Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

₹4.50 ಲಕ್ಷಕ್ಕೆ ಟಾಟಾ ಪಂಚ್ ಇವಿ ಕಾರು ನೀಡುವುದಾಗಿ ನಂಬಿಸಿ ₹4.35 ಲಕ್ಷ ವಂಚನೆ!

Spread the love

ಕಾರ್ಕಳ : ಫೇಸ್‌ಬುಕ್‌ನಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಅತ್ಯಂತ ಕಡಿಮೆ ಬೆಲೆಗೆ ಮಾರಾಟಕ್ಕಿದೆ ಎಂಬ ಜಾಹೀರಾತು ನಂಬಿ, ವೈದ್ಯನೆಂದು ಪರಿಚಯಿಸಿಕೊಂಡ ಚಾಣಾಕ್ಷ ಸೈಬರ್ ವಂಚಕನಿಗೆ ವ್ಯಕ್ತಿಯೊಬ್ಬರು ಬರೋಬ್ಬರಿ ₹4.35 ಲಕ್ಷ ಹಣ ಪಾವತಿಸಿ ವಂಚನೆಗೊಳಗಾದ ಘಟನೆ ಕಾರ್ಕಳ ತಾಲೂಕಿನ ಬೆಳ್ಳಣ್ಣಿನಲ್ಲಿ ನಡೆದಿದೆ. ಕಾರ್ಕಳ ತಾಲೂಕಿನ ಭೆಳ್ಮಣ್ ಪುನರು ಮನೆ ನಿವಾಸಿ ಬಾಲಕೃಷ್ಣ ರಾವ್ (48) ವಂಚನೆಗೊಳಗಾದ ದುರ್ದೈವಿ.ಆಗಸ್ಟ್ 20, 2026ರಂದು ರಾತ್ರಿ ಬಾಲಕೃಷ್ಣ ರಾವ್ ಅವರು ಫೇಸ್‌ಬುಕ್‌ನಲ್ಲಿ ವಿಡಿಯೋ ಹಾಗೂ ರೀಲ್ಸ್ ನೋಡುತ್ತಿದ್ದಾಗ KA-05 NK-2712 ನೋಂದಣಿ ಸಂಖ್ಯೆಯ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರು ಮಾರಾಟಕ್ಕಿದೆ ಎಂಬ ಜಾಹೀರಾತು ಬಂದಿತ್ತು. ಕಾರು ಖರೀದಿಸುವ ಆಸಕ್ತಿಯಿಂದ ಅವರು ತಮ್ಮ ಮೊಬೈಲ್ ಸಂಖ್ಯೆಯನ್ನು ಕಳುಹಿಸಿದ್ದರು. ತಕ್ಷಣವೇ ಅಪರಿಚಿತ ನಂಬರ್‌ನಿಂದ (8050085834) ಕರೆ ಮಾಡಿದ ವ್ಯಕ್ತಿಯೊಬ್ಬ, ತನ್ನನ್ನು ಚಿಕ್ಕಮಗಳೂರಿನ ಡಾ. ರವಿಚಂದ್ರ ಎಂದು ಪರಿಚಯಿಸಿಕೊಂಡಿದ್ದನು. ತನ್ನ ಬಳಿ ಇರುವ ಟಾಟಾ ಪಂಚ್ ಇವಿ ಕಾರನ್ನು ₹4,50,000ಕ್ಕೆ ಮಾರಾಟ ಮಾಡುವುದಾಗಿ ನಂಬಿಸಿ ಲೊಕೇಶನ್ ಕಳುಹಿಸಿದ್ದನು.
ಆಗಸ್ಟ್ 20: ಗೂಗಲ್ ಪೇ/ಪೇಟಿಎಂ (9448701200) ಮೂಲಕ ₹45,000 ಮುಂಗಡವಾಗಿ ಕಳುಹಿಸಿದರು.
ಆಗಸ್ಟ್ 21: ಕೆನರಾ ಬ್ಯಾಂಕ್ ಖಾತೆಯಿಂದ ಶ್ರೀ ಚರಣ್ ಕೋ-ಆಪರೇಟಿವ್ ಬ್ಯಾಂಕ್ ಖಾತೆಗೆ ₹3,00,000 ಆರ್‌ಟಿಜಿಎಸ್ (RTGS) ಮಾಡಿದ್ದಲ್ಲದೆ, ಮತ್ತೊಮ್ಮೆ ಪೇಟಿಎಂ ಮೂಲಕ ₹45,000 ಪಾವತಿಸಿದರು.
ಆಗಸ್ಟ್ 22: ಪುನಃ ಪೇಟಿಎಂ ಮೂಲಕ ₹45,000 ವರ್ಗಾಯಿಸಿದರು.  ಹೀಗೆ ಒಟ್ಟು ₹4,35,000 ಹಣವನ್ನು ವಂಚಕನಿಗೆ ಪಾವತಿಸಿದ್ದರು.
ಹಣ ಪಾವತಿಸಿದ ಬಳಿಕ ಕಾರು ತರಲು ಆರೋಪಿ ನೀಡಿದ್ದ ಚಿಕ್ಕಮಗಳೂರಿನ ಮತ್ತಿಕೆರೆ ಲೊಕೇಶನ್‌ಗೆ ಬಾಲಕೃಷ್ಣ ರಾವ್ ತೆರಳಿದಾಗ ಸ್ಥಳದಲ್ಲಿ ಯಾರೂ ಇರಲಿಲ್ಲ. ಆತನಿಗೆ ಕರೆ ಮಾಡಿದಾಗ “ನಾನು ಮಡಿಕೇರಿಯ ವಿರಾಜ್‌ಪೇಟೆಯಲ್ಲಿದ್ದೇನೆ, ಕಾರು ಚಾರ್ಜ್ ಕಮ್ಮಿ ಆಗಿ ಶಟ್‌ಡೌನ್ ಆಗಿದೆ. ಶೋರೂಂನಿಂದ ರಿಪೇರಿ ಮಾಡಿಸಿ ಒಂದು ವಾರದಲ್ಲಿ ಡ್ರೈವರ್ ಮೂಲಕ ನಿಮ್ಮ ಮನೆಗೆ ಕಳುಹಿಸಿಕೊಡುತ್ತೇನೆ” ಎಂದು ನೆಪ ಹೇಳಿ ದಿನ ದೂಡಿದ್ದನು. ಬಳಿಕ ಕಾರನ್ನೂ ನೀಡದೆ, ಹಣವನ್ನೂ ವಾಪಸ್ ನೀಡದೆ ಸಂಪರ್ಕಕ್ಕೆ ಸಿಗದೆ ವಂಚಿಸಿರುವುದು ಸ್ಪಷ್ಟವಾಗಿದೆ.
ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ಮಾಹಿತಿ ನೀಡಿ ಹಣ ದೋಚಿದ ಆರೋಪಿಯ ವಿರುದ್ಧ ಬಾಲಕೃಷ್ಣ ರಾವ್ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂಬರ್ 89/2026 ರಂತೆ ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯ ಸೆಕ್ಷನ್ 66(D) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS 2023) ಯ ಸೆಕ್ಷನ್ 318(4) (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಸೈಬರ್ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *