Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಟ್ರಾಫಿಕ್‌ನಲ್ಲಿ ಕುಳಿತು ಉಗುರು ತೆಗೆಯುವ ಮುನ್ನ ಎಚ್ಚರ: ಆಟೋ ಚಾಲಕನ ಶಿಸ್ತಿನ ನಡೆಯ ವಿಡಿಯೋ ವೈರಲ್

Spread the love

ಬೆಂಗಳೂರಿನಲ್ಲಿ ಆಟೋದಲ್ಲಿ ಪ್ರಯಾಣಿಕರೊಬ್ಬರು ಗಲೀಜು ಮಾಡಿದ್ದಕ್ಕೆ ಚಾಲಕ ಗರಂ ಆಗಿದ್ದಾರೆ. ಪ್ರಯಾಣಿಕನನ್ನು ವಾಪಸ್ ಕರೆದು, ಅವರಿಂದಲೇ ಆಟೋವನ್ನು ಕ್ಲೀನ್ ಮಾಡಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.ಆಟೋ ಚಾಲಕರೊಬ್ಬರ ನಡೆಯೊಂದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ರೂಪದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಹಾಗಾದ್ರೆ ಈ ವಿಡಿಯೋದಲ್ಲಿ ಏನಿದೆ ಎಂಬುದನ್ನು ನೋಡೋಣ ಬನ್ನಿ.ಮಹಾನಗರಗಳಲ್ಲಿ ಯಾರ ಬಳಿಯೂ ಸಮಯ ಇರಲ್ಲ. ಅದರಲ್ಲೂ ಪೀಕ್ ಅವರ್‌ನಲ್ಲಿ ಕೆಲಸಕ್ಕೆ ಹೋಗಬೇಕಾದ್ರೆ ಕನಿಷ್ಠ 30 ನಿಮಿಷವನ್ನು ಬೆಂಗಳೂರು ಟ್ರಾಫಿಕ್ ಕಬಳಿಸುತ್ತದೆ. ಹಾಗಾಗಿ ಬೆಂಗಳೂರಿನ ಜನರು ಮಾರ್ಗಮಧ್ಯೆಯೇ ತಿಂಡಿ ತಿನ್ನೋದು, ಕೂದಲು ಸರಿ ಮಾಡಿಕೊಳ್ಳುವುದನ್ನು ಮಾಡುತ್ತಿರುತ್ತಾರೆ. ಆಟೋದಲ್ಲಿ ಪ್ರಯಾಣಿಕರೊಬ್ಬರು ಉಗರು ಕತ್ತರಿಸಿಕೊಂಡಿದ್ದಕ್ಕೆ ಚಾಲಕ ಗರಂ ಆಗಿದ್ದಾರೆ.Jay Ram Rocky ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಗ್ರಾಹಕರು ಇಳಿದು ಹೋಗ್ತಿದ್ದಂತೆ ಚಾಲಕ ಹಿಂದಿನ ಸೀಟ್ ನೋಡುತ್ತಾರೆ. ಕೂಡಲೇ ಗ್ರಾಹಕರನ್ನು ಕರೆದು ಕ್ಲೀನ್ ಮಾಡುವಂತೆ ಹೇಳುತ್ತಾರೆ. ಗ್ರಾಹಕ ಮರು ಮಾತನಾಡದೇ ಕ್ಲೀನ್ ಮಾಡಿ ಅಲ್ಲಿಂದ ತೆರಳುತ್ತಾರೆ. ನಂತರ ಚಾಲಕ ಆಗಿದ್ದೇನು ಎಂಬುದನ್ನು ವಿವರಿಸುತ್ತಾರೆ.ಮಕ್ಕಳು ಸೇರಿದಂತೆ ಎಲ್ಲಾ ಜನರು ಟ್ರಾವೆಲ್ ಮಾಡ್ತಾರೆ ಅಂತ ಬೆಳಗ್ಗೆಯೇ ಆಟೋ ಕ್ಲೀನ್ ಮಾಡಿಕೊಂಡು ಬಂದಿರುತ್ತೇವೆ. ಉಗುರ ಕಟ್ ಮಾಡಿ ಎಲ್ಲಾ ಸೀಟ್ ಮೇಲೆ, ಕೆಳಗಡೆ ಹಾಕಿದ್ದಾರೆ. ಪ್ರಯಾಣ ಮಾಡುವಾಗ ಕಾಮನ್‌ಸೆನ್ಸ್ ಇರಬೇಕು. ಆಟೋ ಕ್ಲೀನ್ ಮಾಡಿಕೊಂಡು ಬರೋದು ನಿಮಗಾಗಿ. ಹಾಗಾಗಿ ಗ್ರಾಹಕರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳುತ್ತಾರೆ.ಈ ವಿಡಿಯೋ ನೋಡಿದ ನೆಟ್ಟಿಗರು ಪರ-ವಿರೋಧವಾಗಿ ಪ್ರತಿಕ್ರಿಯಿಸಿದ್ದಾರೆ. ನೀವು ಹೇಳಿದ ತಕ್ಷಣ ಅವರು ಕ್ಲೀನ್ ಮಾಡೋಕೆ ಬಂದು, ಮಾಡಿದ್ರು ಸಮಾಧಾನವಾಗಿ ಖುಷಿಯಿಂದ ಹೇಳಬಹುದಿತ್ತು. ಅದಕ್ಕೆ ಯಾಕೆ ಹೀಗೆ ಮುಖ ಮಾಡಿಕೊಂಡಿದ್ದಿಯಾ ಎಂದು ಪ್ರಶ್ನೆ ಮಾಡಿದ್ದಾರೆ. ನಿಮ್ಮಗಳ ಕಾಮನ್ ಸೆನ್ಸ್ ಎಲ್ಲರಿಗೂ ಚನ್ನಾಗಿ ಗೊತ್ತಿದೆ. ಮೊದಲು ನೀವುಗಳು ಮೊದಲು ಕಾಮನ್ ಸೆನ್ಸ್ ಕಲೀರಿ ಎಂದಿದ್ದಾರೆ. ಪ್ರಕಾಶ್ ಎಂಬವರು ಕಮೆಂಟ್ ಮಾಡಿ, ಬಿಟ್ರೆ ಕೆಲವರು ಹೇತುಬಿಟ್ಟೆ ಹೋಗ್ತಾರೆ, ಅಷ್ಟಕ್ಕೂ ಲಕ್ಷ್ಮಿಯಂತ ವಾಹನದಲ್ಲಿ ಉಗುರು ಕಟ್ ಮಾಡೋಕೆ ಬಿಡಬೇಡಿ ಎಂದು ಹೇಳಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *