Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹಾಸನ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳಾ ನಿರ್ವಾಹಕಿ-ಪ್ರಯಾಣಿಕರ ನಡುವೆ ಮಾರಾಮಾರಿ!

Spread the love

ಹಾಸನ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ನಲ್ಲಿ ಮಹಿಳೆಯೊಬ್ಬರು ಮಹಿಳಾ ನಿರ್ವಾಹಕಿ ಮೇಲೆ ಹಲ್ಲೆ ಮಾಡಿರುವ ಘಟನೆ ವರದಿಯಾಗಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಬೇಲೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮದ್ಯಪಾನ ಮಾಡಿದ್ದ ಮಹಿಳಾ ಪ್ರಯಾಣಿಕರೊಬ್ಬರು ಸೀಟಿಗಾಗಿ ಗಲಾಟೆ ನಡೆಸಿ, ಮಹಿಳಾ ನಿರ್ವಾಹಕಿಯ ಮೇಲೆ ಮೊದಲು ಹಲ್ಲೆ ನಡೆಸಿದ್ದಾರೆ.

ಇದರಿಂದ ತಾಳ್ಮೆ ಕಳೆದುಕೊಂಡ ನಿರ್ವಾಹಕಿ ಮತ್ತು ಸಹಪ್ರಯಾಣಿಕರು ತಿರುಗಿ ಆಕೆಯ ಮೇಲೆ ಹಲ್ಲೆ ನಡೆಸಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ರಸ್ತುತ ರಾಜ್ಯ ಸಾರಿಗೆ ಇಲಾಖೆಯ ಅಧಿಕಾರಿಗಳು ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಆಗಿದ್ದೇನು?

ಬೇಲೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಈ ಘಟನೆ ನಡೆದಿದ್ದು, ಶನಿವಾರ ಸಂಜೆ ಸುಮಾರು 4:00 ಗಂಟೆಗೆ ಹಾಸನ ಮಾರ್ಗವಾಗಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ (ನಂಬರ್ KA-13 F 2353) ನಲ್ಲಿ ಮಹಿಳಾ ನಿರ್ವಾಹಕಿ ಹಾಗೂ ಮಹಿಳಾ ಪ್ರಯಾಣಿಕರೊಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಬಳಿಕ ಅದು ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.

ಲಭ್ಯವಿರುವ ಮಾಹಿತಿಯ ಪ್ರಕಾರ, ಸಣ್ಣದಾಗಿ ಆರಂಭವಾದ ಮಾತಿನ ಚಕಮಕಿಯ ನಂತರ ಮಹಿಳಾ ನಿರ್ವಾಹಕಿ ಮತ್ತು ಬಸ್‌ನಲ್ಲಿದ್ದ ಇತರ ಕೆಲವು ಸಹಪ್ರಯಾಣಿಕರು ಸೇರಿ ಸದರಿ ಮಹಿಳಾ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಬಸ್‌ನ ಒಳಗೆ ನಡೆದ ಈ ಅನಿರೀಕ್ಷಿತ ಜಗಳದಿಂದಾಗಿ ಸಹಪ್ರಯಾಣಿಕರಲ್ಲಿ ಆತಂಕ ಮತ್ತು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಘಟನೆಗೆ ನಿಖರವಾದ ಕಾರಣ ಏನೆಂಬುದು ಇನ್ನಷ್ಟೇ ಅಧಿಕೃತವಾಗಿ ದೃಢಪಡಬೇಕಿದೆ. ಸಂಬಂಧಪಟ್ಟ ಸಾರಿಗೆ ಇಲಾಖೆಯ ಅಧಿಕಾರಿಗಳು ಈ ಕುರಿತು ಸದ್ಯ ಮಾಹಿತಿ ಕಲೆಹಾಕುತ್ತಿದ್ದಾರೆ.

ಮದ್ಯಪಾನ ಮಾಡಿ ಕಿರಿಕ್

ಬಸ್‌ ಹತ್ತಿದ ಮಹಿಳೆಯು ಮದ್ಯಸೇವನೆ ಮಾಡಿದ್ದು, ಸೀಟ್‌ಗಾಗಿ ಜಗಳ ಮಾಡಿದ್ದಾರೆ. ಇತರೆ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡಿದರು ಎಂದು ಆರೋಪ ಕೇಳಿಬಂದಿದೆ. ಇದನ್ನ ಪ್ರಶ್ನಿಸಿದ ಮಹಿಳಾ ಕಂಡಕ್ಟರ್‌ ಅವರ ಮೇಲೆಯೇ ಕೈ ಮಾಡಿದ್ದಾರೆ. ತಾಳ್ಮೆ ಕಳೆದುಕೊಂಡ ಕಂಡಕ್ಟರ್‌ ತಿರುಗಿಸಿ ಹೊಡೆದಿದ್ದು, ಸಹ ಪ್ರಯಾಣಿಕರು ಕೂಡ ಏಟು ಹಾಕಿದ್ದಾರೆ.

ಬಸ್‌ನಲ್ಲಾದ ಘಟನೆಯ ವಿಡಿಯೋವನ್ನು ಸಹ ಪ್ರಯಾಣಿಕರೊಬ್ಬರು ಸೆರೆ ಹಿಡಿದಿದ್ದಾರೆ. ಬಸ್‌ನಲ್ಲಿ ಸೀಟ್‌ಗಾಗಿ ಮಹಿಳೆಯರು ಜಗಳ, ಕಂಡಕ್ಟರ್‌ನಿಂದ ಮಹಿಳೆ ಮೇಲೆ ಹಲ್ಲೆ ಎಂದು ಹಲವು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.


Spread the love
Share:

administrator

Leave a Reply

Your email address will not be published. Required fields are marked *