Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭಾರತಕ್ಕೆ ರಸಗೊಬ್ಬರದ ಸಿರಿ: ಹಾರ್ಮುಝ್ ಜಲಸಂಧಿ ದಾಟಿದ ಹಡಗುಗಳು; ಬಂದರುಗಳತ್ತ ಪ್ರಯಾಣ

Spread the love

ಹೊಸದಿಲ್ಲಿ: ಸುಮಾರು 1.8 ಲಕ್ಷ ಟನ್ ಯೂರಿಯಾ, ಡೈ-ಅಮೋನಿಯಂ ಫಾಸ್ಪೇಟ್ (ಡಿಎಪಿ) ಮತ್ತು ಗಂಧಕವನ್ನು ಭಾರತಕ್ಕೆ ಹೊತ್ತು ತರುತ್ತಿರುವ ನಾಲ್ಕು ಹಡಗುಗಳು ಹಾರ್ಮುಝ್ ಜಲಸಂಧಿಯನ್ನು ದಾಟಿ ಸೋಮವಾರ ಭಾರತದ ಬಂದರುಗಳತ್ತ ಪ್ರಯಾಣ ಬೆಳೆಸಿವೆ ಎಂದು ರಸಗೊಬ್ಬರ ಇಲಾಖೆ ಪ್ರಕಟಿಸಿದೆ.
ಸಂಘರ್ಷಪೀಡಿತ ಪ್ರದೇಶದ ಕಾಲುವೆಯನ್ನು ಈ ಹಡಗುಗಳು ಕಳೆದ ವಾರ ದಾಟಿವೆ. ಮೂರು ತೈಲ ಟ್ಯಾಂಕರ್ ಗಳು ಕೂಡಾ ಈ ಆಯಕಟ್ಟಿನ ಸಾಗರ ಮಾರ್ಗವನ್ನು ಶನಿವಾರ ದಾಟಿವೆ. ಇರಾನ್ ಈ ಜಲಸಂಧಿಯನ್ನು ಮುಚ್ಚುವುದಾಗಿ ಘೋಷಿಸುವ ಮುನ್ನ ಭಾರತಕ್ಕೆ ಆಗಮಿಸುತ್ತಿರುವ ಏಳು ಹಡಗುಗಳು ಈ ಕಾಲುವೆಯನ್ನು ದಾಟಿವೆ ಎಂದು ತಿಳಿದುಬಂದಿದೆ.
ಕಾಲುವೆ ದಾಟಿರುವ ಎರಡು ಹಡಗುಗಳು 91750 ಟನ್ ಯೂರಿಯಾ ಹೊಂದಿದ್ದು, ಮತ್ತೊಂದು ಹಡಗು 55 ಸಾವಿರ ಟನ್ ಡಿಎಪಿಯನ್ನು ಸಾಗಿಸುತ್ತಿದೆ. ನಾಲ್ಕನೇ ಹಡಗು 33251 ಟನ್ ಗಂಧಕವನ್ನು ಹೊತ್ತು ತರುತ್ತಿದೆ. ಈ ಹಡಗುಗಳು ಶೀಘ್ರವೇ ಕೃಷ್ಣಪಟ್ಟಣಂ, ಕಾಕಿನಾಡ (ಆಂಧ್ರ), ಪಾರಾದೀಪ್ (ಒಡಿಶಾ) ಮತ್ತು ಮುಂದ್ರಾ (ಗುಜರಾತ್) ಬಂದರುಗಳನ್ನು ತಲುಪಲಿವೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.


Spread the love
Share:

administrator

Leave a Reply

Your email address will not be published. Required fields are marked *