Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದೆಹಲಿ: ಪೊಲೀಸ್ ಅಧಿಕಾರಿಯ ಮಗನ ಮರ್ಸಿಡಿಸ್ ಕಾರು ಡಿಕ್ಕಿ; ನಡೆದುಕೊಂಡು ಹೋಗುತ್ತಿದ್ದ ವೃದ್ಧೆ ಸಾ*ವು!

Spread the love

ನವದೆಹಲಿ: ಪೊಲೀಸ್ ಅಧಿಕಾರಿಯೊಬ್ಬರ ಮಗ ಕುಡಿದು ಚಲಾಯಿಸುತ್ತಿದ್ದ ಮರ್ಸಿಡಿಸ್ ಕಾರು ಡಿಕ್ಕಿ ಹೊಡೆದು ವೃದ್ಧೆಯೊಬ್ಬರು ಸಾವನ್ನಪ್ಪಿರುವ ಘಟನೆ ದೆಹಲಿಯಲ್ಲಿ (Delhi) ನಡೆದಿದೆ.

ದೆಹಲಿಯ ನರೇಲಾದಲ್ಲಿ ಬೆಳಗಿನ ನಡೆದುಕೊಂಡು ಹೋಗುತ್ತಿದ್ದ ವೃದ್ಧ ಮಹಿಳೆಗೆ ವೇಗವಾಗಿ ಬಂದ ಮರ್ಸಿಡಿಸ್ ಕಾರು ಡಿಕ್ಕಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ವೇಳೆ ಸ್ಥಳದಲ್ಲಿದ್ದ ವೃದ್ಧೆ ಮೃತಪಟ್ಟಿದ್ದಾರೆ. ಇಂದು ಬೆಳಿಗ್ಗೆ ಮಾಮುರ್‌ಪುರದ ಹಿಮಾಲಯ ಅಪಾರ್ಟ್‌ಮೆಂಟ್ ಹೊರಗೆ ಈ ಘಟನೆ ಸಂಭವಿಸಿದೆ. 70 ವರ್ಷದ ಊರ್ಮಿಳಾ ಮೃತ ಮಹಿಳೆ ಎಂದು ಗುರುತಿಸಲಾಗಿದೆ.

ಮರ್ಸಿಡಿಸ್ ಕಾರಿನಲ್ಲಿ ಹರಿಯಾಣ ಪೊಲೀಸ್ ಇಲಾಖೆಯ ಸಬ್ ಇನ್ಸ್‌ಪೆಕ್ಟರ್ ಮಗ ಶುಭಂ ಇದ್ದ. ಅಪಘಾತದ ಸಮಯದಲ್ಲಿ ಶುಭಂ ಕುಡಿದಿದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ. ಪೊಲೀಸರು ಸ್ಥಳದಲ್ಲೇ ಆತನನ್ನು ಬಂಧಿಸಿದ್ದಾರೆ.

ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಮರ್ಸಿಡಿಸ್ ಕಾರು, ವ್ಯಾಗನ್ ಆರ್ ಕಾರು ಮುಖಾಮುಖಿ ಡಿಕ್ಕಿಯಾಗಿವೆ. ಗುದ್ದ ಪರಿಣಾಮವಾಗಿ ವ್ಯಾಗನ್ ಆರ್ ಕಾರು ಹಿಂದಕ್ಕೆ ಎಸೆಯಲ್ಪ,, ದೂರದಲ್ಲಿ ನಿಲ್ಲಿಸಿದ್ದ ತ್ರಿಚಕ್ರ ವಾಹನ ಲೋಡಿಂಗ್ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ವೃದ್ಧೆ ತ್ರಿಚಕ್ರ ವಾಹನ ಮತ್ತು ವ್ಯಾಗನ್ ಆರ್ ನಡುವೆ ಸಿಲುಕಿಕೊಂಡು ಮೃತಪಟ್ಟಿದ್ದಾರೆ. ಕಾರು ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಕುಡಿದು ವಾಹನ ಚಲಾಯಿಸಿದ್ದ ಪೊಲೀಸ್‌ ಅಧಿಕಾರಿ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *