Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಲಾಸ್‌ ಏಂಜಲೀಸ್: ಪ್ರತಿಭಟನೆಗಳ ನೆರಳಿನಲ್ಲಿ ವಿಶ್ವಕಪ್ ಕದನ; ನ್ಯೂಝಿಲೆಂಡ್ ವಿರುದ್ಧ ಇರಾನ್ ರೋಚಕ ಡ್ರಾ!

Spread the love

ಲಾಸ್‌ ಏಂಜಲೀಸ್‌: ರಾಜಕೀಯ ಬೆಳವಣಿಗೆಗಳು ಮತ್ತು ಪ್ರತಿಭಟನೆಗಳ ಛಾಯೆಯಲ್ಲಿ ನಡೆದ ವಿಶ್ವಕಪ್ ಫುಟ್ಬಾಲ್ ಪಂದ್ಯದಲ್ಲಿ ಇರಾನ್ ತಂಡ ಎರಡು ಬಾರಿ ಹಿನ್ನಡೆಯಿಂದ ಚೇತರಿಸಿಕೊಂಡು ನ್ಯೂಝಿಲೆಂಡ್ ವಿರುದ್ಧ 2-2 ಗೋಲುಗಳ ಸಮಬಲ ಸಾಧಿಸಿತು.
ಟೆಹ್ರಾನ್ ಸರ್ಕಾರದ ವಿರುದ್ಧದ ಪ್ರತಿಭಟನೆಗಳು ಹಾಗೂ ಅಮೆರಿಕ-ಇರಾನ್ ಯುದ್ಧಕ್ಕೆ ಅಂತ್ಯ ಹೇಳುವ ಶಾಂತಿ ಒಪ್ಪಂದದ ಬೆಳವಣಿಗೆಗಳು ಪಂದ್ಯದ ಸುತ್ತಲಿನ ವಾತಾವರಣವನ್ನು ಪ್ರಕ್ಷುಬ್ಧಗೊಳಿಸಿದ್ದವು. ಪಂದ್ಯದ ವೇಳೆ ಕ್ರೀಡಾಂಗಣದ ಹೊರಗೆ ಭಾರೀ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಸರ್ಕಾರ ವಿರೋಧಿ ಪ್ರತಿಭಟನಾಕಾರರು ಧ್ವಜಗಳು ಮತ್ತು ಫಲಕಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ಪಂದ್ಯದ ಆರಂಭದಲ್ಲೇ ನ್ಯೂಝಿಲೆಂಡ್ ಮುನ್ನಡೆ ಸಾಧಿಸಿತು. ಕ್ರಿಸ್ ವುಡ್ ಅವರ ಪಾಸ್ ಅನ್ನು ಎಲಿಜಾ ಜಸ್ಟ್ ವಾಲಿ ಶಾಟ್ ಮೂಲಕ ಗೋಲಾಗಿ ಪರಿವರ್ತಿಸಿದರು. ಈ ಗೋಲಿನ ಬಳಿಕ ಇರಾನ್ ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿದ್ದ ಕೆಲ ಅಭಿಮಾನಿಗಳು ನ್ಯೂಝಿಲೆಂಡ್ ಬೆಂಬಲಿಗರೊಂದಿಗೆ ಸಂಭ್ರಮಿಸಿದರು. ಆಡಳಿತ ವಿರೋಧಿ ಪ್ರೇಕ್ಷಕರಲ್ಲಿ ಹಲವರು ಇಸ್ಲಾಮಿಕ್ ಕ್ರಾಂತಿಗೆ ಪೂರ್ವದ ಇರಾನ್ನ ಸಿಂಹ ಮತ್ತು ಸೂರ್ಯ ಚಿಹ್ನೆಯ ಧ್ವಜಗಳನ್ನು ಪ್ರದರ್ಶಿಸಿದರು. ಕಿಕ್‌ಆಫ್ ಗೆ ಮುನ್ನ ರಾಷ್ಟ್ರಗೀತೆಗೆ ಕೆಲವರು ಬೊಬ್ಬೆ ಹೊಡೆದ ಘಟನೆ ಕೂಡ ನಡೆಯಿತು.ಆದರೆ 70 ಸಾವಿರಕ್ಕೂ ಅಧಿಕ ಪ್ರೇಕ್ಷಕರಿದ್ದ ಕ್ರೀಡಾಂಗಣದಲ್ಲಿ ಬಹುಪಾಲು ಅಭಿಮಾನಿಗಳು ಇರಾನ್ ತಂಡಕ್ಕೆ ಬೆಂಬಲ ಸೂಚಿಸಿದರು. ‘ಇರ್-ರನ್, ಇರ್-ರನ್’ ಎಂಬ ಘೋಷಣೆಗಳು ನಿರಂತರವಾಗಿ ಮೊಳಗುತ್ತಿದ್ದವು.
ಪಂದ್ಯದ 30ನೇ ನಿಮಿಷದಲ್ಲಿ ರಾಮಿನ್ ರೆಫ್ರಿಯನ್ ಸಮಬಲದ ಗೋಲು ಗಳಿಸಿ ಇರಾನ್ ಗೆ ಚೈತನ್ಯ ತುಂಬಿದರು. ಬ್ಲಾಕ್ ಮಾಡಿದ ಶಾಟ್ ನಿಂದ ಹಿಂದಿರುಗಿದ ಚೆಂಡನ್ನು ಅವರು ಸಮೀಪದಿಂದಲೇ ಗೋಲುಪೆಟ್ಟಿಗೆಗೆ ತಳ್ಳಿದರು. ಅಮೆರಿಕಾ ಮತ್ತು ಇಸ್ರೇಲ್ ವಾಯುದಾಳಿಗಳ ಹಿನ್ನೆಲೆಯಲ್ಲಿ ದೇಶೀಯ ಲೀಗ್ ಸ್ಥಗಿತಗೊಂಡಿದ್ದರಿಂದ ಫೆಬ್ರುವರಿಯಿಂದ ಕ್ಲಬ್ ಫುಟ್ಬಾಲ್ ಆಡದ ಆಟಗಾರರಲ್ಲಿ ರೆಝಯನ್ ಕೂಡ ಒಬ್ಬರಾಗಿದ್ದಾರೆ.

ದ್ವಿತೀಯಾರ್ಧ ಆರಂಭವಾದ ಕೆಲವೇ ಕ್ಷಣಗಳಲ್ಲಿ ನ್ಯೂಝಿಲೆಂಡ್ ಮತ್ತೆ ಮುನ್ನಡೆ ಪಡೆಯಿತು. ನಾಯಕ ಕ್ರಿಸ್ ವುಡ್ ನೀಡಿದ ನಿಖರ ಪಾಸ್ ಅನ್ನು ಎಲಿಜಾ ಜಸ್ಟ್ ಗೋಲಾಗಿ ಪರಿವರ್ತಿಸಿ ತಂಡಕ್ಕೆ 2-1 ಮುನ್ನಡೆ ತಂದುಕೊಟ್ಟರು.
ಆದರೆ ಇರಾನ್ ಮತ್ತೊಮ್ಮೆ ತಿರುಗೇಟು ನೀಡಿತು. 10 ನಿಮಿಷಗಳ ಬಳಿಕ ರಾಮಿನ್ ರೆಫ್ರಿಯನ್ ನೀಡಿದ ಅಚ್ಚುಕಟ್ಟಾದ ಕ್ರಾಸ್ ಗೆ ಮೊಹಮ್ಮದ್ ಮೊಹೆಬ್ಬಿ ಹೆಡರ್ ಮೂಲಕ ಗೋಲು ಗಳಿಸಿದರು. ಇದರಿಂದ ಸ್ಕೋರ್ 2-2ಕ್ಕೆ ಸಮವಾಯಿತು.
ಉಳಿದ ಅವಧಿಯಲ್ಲಿ ಎರಡೂ ತಂಡಗಳು ಗೆಲುವಿನ ಗೋಲಿಗಾಗಿ ಪ್ರಯತ್ನಿಸಿದರೂ ಯಶಸ್ಸು ದೊರೆಯಲಿಲ್ಲ. ಪರಿಣಾಮ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು.

ವಿಶ್ವಕಪ್ ನಲ್ಲಿ ಮೂರನೇ ಬಾರಿ ಸ್ಪರ್ಧಿಸುತ್ತಿರುವ ನ್ಯೂಝಿಲೆಂಡ್ ತಂಡಕ್ಕೆ ಇದು ಸತತ ಏಳನೇ ಪಂದ್ಯದಲ್ಲೂ ಗೆಲುವು ಕೈತಪ್ಪಿದಂತಾಯಿತು. ಮತ್ತೊಂದೆಡೆ, ಮೊದಲ ಬಾರಿಗೆ ನಾಕೌಟ್ ಹಂತ ಪ್ರವೇಶಿಸುವ ಗುರಿ ಹೊಂದಿರುವ ಇರಾನ್ ಮಹತ್ವದ ಒಂದು ಅಂಕ ಸಂಪಾದಿಸಿತು.
ಪಂದ್ಯವು ಅಮೆರಿಕಾದಲ್ಲಿರುವ ಇರಾನಿ ಸಮುದಾಯದೊಳಗೂ ಚರ್ಚೆಗೆ ಕಾರಣವಾಯಿತು. ಕೆಲವರು ಪಂದ್ಯಕ್ಕೆ ಹಾಜರಾಗುವುದು ಇರಾನ್ ಸರ್ಕಾರಕ್ಕೆ ಬೆಂಬಲ ಸೂಚಿಸುವಂತಾಗಿದೆ ಎಂದು ಅಭಿಪ್ರಾಯಪಟ್ಟರೆ, ಇನ್ನು ಕೆಲವರು ರಾಜಕೀಯವನ್ನು ಬದಿಗಿಟ್ಟು ರಾಷ್ಟ್ರೀಯ ತಂಡದ ಆಟಗಾರರನ್ನು ಬೆಂಬಲಿಸುವುದು ತಮ್ಮ ಉದ್ದೇಶ ಎಂದು ಹೇಳಿದರು.
ಕಿಕ್‌ಆಫ್ ಗೆ ಮುನ್ನ ಸುಮಾರು 300ರಿಂದ 500 ಪ್ರತಿಭಟನಾಕಾರರು ಕ್ರೀಡಾಂಗಣದ ಹೊರಗೆ ಸೇರಿ ಸರ್ಕಾರ ವಿರೋಧಿ ಘೋಷಣೆಗಳನ್ನು ಕೂಗಿದರು.
ಇರಾನ್ ತನ್ನ ಮುಂದಿನ ಪಂದ್ಯದಲ್ಲಿ ರವಿವಾರ ಲಾಸ್ ಏಂಜಲೀಸ್ ನಲ್ಲಿ ಬೆಳ್ಳಿಯಂ ತಂಡವನ್ನು ಎದುರಿಸಲಿದೆ. ಅದೇ ದಿನ ವ್ಯಾಂಕೂವರ್ ನಲ್ಲಿ ನ್ಯೂಝಿಲೆಂಡ್ ತಂಡ ಈಜಿಪ್ಟ್ ವಿರುದ್ಧ ಸೆಣಸಲಿದೆ.


Spread the love
Share:

administrator

Leave a Reply

Your email address will not be published. Required fields are marked *