ಅಕ್ರಮ ಸಂಬಂಧ ತಂದಿಟ್ಟ ಆಪತ್ತು: ಅಪಾರ್ಟ್ಮೆಂಟ್ನಿಂದ ಬಿದ್ದು ಹುವಾಂಗ್ ಮಾವೋ ಸಾ*ವು

ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಫಿಟ್ನೆಸ್ ಟ್ರೈನರ್ ಒಬ್ಬರು, ಆಕೆಯ ಪತಿಗೆ ಸಿಕ್ಕಿಬೀಳುವ ಭಯದಿಂದ ತಪ್ಪಿಸಿಕೊಳ್ಳಲು ಹೋಗಿ ಬಿಲ್ಡಿಂಗ್ನಿಂದ ಬಿದ್ದು ಜಾಗದಲ್ಲೇ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಮೃತನನ್ನು ಹುವಾಂಗ್ ಮಾವೋ ಎಂದು ಗುರುತಿಸಲಾಗಿದೆ. ಈತ ಮಹಿಳೆಯ ಮನೆಯಲ್ಲಿದ್ದಾಗ ಆಕೆಯ ಪತಿ ದಿಢೀರನೆ ಮನೆಗೆ ಬಂದಿದ್ದಾನೆ. ಇದರಿಂದ ತೀವ್ರ ಆತಂಕಕ್ಕೊಳಗಾದ ಟ್ರೈನರ್, ಪತಿಯ ಕಣ್ಣಿಗೆ ಬೀಳದಂತೆ ಅಡಗಿಕೊಳ್ಳಲು ಅಪಾರ್ಟ್ಮೆಂಟ್ನ ಕಿಟಕಿಯ ಹೊರಭಾಗದ ಸನ್ಶೇಡ್ ಅಂಚಿನ ಮೇಲೆ ಕುಳಿತುಕೊಳ್ಳಲು ಯತ್ನಿಸಿದ್ದಾನೆ. ಆದರೆ, ಆ ತೀವ್ರ ಗಾಬರಿ ಹಾಗೂ ಗಲಿಬಿಲಿಯಲ್ಲಿ ಸಮತೋಲನ ತಪ್ಪಿ ಹಲವು ಮಹಡಿಗಳ ಮೇಲಿಂದ ನೇರವಾಗಿ ಕೆಳಗೆ ಬಿದ್ದಿದ್ದಾನೆ. ಭೀಕರ ಶಬ್ದ ಮತ್ತು ಕಿರುಚಾಟ ಕೇಳಿ ಸ್ಥಳೀಯರು ತಕ್ಷಣವೇ ತುರ್ತು ರಕ್ಷಣಾ ಸೇವೆಗೆ ಕರೆ ಮಾಡಿದ್ದಾರಾದರೂ, ಸಿಬ್ಬಂದಿ ಸ್ಥಳಕ್ಕೆ ಧಾವಿಸುವಷ್ಟರಲ್ಲೇ ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗಳಿಂದಾಗಿ ಆತ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಸದ್ಯಕ್ಕೆ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಅಧಿಕಾರಿಗಳು ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ, ಯುವಕ ಕಿಟಕಿಯಿಂದ ನೇತಾಡುತ್ತಾ ಪ್ರಾಣ ಉಳಿಸಿಕೊಳ್ಳಲು ಒದ್ದಾಡುವ ಮತ್ತು ನಿಯಂತ್ರಣ ತಪ್ಪಿ ಕೆಳಗೆ ಬೀಳುವ ಭೀಕರ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
