will not be published. Required fields are marked *