Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಫಿಫಾ ವಿಶ್ವಕಪ್: ಅತಿಹೆಚ್ಚು ಗೋಲುಗಳ ದಾಖಲೆ ಬರೆದ ಲಿಯೊನೆಲ್ ಮೆಸ್ಸಿ!

Spread the love

ಹೊಸದಿಲ್ಲಿ: ಫುಟ್ಬಾಲ್ ದಂತಕಥೆ ಲಿಯೊನೆಲ್ ಮೆಸ್ಸಿ ಫಿಫಾ ವಿಶ್ವಕಪ್ ನಲ್ಲಿ ಅತಿಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ದಾಖಲೆ ಸೃಷ್ಟಿಸಿದರು. ಫಿಫಾ ವಿಶ್ವಕಪ್ ನ ಜೆ ಗುಂಪಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡದ ನಾಯಕ ಆಸ್ಟ್ರಿಯಾ ವಿರುದ್ಧ ಗೋಲು ಗಳಿಸುವ ಮೂಲಕ ಈ ದಾಖಲೆಗೆ ಪಾತ್ರರಾದರು. ಜತೆಗೆ ಸತತ ಎರಡು ವಿಶ್ವಕಪ್ ಪಂದ್ಯಗಳಲ್ಲಿ ಗೋಲು ಗಳಿಸಿದ ಹೆಗ್ಗಳಿಕೆಗೂ ಪಾತ್ರರಾದರು.
ಈ ಗೋಲಿನೊಂದಿಗೆ ವಿಶ್ವಕಪ್ ನಲ್ಲಿ 17 ಗೋಲು ಗಳಿಸಿರುವ ಮೆಸ್ಸಿ, ಜರ್ಮನಿಯ ಮಿರೊಪ್ಲೋವ್ ಕ್ಲೋಸ್ ಅವರ ದಾಖಲೆಯನ್ನು ಮುರಿದರು. 38 ವರ್ಷ ವಯಸ್ಸಿನ ಮೆಸ್ಸಿ ಸತತ ಆರು ವಿಶ್ವಕಪ್ ಪಂದ್ಯಗಳಲ್ಲಿ ಗೋಲು ಗಳಿಸಿರುವ ಫ್ರಾನ್ಸ್ ನ ಜೆಸ್ಟ್ ಫಾಂಟೈನ್ ಹಾಗೂ ಬ್ರೆಝಿಲ್‌ನ ಜೈರ್ಜಿಝಿನೊ ಅವರ ದಾಖಲೆಯನ್ನು ಕೂಡಾ ಸರಿಗಟ್ಟಿದರು.
ಅರ್ಜೆಂಟೀನಾ ಪರ 200ನೇ ಪಂದ್ಯ ಆಡುವ ಮೂಲಕ ಮೆಸ್ಸಿ, ಮೊದಲ ವಿಶ್ವಕಪ್ ಹ್ಯಾಟ್ರಿಕ್ ನೊಂದಿಗೆ ಅಲ್ಲೀರಿಯಾ ವಿರುದ್ಧದ ಪಂದ್ಯದಲ್ಲಿ ಅಮೋಘ ಆರಂಭ ಪಡೆದಿದ್ದರು.
ಇತ್ತೀಚೆಗೆ ಮೆಸ್ಸಿ ಮತ್ತು ಕ್ರಿಸ್ಟಿಯಾನೊ ರೊನಾಲ್ಲೊ ನಡುವೆ ತಮ್ಮನ್ನು ಹೋಲಿಕೆ ಮಾಡುವುದನ್ನು ತಳಿಹಾಕಿದ್ದ ಫ್ರಾನ್ಸ್ ನ ಫುಟ್ಬಾಲ್ ತಾರೆ ಕಿಲಿಯನ್ ಎಂಬಾಪ್ಪೆ, “ಕ್ರಿಸ್ಟಿಯಾನೊ ಜತೆಗೆ ಮೆಸ್ಸಿ ಶ್ರೇಷ್ಠ ಆಟಗಾರ. ಇದು ಸ್ಪಷ್ಟ. ನಾನು ನನ್ನ ತಂಡ ಮತ್ತೊಂದು ವಿಶ್ವಕಪ್ ಗೆಲ್ಲಲು ನೆರವಾಗಲು ಪ್ರಯತ್ನಿಸುತ್ತೇನೆ. ಉಳಿದ ಚರ್ಚೆ ಕೇವಲ ಪತ್ರಕರ್ತರಿಗೆ ಬಿಟ್ಟದ್ದು” ಎಂದು ಹೇಳಿದ್ದರು. ಟ್ರೋಫಿ ಗೆಲ್ಲುವುದಕ್ಕೆ ಹೋಲಿಸಿದರೆ ವೈಯಕ್ತಿಕ ದಾಖಲೆಗಳಿಗೆ ಮಹತ್ವ ಕಡಿಮೆ ಎಂದು ಫ್ರಾನ್ಸ್ ನಾಯಕ ಸ್ಪಷ್ಟಪಡಿಸಿದ್ದರು.


Spread the love
Share:

administrator

Leave a Reply

Your email address will not be published. Required fields are marked *